PLEASE LOGIN TO KANNADANET.COM FOR REGULAR NEWS-UPDATES

ಹೊಸಪೇಟೆ: ಮೂರು ದಿನಗಳ ಕಾಲ ನಿರಂತರ ಸುರಿದ ಅಕಾಲಿಕ ಮಳೆಯಿಂದ ತಾಲೂಕಿನ ಸುಗ್ಗೇನಹಳ್ಳಿ, ಸೋಮಲಾಪುರ, ಜೀರಿಗನೂರು, ಗೋನಾಳು, ಗ್ರಾಮಗಳಲ್ಲಿ, ಭತ್ತದ ಬೆಳೆ ಸಂಪೂರ್ಣ ಹಾನಿಗೊಳಗಾಗಿದ್ದು, ರೈತರು ತೀವ್ರ ನಷ್ಠ ಅನುಭವಿಸಿದ್ದಾರೆ. ಈ ರೈತರಿಗೆ ತಕ್ಷಣ ಪರಿಹಾರ ಒದಗಿಸಬೇಕೆಂದು ರಿಪಬ್ಲಿಕನ್ ಸೇನಾ ತಾಲೂಕು ಸಮಿತಿಯು ಆಗ್ರಹಿಸಿದೆ.  
ಭತ್ತದ ಬೆಳೆ ಕಟಾವ್‌ಗೆ ರೆಡಿಯಾಗಿದ್ದು, ಇನ್ನೇನು ಕೇವಲ ವಾರದಲ್ಲೇ ಬೆಳೆದ ಭತ್ತ ಮನೆ ಸೇರುತ್ತದೆಂಬ ಸಂತಸದಲ್ಲಿದ್ದ ರೈತರಿಗೆ ದುರಂತವೆಂಬಂತೆ ಗಾಳಿ, ಮಳೆಯಿಂದ ಭತ್ತ ನೆಲಕ್ಕುರಳಿ ಅನೇಕ ರೈತರು ಸಂಪೂರ್ಣ ನಷ್ಟ ಹೊಂದಿದ್ದಾರೆ. ಮತ್ತು ಅಲ್ಲಿನ ಪ್ರತಿ ರೈತರು ಒಂದು ಎಕರೆಗೆ ೩೦ ಸಾವಿರದವರೆಗೆ ಖರ್ಚು ಮಾಡಿರುತ್ತಾರೆ. ಇದನ್ನು ಸಾಲದ ರೂಪದಲ್ಲಿ ತರಲಾಗಿದ್ದರಿಂದ, ರೈತರು ಕಂಗಾಲಾಗಿದ್ದಾರೆ. 
ಮಳೆಯಿಂದ ತುತ್ತಾದ ಗ್ರಾಮಗಳ ರೈತರ ಗದ್ದೆಗಳಿಗೆ ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಗ್ರಾಮ ಲೆಕ್ಕಾಧಿಕಾರಿಗಳು ಪ್ರತ್ಯೇಕ ಬೇಟಿ ನೀಡಿ ಸಮೀಕ್ಷೆ ನಡೆಸಿದ್ದಾರೆ. ಹಾಗೆ, ಅಲ್ಲಿನ ರೈತರಿಗೆ ನೆಲಕ್ಕುರುಳಿದ ಗದ್ದೆಯ ಭತ್ತದ ಭಾವಚಿತ್ರ ಮತ್ತು ಫಲಾನುಭವಿಗಳ ಭಾವ ಚಿತ್ರದೊಂದಿಗೆ ಗದ್ದೆಯ ಪಹಣಿಯೊಂದಿಗೆ ತಹಶೀಲ್ದಾರರ ಕಛೇರಿಗೆ ಅರ್ಜಿ ಸಲ್ಲಿಸಲು ತಿಳಿಸಿದ್ದರು. ಅವರ ಹೇಳಿಕೆಯಂತೆ ರೈತರು ಅರ್ಜಿ ಸಲ್ಲಿಸಿ ಸುಮಾರು ೩ತಿಂಗಳು ಕಳೆದಿವೆ. ನಷ್ಟ ಹೊಂದಿದ ರೈತರಿಗೆ ಇನ್ನೂ ಯಾವುದೇ ರೀತಿಯ ಪರಿಹಾರ ದೊರಕಿಲ್ಲ. ಸಾಲ ಮಾಡಿ ಬೆಳೆದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ದೇಶದ ಬೆನ್ನೆಲುಬಾಗಿರುವ ರೈತರ ಬಗ್ಗೆ ಈ ರೀತಿ ನಿರ್ಲಕ್ಷ ತೋರುವುದು ಸಮಂಜಸವಲ್ಲ. ಕೂಡಲೇ ಸರ್ಕಾರ ಎಚ್ಚತ್ತುಕೊಂಡು ಅಕಾಲಿಕ ಮಳೆಯಿಂದಾದ ಬೆಳೆ ಹಾ
ನಿಗೆ ಶೀಘ್ರವಾಗಿ ಪರಿಹಾರ ಕಲ್ಪಿಸಬೇಕೆಂದು ಜಿಲ್ಲಾ ಉಸ್ತುವಾರಿ ಬಿ.ಎಸ್. ಪ್ರಸನ್ನ ಕುಮಾರ್, ಜಿಲ್ಲಾಧ್ಯಕ್ಷ ಭಾವೈಕ್ಯ ವೆಂಕಟೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಲಕ್ಕಿ ಫೃಥ್ವಿರಾಜ್, ಜಿಲ್ಲಾ ಉಪಾಧ್ಯಕ್ಷ ಆರ್. ರಾಮ್ಜಿ ನಾಯಕ, ತಾಲೂಕು ಅಧ್ಯಕ್ಷ ವೆಂಕಟೇಶ್ ಎಸ್., ಉಪಾಧ್ಯಕ್ಷ ವೆಂಕಟೇಶಲು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿ. ಗಾಳೆಪ್ಪ ಆಗ್ರಹಿಸಿದ್ದಾರೆ.

Advertisement

0 comments:

Post a Comment

 
Top