ಕೊಪ್ಪಳ:ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೆ ಶಿಕ್ಷಣದ ಅಗತ್ಯವಿದೆ ಎಂದು ನಗರಸಭೆಯ ಉಪಾಧ್ಯಕ್ಷರಾದ ಬಾಳಪ್ಪ ಬಾರಕೇರ ಹೇಳಿದರು.ನಗರದ ಸಿ.ಪಿ.ಎಸ್.ಶಾಲೆಯಲ್ಲಿ ಹಮ್ಮಿಕೊಂಡಿದ್ದ ೮೪ನೇ ವರ್ಷದ ಶಾಲಾ ವಾರ್ಷಿಕೋತ್ಸವ,ಸರಸ್ವತಿ ಪೂಜಾ ಕಾರ್ಯಕ್ರಮ ಹಾಗೂ ೮ನೇ ತರಗತಿ ವಿದ್ಯಾರ್ಥಿಗಳಿಗೆ ಬಿಳ್ಕೋಡುವ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತ,ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೆ ಶಿಕ್ಷಣದ ಅಗತ್ಯವಿದ್ದು,ವಿದ್ಯಾರ್ಥಿಗಳ ತಮ್ಮ ವಿದ್ಯಾರ್ಥಿ ಜೀವನವನ್ನು ಸರಿಯಾದ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು.ಪ್ರತಿಯೊಬ್ಬ ವಿದ್ಯಾರ್ಥಿಯು ಕೂಡಾ ಶಾಲೆಯಲ್ಲಿ ಜರುಗುವ ಪ್ರತಿಯೊಂದು ಚುಟುವಟಿಕೆಗಳಲ್ಲಿ ಭಾಗವಹಿಸಬೇಕು.ಸಮಯವನ್ನು ವ್ಯರ್ಥ ಮಾಡದೆ ಸಮರ್ಪಕವಾದ ರೀತಿಯಲ್ಲಿ ಬಳಸಿಕೊಂಡು,ಸಮಾಜಕ್ಕೆ ತನ್ನದೆಯಾದ ಕೊಡುಗೆಯನ್ನು ಪ್ರತಿಯೊಬ್ಬರು ನೀಡಬೇಕು ಎಂದು ಹೇಳಿದರು.
ನಗರಸಭೆಯ ಸದಸ್ಯರಾದ ಮುತ್ತುರಾಜ ಕುಷ್ಟಗಿ ಮಾತನಾಡಿ,ವಿದ್ಯಾರ್ಥಿಗಳ ಜೀವನದಲ್ಲಿ ಶಿಸ್ತು ಬಹಳ ಮುಖ್ಯವಾಗಿದೆ.ಯಾವ ವ್ಯಕ್ತಿಯು ಶಿಸ್ತುನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳತ್ತಾನೆಯೊ ಅವನು ಸಮಾಜದಲ್ಲಿ ಮುಂದೆ ಬರಲು ಸಾಧ್ಯಶಿಕ್ಷಕರು ಪಾಠ ಬೋಧನೆಯ ಜೊತೆಯಲ್ಲಿ ಮಾನವೀಯ ಮೌಲ್ಯಗಳ ಬೆಳವಣಿಗೆಗೆ ಹೆಚ್ಚು ಮಹತ್ವವನ್ನು ನೀಡಬೇಕು ಎಂದು ಹೇಳಿದರು.

