PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ: ಭಾರತ ಪ್ರಜಾಸತ್ತಾತ್ಮಕ ಯುವಜನ ಫೇಡರೇಷನ್ ಮತ್ತು ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಸಿ.ಐ.ಟಿ.ಯು ಮತ್ತು ಕರ್ನಾಟಕ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ತಾಲೂಕಾ ಸಮಿತಿಗಳು ಜಂಟಿಯಾಗಿ ದಿನಾಂಕ ೧೨-೦೩-೨೦೧೫ ರಂದು ನಿವೇಶನಕ್ಕೆ ಒತ್ತಾಯಿಸಿ ಧರಣಿ ಹಮ್ಮಿಕೊಂಡಿವೆ. 
ಕೊಪ್ಪಳ ತಾಲೂಕಿನಲ್ಲಿ ಬರುವ ಗ್ರಾಮ ಪಂಚಾಯತಿಗಳಾದ ಹುಲಗಿ, ಭಾಗ್ಯನಗರ, ಮುನಿರಾಬಾದ್, ಶಿವಪುರ, ಅಲ್ಲಾಪೂರ, ಬಿಸರಳ್ಳಿ, ಅಳವಂಡಿ ಕವಲೂರ ಗ್ರಾಮಗಳಲ್ಲಿ ಹೆಚ್ಚಾಗಿ ಪರಿಶಿಷ್ಠ ಜಾತಿಯವರೇ ಹೆಚ್ಚಾಗಿ ವಾಸಿಸುವದರಿಂದ ಅಲ್ಲಿ ಅತೀ ಕಡುಬಡವರು ಆ ಕುಟುಂಬಗಳಲ್ಲಿ ಒಂದು ಕುಟುಂಬದಲ್ಲಿ ಸುಮಾರು ೧೦-೧೫ ಜನ ವಾಸಿಸುತ್ತಾರೆ. ಈ ಕುಟುಂಬಗಳಿಗೆ ಸರಕಾರದ ಯಾವುದೇ ಸೌಲಭ್ಯ  ನೀಡಿರುವುದಿಲ್ಲ. ಎಲ್ಲಾ ಸೌಲಬ್ಯಗಳನ್ನು ರಾಜಕೀಯ ಹಿಂಬಾಲಕರಿಗೆ ನೀಡಿ ಈ ಬಡ ಜನತೆ ಕಡೆಗಣಿಸಿದ್ದಾರೆ. ಆದ ಕಾರಣ ದಿನಾಂಕ ೧೨-೦೩-೨೦೧೫ ರಂದು ಈ ಎಲ್ಲಾ ಗ್ರಾಮ ಫಂಚಾಯತಿಗಳ ಮುಂದೆ ಅನಿರ್ಧಿಷ್ಟಾವಧಿಕಾಲ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ. ಆದ ಕಾರಣ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು ಮತ್ತು ಕಾರ್ಯದರ್ಶಿಗಳು ಗ್ರಾಮ ಪಂಚಾಯತಿಯಲ್ಲಿರಬೇಕು. ಮತ್ತು ಮನೆ ನಿವೇಶನಕ್ಕೆ ಅರ್ಜಿ ಸಲ್ಲಿಸಿರುವ ಫಲಾನುಭವಿಗಳನ್ನು ಗುರುತಿಸಿ ಸರ್ವೆ ಕಾರ್ಯ ಮಾಡಬೇಕು. ಸರ್ವೆ ಮಾಡಿದ ವರದಿಯನ್ನು ಗ್ರಾಮ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆದು ತಾಲೂಕ ಪಂಚಾಯತ್ ಮತ್ತು ಜಿಲ್ಲಾ ಪಂಚಾಯತಗಳಿಗೆ ವರದಿ ಸಲ್ಲಿಸಬೇಕು. ಮತ್ತು ಒಂದು ಪತ್ರ್ರಯನ್ನು ನಮ್ಮ ಸಂಘಟನೆಗೆ ಸಲ್ಲಿಸಬೇಕು. ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡಿ ಕೂಲಿಹಣವನ್ನು ಪಾವತಿ ಮಾಡಬೇಕು. ಮತ್ತು ಕಾಯಕ ಬಂಧುಗಳ ಭತ್ಯೆ ಹಣವನ್ನು ನೀಡಬೇಕು ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೇಡರೇಷನ್ ಮತ್ತು ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಸಿ.ಐ.ಟಿ.ಯು ಮತ್ತು ಕರ್ನಾಟಕ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ತಾಲೂಕಾ ಸಮಿತಿಗಳು ಒತ್ತಾಯಿಸುತ್ತಿವೆ. 

Advertisement

0 comments:

Post a Comment

 
Top