ಹೊಸಪೇಟೆ: ಪಾದಗಟ್ಟಿ ಆಂಜನೇಯ ದೇವಸ್ಥಾನದಿಂದ ದೊಡ್ಡಮಸೀದಿ, ಉದ್ಯೋಗ ಪೆಟ್ರೂಲ್ ಬಂಕ್‌ವರೆಗೆ ರಸ್ತೆ ಅಗಲೀಕರಣ ಮೊದಲು ನಡೆಸಬೇಕು ಎಂದು ಆಗ್ರಹಿಸಿ ವಿಜಯನಗರ ರಕ್ಷಣಾ ವೇದಿಕೆಯು ಶುಕ್ರವಾರ ನಗರಸಭೆಯ ಮುಂದೆ ಪ್ರತಿಭಟನೆ ನಡೆಸಿತು.
ಈ ಪ್ರತಿಭಟನೆಯಲ್ಲಿ ವೇದಿಕೆಯ ಗೌರವಾಧ್ಯಕ್ಷ ಕಟಗಿ ಜಂಬಯ್ಯ ನಾಯಕ ಮಾತನಾಡಿ, ರಸ್ತೆ ಅಗಲೀಕರಣ ನೆಪದಲ್ಲಿ ತಾರತಮ್ಯ ನಡೆಸಲಾಗುತ್ತಿದ್ದು, ನಗರದ ಮೇನ್ ಬಜಾರ್ ರಸ್ತೆ ಅಗಲೀಕರಣದ ಜೊತೆಯುಲ್ಲಿ ಪಾದಗಟ್ಟಿ ಆಂಜನೇಯ ದೇವಸ್ಥಾನದಿಂದ ದೊಡ್ಡ ಮಸೀದಿ, ಉದ್ಯೋಗ ಪೆಟ್ರೂಲ್ ಬಂಕ್‌ವರೆಗೆ ರಸ್ತೆ ಅಗಲೀಕರಣದ ಮಾರ್ಕು ಮಾಡಿ, ಯಾವುದೇ ಕಾಮಗಾರಿ ಕೈಗೊಂಡಿಲ್ಲ. ಈಗ ವಾಲ್ಮೀಕಿ ವೃತ್ತದಿಂದ ರಾಮಾಟಾಕೀಸ್‌ವೃತ್ತದವರೆಗೆ ರಸ್ತೆ ಅಗಲೀಕರಣ ನಡೆಸಲು ಮುಂದಾಗಿರುವುದು ತಾರತಮ್ಯ ನೀತಿಯಾಗಿದೆ. ರಸ್ತೆ ಅಗಲೀಕರಣವನ್ನು ದಗಟ್ಟಿ ಆಂಜನೇಯ ದೇವಸ್ಥಾನದಿಂದ ದೊಡ್ಡ ಮಸೀದಿ, ಉದ್ಯೋಗ ಪೆಟ್ರೂಲ್ ಬಂಕ್‌ವರೆಗೆ ಮೊದಲು ನಡೆಸಬೇಕು. ಇಲ್ಲವಾದರೆ ಕಾಮಗಾರಿ ವಿರೋಧಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಆಗ್ರಹಿಸಿದರು.
ಈ ಪ್ರತಿಭಟನೆಯ ನೇತೃತ್ವವನ್ನು ಅಧ್ಯಕ್ಷ ಕೆ.ರಾಮಪ್ಪ ಮುಖಂಡರಾದ ಜಿ. ಹನುಮಂತಪ್ಪ, ಬಿ.ಶ್ರೀನಿವಾಸ, ಎಲ್. ಭೀಮೇಶ್, ಕೆ.ಶ್ರೀನಿವಾಸ, ವಿ.ಎನ್. ಹುಲುಗಪ್ಪ, ಜಿ.ಬಿ.ತಿಮ್ಮಪ್ಪ, ಬಿ.ಭಾಷಾ, ಕೆ.ಕೇಶವ, ಸುನೀಲ್, ಎಚ್. ಹೊನ್ನೂರಪ್ಪ ಮತ್ತಿತರರು ವಹಿಸಿದ್ದರು.
0 comments:
Post a Comment