ಹೊಸಪೇಟೆ: ಪಾಪಿನಾಯಕನಹಳ್ಳಿಯಲ್ಲಿ ಇದೇ ದಿ.೩ರಂದು ಪುಣ್ಯಾನಂದ ಪುರಿ ಮಹಾಸ್ವಾಮೀಜಿಯ ೮ನೇ ಪುಣ್ಯಾರಾಧನೆ ನಡೆಯಲಿದೆ.
ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಹಾಗೂ ಗ್ರಾಮದ ವಾಲ್ಮೀಕಿ ಸಮಾಜದ ಬಂಧುಗಳು ನಡೆಸಲಿರುವ ಈ ಕಾರ್ಯಕ್ರಮವನ್ನು ಸಂಸದ ಬಿ.ಶ್ರೀರಾಮುಲು ಉದ್ಘಾಟಿಸಲಿದ್ದಾರೆ. ಸಂಘದ ನಾಮಫಲಕವನ್ನು ಶಾಸಕ ಆನಂದ್ ಸಿಂಗ್ ಉದ್ಘಾಟಿಸಲಿದ್ದಾರೆ. ಸಮಾರಂಭದ ಸಾನಿಧ್ಯವನ್ನು ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಮಹಸ್ವಾಮಿ ವಹಿಸಲಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಾಲೂಕು ಅಧ್ಯಕ್ಷ ಕಿಚಡಿ ಶ್ರೀನಿವಾಸ ವಹಿಸಲಿದ್ದು, ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದ ಕುಲಸಚಿವ ಡಾ.ರಂಗರಾಜ ವನದುರ್ಗ ಮುಖ್ಯ ಭಾಷಣ ನಡೆಸಿಕೊಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಅನಿತಾ ಆನಂದ್, ನಗರಸಭೆ ಅಧ್ಯಕ್ಷೆ ಕಣ್ಣಿ ಉಮಾದೇವಿ ಶ್ರೀಕಂಠ, ಎಪಿಎಂಸಿ ಅಧ್ಯಕ್ಷ ಬಿ.ಸೋಮಶೇಖರ, ಪಾಪಿನಾಯಕನಹಳ್ಳಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಗಂಗಮ್ಮ ತಿಪ್ಪೇಸ್ವಾಮಿ, ವಾಲ್ಮೀಕಿ ಸಮಾಜದ ಮುಖಂಡ ಜಂಬಾನಹಳ್ಳಿ ವೆಂಕೋಬಣ್ಣ, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಾರಿಹಳ್ಳಿ ವೆಂಕಟೇಶ್,ಜಿಲ್ಲಾ ಪಂಚಾಯ್ತಿ ಸದಸ್ಯ ಅನ್ನದಾನ ರೆಡ್ಡಿ, ತಾಲೂಕು ಪಂಚಾಯ್ತಿ ಸದಸ್ಯ ರಹಮತ ಗೌಡ, ಗ್ರಾಮ ಪಂಚಾಯ್ತಿ ಸದಸ್ಯ ಎನ್.ಗೋಪಾಲ, ಬಿ.ರಾಮು, ಪಿಎಸ್‌ಐ ಹೆಚ್. ಮಹೇಶ ಗೌಡ, ವಾಲ್ಮೀಕಿ ಸಮಾಜದ ಮುಖಂಡ ನಾಯಕರ ಮೆಟ್ನಯ್ಯ, ಜಿಲ್ಲಾ ನಿರ್ದೇಶಕ ಗುಜ್ಜಲ ಶ್ರೀನಿವಾಸ ಭಾಗವಹಿಸಲಿದ್ದಾರೆ. ಅತಿಥಿಗಳಾಗಿ ನಾಡಿಗರ ಹನುಮಂತರೆಡ್ಡಿ, ನೂಕಯ್ಯ, ಗುಜ್ಜಲ ದೇವಪ್ಪ, ಎಂ.ತಿಮ್ಮಪ್ಪ, ಎಂ.ಪಂಪಣ್ಣ, ಎನ್.ಹೊನ್ನೂರಪ್ಪ, ತಳವಾರ ಸಿದ್ದಪ್ಪ, ನಾಯಕರ ಸಿದ್ದಪ್ಪ ಮತ್ತಿತರರು ಹಾಜರಿರುತ್ತಾರೆ.
0 comments:
Post a Comment