ನಗರದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘವು ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಪ್ರಯುಕ್ತ ಕಟ್ಟಡ ಕಾರ್ಮಿಕ ಕಾನೂನು ಅರಿವು ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ದೇಶವನ್ನು ಕಟ್ಟುವವರು ಕಾರ್ಮಿಕರಾಗಿದ್ದು, ಅವರ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ ಹೋರಾಟದ ಫಲವಾಗಿ ಕಾರ್ಮಿಕರಿಗೆ ಶಾಸನ ಬದ್ದ ಸೌಲಭ್ಯ ನೀಡಲು ಸಂವಿಧಾನದಲ್ಲಿ ಅವಕಾಶ ಕಲ್ಪಿಸಲಾಗಿದೆ, ಪ್ರತಿಯೊಬ್ಬ ಗುತ್ತಿಗೆದಾರರು ಮತ್ತು ಮಾಲೀಕರು ೮ ತಾಸುಗಳ ಮಾತ್ರ ಕಾರ್ಮಿಕರನ್ನು ದುಡಿಸಿಕೊಳ್ಳಬೇಕು. ಆಕ್ಮಸಿಕವಾಗಿ ಹೆಚ್ಚಿನ ಸಮಯವನ್ನು ತೆಗೆದುಕೊಂಡು ಕಾರ್ಯನಿರ್ವಹಿಸಿಕೊಂಡರೆ ಅವರಿಗೆ ಹೆಚ್ಚಿನ ಕೂಲಿಯನ್ನು ನೀಡಬೇಕು. ಇಲ್ಲವಾದರೆ, ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದೆ, ಇದರ ಪ್ರಯೋಜನವನ್ನು ಎಲ್ಲಾ ಕಾರ್ಮಿಕರು ಪಡೆದುಕೊಳ್ಳಬೇಕು ಎಂದ ಅವರು ಅಸಂಘಟಿತ ಮತ್ತು ಸಂಘಟಿತ ಕಾರ್ಮಿಕರು ಕಾರ್ಮಿಕ ಇಲಾಖೆಯಲ್ಲಿ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಂಡು ವಿಮೆ ಪಡೆದು ಸರ್ಕಾರವು ನೀಡುವ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದರು. ವಕೀಲ ಎ.ಕರುಣಾನಿಧಿ ಮಾತನಾಡಿ ಕಾರ್ಮಿಕರ ಹೋರಾಟದ ಫಲದಿಂದ ಇಂದು ಕಾರ್ಮಿಕರಿಗೆ ಕೆಲ ಸೌಲಭ್ಯಗಳು ದೊರೆತಿರುವುದು ನಿಜ. ಆದರೆ ಅವುಗಳು ಅನುಷ್ಟಾನವಾಗುತ್ತಿಲ್ಲ, ಗುತ್ತಿಗೆದಾರರು ಮತ್ತು ಮಾಲೀಕರು ಕಾರ್ಮಿಕರನ್ನು ಕಾನೂನು ಚೌಕಟ್ಟಿನಲ್ಲಿ ದುಡಿಸಿಕೊಳ್ಳುತ್ತಿಲ್ಲ, ಅವರಿಗೆ ಇಎಸ್‌ಐ ಮತ್ತು ಪಿಎಫ್‌ನ್ನು ಕಟ್ಟುತ್ತಿಲ್ಲ, ಇದರಿಂದ ಕಾರ್ಮಿಕರು ತಮ್ಮ ನಿವೃತ್ತಿ ದಿನಗಳಲ್ಲಿ ಬರಿಗೈಯಲ್ಲಿ ತೆರಳುವಂತಹ ಸ್ಥಿತಿ ಎದುರಾಗಿದೆ. ಹಾಗಾಗಿ ಗುತ್ತಿಗೆದಾರರು ಕಾರ್ಮಿಕರ ಖಾತೆಗೆ ಇಎಸ್‌ಐ ಮತ್ತು ಪಿಎಫ್ ಹಣವನ್ನು ಪಾವತಿ ಮಾಡಬೇಕು ಇದಕ್ಕೆ ಸರ್ಕಾರವು ಹಣ ಸೇರಿಸಿ ೬೦ ವರ್ಷಗಳ ನಂತರ ಮಾಶಾಸನವನ್ನು ಕೊಡಲು ಸಾಧ್ಯವಾಗುತ್ತದೆ ಎಂದ ಅವರು ಕಾರ್ಮಿಕ ಕಲ್ಯಾಣ ಮಂಡಳಿ ಆರಂಭವಾಗಿರುವುದು ಹೋರಾಟದ ಪ್ರತಿಫಲವಾಗಿದೆ. ಆದರೆ ಮಂಡಳಿಗೆ ಸದಸ್ಯರನ್ನಾಗಿ ಮಾಡಿಕೊಳ್ಳುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯೆ ವಹಿಸುತ್ತಿದ್ದಾರೆ ಸರಿಯಾಗಿ ಮಾಹಿತಿ ನೀಡಿ ಕಾರ್ಮಿಕರನ್ನು ಸದಸ್ಯತ್ವಗೊಳಿಸಿ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ನೀಡಬೇಕು ಎಂದರು. ಕಾರ್ಮಿಕ ನಿರೀಕ್ಷ ಎಂ.ರವೀದಾಸ್ ಮಾತನಾಡಿ ೨೦೦೭ರಲ್ಲಿ ಕಾರ್ಮಿಕ ಮಂಡಳಿಯನ್ನು ರಚಿಸಿದ್ದು, ೮ಲಕ್ಷ ಕಾರ್ಮಿಕರನ್ನು ಈಗಾಗಲೇ ನೊಂದಾವಣಿ ಮಾಡಿಕೊಂಡು ೩ ಕೋಟಿ ರೂ.ಗಳನ್ನು ಕಾರ್ಮಿಕರಿಗೆ ವಿವಿಧ ಯೋಜನೆಯಡಿ ನೀಡಲಾಗಿದೆ. ೧೮ರಿಂದ ೬೦ ವರ್ಷದೊಳಗಿನ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಕಲ್ಯಾಣ ಮಂಡಳಿಗೆ ಸದಸ್ಯರಾದರೆ, ೨ ಲಕ್ಷ ಅಪಘಾತ ವಿಮೆ ದೊರೆಯಲಿದ್ದು, ಹೃದಯರೋಗ, ಕಿಡ್ನಿ ಜೋಡಣೆ, ಕ್ಯಾನ್ಸ್‌ರ್, ಶಸ್ತ್ರಚಿಕಿತ್ಸೆಗೆ ಒಳಗಾದ ಕಾರ್ಮಿಕರಿಗೆ ಇಲಾಖೆಯು ಖರ್ಚಿನ ವೆಚ್ಚವನ್ನು ಭರಿಸಲಿದೆ ೫ ವರ್ಷ ಸದಸ್ಯತ್ವ ಹೊಂದಿದ ಕಾರ್ಮಿಕರಿಗೆ ೬೦ ವರ್ಷ ನಂತರ ೫೦೦ ಪಿಂಚಣಿ, ನೀಡುವುದರ ಜೊತೆಗೆ ೫೦೦೦ರೂ.ಗಳನ್ನು ದನಸಹಾಯವನ್ನು ನೀಡಲಾಗುತ್ತದೆ. ಮಹಿಳೆಯರಿಗೆ ಹೆರಿಗಾಗಿ ೧೫೦೦೦ ರೂ. ನೀಡಲಿದ್ದು, ವಿವಾಹವಾದ ಮಹಿಳೆಯರಿಗೆ ೫೦ ಸಾವಿರ ರೂ.ಗಳನ್ನು ನೀಡಲಿದೆ. ೫ರಿಂದ ೭ನೇ ತರಗತಿಯಲ್ಲಿ ಓದುವ ಕಾರ್ಮಿಕರ ಮಕ್ಕಳಿಗೆ ಪ್ರತಿವರ್ಷ ೨೦೦೦ ರೂ.ಗಳನ್ನು ನೀಡಿದರೆ, ೮ ಮತ್ತು ೯ನೇ ತರಗತಿಯಲ್ಲಿ ಓದುವ ಮಕ್ಕಳಿಗೆ ಪ್ರತಿವರ್ಷ ೩೦೦೦ರೂ.ಗಳನ್ನು ನೀಡುತ್ತಿದ್ದು, ಎಸ್‌ಎಸ್‌ಎಲ್‌ಸಿ ವಿದ್ಯಾಥಿಗಳಿಗೆ ೫ ಸಾವಿರ, ಪ್ರಥಮ ಮತ್ತು ದ್ವೀತಿಯ ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ೫೦೦೦ ರೂ. ಸ್ನಾತಕೋತ್ತರ ಪದವೀ ಓದುತ್ತಿರುವ ಪ್ರತಿಕಾರ್ಮಿಕರ ಮಕ್ಕಳಿಗೆ ೧೫೦೦೦ರೂಪಾಯಿಗಳನ್ನು ನೀಡಲಾಗುತ್ತದೆ ಹಾಗಾಗಿ ಪ್ರತಿಯೊಬ್ಬ ಕಾರ್ಮಿಕರು ಕೂಡಲೇ ತಮ್ಮ ಸದಸ್ಯತ್ವವನ್ನು ಪಡೆದುಕೊಳ್ಳಬೇಕು ಎಂದರು.ಇದೇ ಸಂದರ್ಭದಲ್ಲಿ ನೂರಾರು ಕಾರ್ಮಿಕರಿಗೆ ನ್ಯಾಯಾಧೀಶರಾದ ಕೆ.ನಾರಾಯಣ ಪ್ರಸಾದ್, ಕೆ.ಪಿ.ಮಂಜುನಾಥ ಅವರು ಕಾರ್ಮಿಕರ ಗುರುತಿನ ಚೀಟಿಯನ್ನು ವಿತರಿಸಿದರು. ಈರಣ್ಣ ಪ್ರಾರ್ಥಸಿದರು. ವಕೀಲ ಶರಣಪ್ಪ ನಿರೂಪಿಸಿದರು. ವೇದಿಕೆಯಲ್ಲಿ ಎಂ.ಸುದರ್ಶನ, ಬಸವರಾಜ್, ವಕೀಲರ ಸಂಘದ ಕಾರ್ಯದರ್ಶಿ ಕೆ.ರಾಮಪ್ಪ,ನ್ಯಾಯಾಧೀಶರಾದ ಕೆ.ಪಿ.ಮಂಜುನಾಥ ಹಾಜರಿದ್ದರು. ಕೆ.ಅಂಬಣ್ಣ ವಂದಿಸಿದರು.
Home
»
Bellary News
»
hospet News
»
Koppal News
» ಕಾರ್ಮಿಕರಿಗೆ ಮೂಲಭೂತ ಸೌಲಭ್ಯಗಳನ್ನು ನೀಡಿ - ನ್ಯಾಯಾಧೀಶ ಕೆ.ನಾರಾಯಣ ಪ್ರಸಾದ್
Advertisement
Subscribe to:
Post Comments (Atom)
0 comments:
Post a Comment