ಹೊಸಪೇಟೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ವಿಶೇಷ ಘಟಕ ಯೋಜನೆಯಡಿ ಇದೇ ದಿ.೨ರಂದು ನಗರದಲ್ಲಿ ಜನಪರ ಉತ್ಸವ ನಡೆಸಲಿದೆ.
ತಾಲೂಕು ಕ್ರೀಡಾಂಗಣದಲ್ಲಿ ಅಂದು ಸಂಜೆ ೫ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ ಈ ಜನಪರ ಉತ್ಸವ ಉದ್ಘಾಟಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಆನಂದ್ ಸಿಂಗ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಬಿ.ಶ್ರೀರಾಮುಲು, ಕರಡಿ ಸಂಗಣ್ಣ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಅನಿತಾ ಆನಂದ್, ಶಾಸಕ ಎನ್.ವೈ. ಗೋಪಾಲಕೃಷ್ಣ, ಅನಿಲ್ ಹೆಚ್.ಲಾಡ್, ಟಿ.ಎಚ್.ಸುರೇಶಬಾಬು, ಈ.ತುಕರಾಮ್, ಬಿ.ನಾಗೇಂದ್ರ, ಭೀಮಾನಾಯ್ಕ ಎಲ್.ಬಿ.ಪಿ., ಬಿ.ಎಂ.ನಾಗರಾಜ, ವಿಧಾನ ಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ, ಅಮರನಾಥ ಪಾಟೀಲ್, ಶರಣಪ್ಪ ಮಟ್ಟೂರು, ನಗರಸಭೆ ಅಧ್ಯಕ್ಷೆ ಕಣ್ಣಿ ಉಮಾದೇವಿ ಶ್ರೀಕಂಠ, ವಿಶೇಷ ಅಹ್ವಾನಿತರಾಗಿ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಬಿ.ಮಮತಾ, ತಾಲೂಕು ಪಂಚಾಯ್ತಿ ಅಧ್ಯಕ್ಷೆ ಸುಲೋಚನಮ್ಮ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಲ್.ಸಿದ್ದನಗೌಡ, ನಗರಸಭೆ ಉಪಾಧ್ಯಕ್ಷೆ ಗೌಸಿಯಾಬೇಗಂ, ತಾಲೂಕು ಪಂಚಾಯ್ತಿ ಉಪಾಧ್ಯಕ್ಷೆ ಕೆ. ಆನಂದಮ್ಮ, ಜಿಲ್ಲಾ ಪಂಚಾಯ್ತಿ ಸದಸ್ಯ ಅನ್ನದಾನರೆಡ್ಡಿ ಮೇಟಿ, ಜಿ.ಸುಮಂಗಳಮ್ಮ ಗುಬಾಜಿ, ತಿಪ್ಪಿಬಾಯಿ ಠಾಕ್ರಾನಾಯ್ಕ, ಉಪ ವಿಭಾಗಾಧಿಕಾರಿ ಪವನ್ ಕುಮಾರ್ ಮಾಲಿಪಾಟಿ ಭಾಗವಹಿಸಲಿದ್ದಾರೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ತಿಳಿಸಿದ್ದಾರೆ.
0 comments:
Post a Comment