ಶಿಕ್ಷಣ ಸಂಯೋಜಕರಾದ ಎಸ್.ಬಿ.ಕುರಿ ಮಾತನಾಡುತ್ತ,ಮಕ್ಕಳ ಶಿಕ್ಷಣದ ಅಭಿವೃದ್ದಿಗಾಗಿ ಸರ್ಕಾರವು ಇಂದು ಅನೇಕ ಕಾರ್ಯಕ್ರಗಳನ್ನು ಜಾರಿಗೆ ತಂದಿದೆ.ಅದರ ಸಮರ್ಪಕವಾದ ಸದುಪಯೋಗವಾಗಬೇಕು ಅಲ್ಲದೆ ಖಾಸಗಿ ಶಾಲೆಯ ರೀತಿಯಲ್ಲೆ ಕಾರ್ಯಕ್ರಮವನ್ನು ಆಯೋಜಿಸಿರುವುದು ಶ್ಲಾಘನೀಯ ಕೆಲಸವಾಗಿದೆ.ಬದಲಾಗುವ ಸಮಾಜಕ್ಕೆ ತಕ್ಕಂತೆ ಶಿಕ್ಷಣ ನೀಡಬೇಕು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾದ್ಯಾಯರಾದ ಭರಮಪ್ಪ ಕಟ್ಟಿಮನಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಾಜಿ ಎಸ್.ಡಿ.ಎಂ.ಸಿ.ಯ.ಅಧ್ಯಕ್ಷರಾದ ವಾಸು.ಕೆ.,ಸಿ.ಆರ್.ಪಿ.ಪೂರ್ಣಿಮಾ,ಪ್ರಾ.ಶಾ.ಶಿ.ಸಂಘದ ತಾಲೂಕ ಉಪಾಧ್ಯಕ್ಷರಾದ ಪೂರ್ಣಿಮ ತುಪ್ಪದ,ನ್ಯೂ ಸ್ಟಾರ್ ಕರಾಟೆ ಸಂಸ್ಥೆಯ ಅಧ್ಯಕ್ಷರಾದ ರಾಘವೇಂದ್ರ ಅರಕೇರಿ, ನಿವೃತ್ತ ಶಿಕ್ಷಕರಾದ ಬಸವನಗೌಡ ಮುಂತಾದವರು ಹಾಜರಿದ್ದರು. ಕಾರ್ಯಕ್ರಮವನ್ನು ಶಿಕ್ಷಕರಾದ ಗುರುರಾಜ ಕಟ್ಟಿ ನಿರೂಪಿಸಿದರು. ಶಿಕ್ಷಕರಾದ ನಾಗಪ್ಪ ನರಿ ಸ್ವಾಗತಿಸಿ,ಶಂಕ್ರಮ್ಮ ಬಂಗಾರಶೆಟ್ಟರ್ ವಂದಿಸಿದರು.
ನಗರಸಭೆಯ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಸನ್ಮಾನ
ಕೊಪ್ಪಳ:ನಗರಭೆಯ ನೂತನ ಅಧ್ಯಕ್ಷರಾದ ಬಸಮ್ಮ ರಾಮಣ್ಣ ಹಳ್ಳಿಗುಡಿ ಹಾಗೂ ಉಪಾಧ್ಯಕ್ಷರಾದ ಬಾಳಪ್ಪ ಬಾರಕೇರರವರಿಗೆ ಸರ್ಕಾರಿ ಅಂಗವಿಕಲ ನೌಕರರ ಸಂಘ ಮತ್ತು ಸಿ.ಪಿ.ಎಸ್.ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ನಗರಸಭೆಯ ಸದಸ್ಯರಾದ ಮುತ್ತುರಾಜ ಕುಷ್ಟಗಿ,ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ,ರಾಜ್ಯ ಸಂಚಾಲಕರಾದ ಭರಮಪ್ಪ ಕಟ್ಟಿಮನಿ,ಶಿಕ್ಷಣ ಸಂಯೋಜಕರಾದ ಎಸ್.ಬಿ.ಕುರಿ, ವಾಸು.ಕೆ.,ಶಿಕ್ಷಕರಾದ ವಿರುಪಾಕ್ಷಪ್ಪ ಬಾಗೋಡಿ,ಗುರುರಾಜ ಕಟ್ಟಿ,ನಾಗಪ್ಪ ನರಿ,ಶ್ರೀನಿವಾಸರಾವ್,ರತ್ನಾ,ಶೆಂಕ್ರಮ್ಮ ಬಂಗಾರಶೆಟ್ಟರ್,ವಿಜಯಾ ಹಿರೇಮಠ,ಸುನಂದ ಮುