PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳದ ಅಭಿನೇತ್ರಿ ಕಲಾಬಳಗ ಇವರಿಂದ  ನಗರದ ಸಾಹಿತ್ಯಭವನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ದಿನಾಚರಣೆ ಅಂಗವಾಗಿ ಮಹಿಲೇಯರೇ ಅಭಿನಯಿಸಲ್ಪಟ್ಟ ಅಪೂರ್ಣ ನಾಟಕ ಜನಮನ ಸೂರೆಗೊಂಡಿತು. ಅದರಲ್ಲೂ ಮಹಿಳಾ ಪಾತ್ರದಾರಿಗಳು ಪುರುಷರ ಪಾತ್ರದಲ್ಲಿ ಮಿಂಚಿದರು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ವಾಣಿಜ್ಯೋದೋಮಿ  ಶ್ರೀನಿವಾಸ ಗುಪ್ತ ನೆರವೇರಿಸಿದರು. ಸಭಿನೇತ್ರಿ ಕಲಾಬಳಗ ದ ಚಾಲನೆಗೆ ನಗಾರಾಭಿವೃದ್ದಿ ಪ್ರಾಧಿಕಾರದ ಅದ್ಯಕ್ಷ ಸೈಯದ್ ಜುಲ್ಲು ಖಾದ್ರಿ ಚಾಲನೇ ನೀಡಿದರು.
ಶ್ರೀನಿವಾಸ ಗುಪ್ತಾ ಮಾತನಾಡಿ ಮಹಿಳಾ ದಿನಾಚರಣೆಯಂದೇ ಕೊಪ್ಪಳದ ಅಭಿನೇತ್ರಿ ಕಲಾಬಳಗದವರು ಸೇರಿ ನಾಟಕದಲ್ಲಿ ಅಭಿನಯಿಸುತ್ತಿರುವುದು ತುಂಬಾ ಸಂತೋಷವಾಗಿದೆ. ಇಂಥ ಅರ್ಥಪೂರ್ಣ ನಾಟಕದಿಂದ ಸಮಾಜಕ್ಕೆ ಒಂದು ಉತ್ತಮ ಸಂದೇಶ ಹೋಗಲಿ ಎಂದರು. ಸಭಾಂರಂಭದ ಅದ್ಯಕ್ಷತೆ ವಹಿಸಿ ಮಾತನಾಡಿದ ಕಲಾಬಳಗದ ಅದ್ಯಕ್ಷರಾದ ಇಂದಿರಾ ಭಾವಿಕಟ್ಟಿ ಮಾತನಾಡಿ ಕೊಪ್ಪಳದಲ್ಲಿ ಪ್ರಪ್ರಥಮವಾಗಿ ಮಹಿಳೆಯರ ಪುರುಷ ಹಾಗೂ ಸ್ತ್ರಿ ಪಾತ್ರದಲ್ಲಿ ಅಭಿನಯಿಸಿ ವೈಚಾರಿಕಾ ವಿಷಯಗಳನ್ನು ಒಳಗೊಂಡ  ಹತ್ತಿಯವರು ಅಪೊರ್ಣ ನಾಟಕ ಸಾಮಾಜಿಕ ಸಮಸ್ಯೇಗಳಲ್ಲಿ ಸಿಲುಕಿದವರ ಅನುಬವವೇ ಈನಾಟಕದಲ್ಲಿ ಅಡಗಿದೆ. ಕೊಪ್ಪಳದ ಸಹೋದರರಲ್ಲಿದ ಸಹಕಾರದಿಂದಲೇ ನಾವು ಮಹಿಳೆಯರು ಈ ಮಹಿಳಾ ನಾಟಕ ನಡೆಸಲು ಪ್ರೋತ್ಸಾಹ ಸಿಕ್ಕದ್ದು ಮಹಿಳಾ ದಿನಾಚರಣೆಯ ನಿಮಿತ್ತ ವಿನೂತನವಾದ ಈ ಕೊಡುಗೆಯನ್ನು ಸಮಾಜಕ್ಕೆ ನೀಡುತ್ತಿದ್ದೇವೆ ಎಂದರು. 
ಸಮಾರಂಭದಲ್ಲಿ ನಗರಸಭೆ ಅದ್ಯಕ್ಷ ಬಸಮ್ಮ ಹಳ್ಳಿಗುಡಿ, ಉಪಾದ್ಯಕ್ಷ ಬಾಳಪ್ಪ ಬಾರಕೇರ, ವಕೀಲರು ಸಂಘದ ಅದ್ಯಕ್ಷರಾದ ರಾಘವೇಂದ್ರ ಪಾನಗಂಟಿ, ರೋಟಕ್ಲಬಾಳ ಕರ್ಯದರ್ಶಿ ಶ್ರೀನಿವಾಸ ಹ್ಯಾಟಿ, ಕೆ.ಎಮ್. ಸೈಯದ್, ಕಲಾವಿದ ಸಂಭದ ಅದ್ಯಕ್ಷರಾದ ಕೊಟ್ರಯ್ಯ ಸ್ವಾಮಿ ಅಲ್ಲಮ ಪ್ರಭು ಬೆಟ್ಟದೂರು ,  ಎಮ್,ಎಸ್, ಪಾಟೀಲ್, ಸಿದ್ದಲಿಂಗ ಸ್ವಾಮಿ ಹಿರೇಮಠ, ಯಹಾರಿಕೇರ್ ಮಲ್ಲನಗೌಡರ್, ಜಿ,ಎಸ್,ಗೋನಾಳ ,ಹಾಗೂ ಇತರರುಪಾಲ್ಗೋಂಡಿದ್ದರು .  

Advertisement

0 comments:

Post a Comment

 
Top