PLEASE LOGIN TO KANNADANET.COM FOR REGULAR NEWS-UPDATES

 ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ಜಾತ್ರಾ ಕಾರ್ಯಕ್ರಮಗಳು ಮೇ. ೦೫ ರಿಂದ ಪ್ರಾರಂಭವಾಗಲಿದೆ ಎಂದು ಹುಲಿಗೆಮ್ಮ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್. ಚಂದ್ರಮೌಳಿ ತಿಳಿಸಿದ್ದಾರೆ.
  ಹುಲಿಗೆಮ್ಮ ದೇವಿ ಜಾತ್ರೆ ಅಂಗವಾಗಿ ಮೇ.೦೫ ರಿಂದ ಮೇ.೧೫ ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಮೇ.೦೫ ರಂದು ಕಂಕಣಧಾರಣ, ಮೇ. ೧೧ ರಂದು ಸಂಜೆ ೭.೦೦ ಗಂಟೆಗೆ ಉತ್ಸವ, ಮೇ. ೧೨ ರಂದು ಅಕ್ಕಿಪಡಿ ಹಾಗೂ ಅಂದು ಸಂಜೆ ೫-೩೦ ಗಂಟೆಗೆ ಮಹಾರಥೋತ್ಸವ ಜರುಗಲಿದೆ. ಮೇ.೧೩ ರಂದು ಬಾಳಿದಂಡಿಗೆ, ಕೊಂಡದ ಪೂಜಾ, ಗಂಗಾದೇವಿ ಪೂಜಾ, ಶ್ರೀದೇವಿಗೆ ಪ್ರಸಾದ ಕಟ್ಟುವುದು, ಬಾಳಿದಂಡಿಗೆ ಆರೋಹಣ, ಮೇ.೧೪ ರಂದು ಪಾಯಸ ಅಗ್ನಿಕುಂಡ, ಕೊಂಡದ ಪೂಜಾ, ಹಿಡಿದಕ್ಷಿಣೆ ವಿತರಣೆ, ಶ್ರೀದೇವಿಗೆ ಪ್ರಸಾದ ನಿವೇದನೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಮೇ.೧೫ ರಂದು ಬೆಳಿಗ್ಗೆ ೬.೩೦ ಗಂಟೆಗೆ ಅಗ್ನಿಕುಂಡ ಜರುಗಲಿದೆ.   
         ಹುಲಿಗೆಮ್ಮ ದೇವಿಗೆ ಮುಡುಪು, ಬೆಳ್ಳಿ, ಬಂಗಾರ ಇತ್ಯಾದಿ ಕಾಣಿಕೆಗಳನ್ನು ಸಲ್ಲಿಸಬಯಸುವ ಭಕ್ತಾದಿಗಳು, ಹುಲಿಗಿಯಲ್ಲಿನ ದೇವಸ್ಥಾನದ ಕಚೇರಿಯಲ್ಲಿ ಕೊಟ್ಟು ರಶೀದಿ ಪಡೆಯಬೇಕು.  ಜಾತ್ರೆಯ ಸಂದರ್ಭದಲ್ಲಿ ಯಾವುದೇ ಪ್ರಾಣಿಬಲಿ ನೀಡುವುದನ್ನು ನಿಷೇಧಿಸಲಾಗಿದ್ದು, ಉಲ್ಲಂಘಿಸುವವರನ್ನು ಶಿಕ್ಷೆಗೆ ಗುರಿಪಡಿಸಲಾಗುವುದು. ಜಾತ್ರೆಗೆ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ಕೊಪ್ಪಳ, ಗಂಗಾವತಿ ಹಾಗೂ ಹೊಸಪೇಟೆಯಿಂದ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಶ್ರ್ರೀ ಹುಲಿಗೆಮ್ಮ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್. ಚಂದ್ರಮೌಳಿ  ತಿಳಿಸಿದ್ದಾರೆ.

Advertisement

0 comments:

Post a Comment

 
Top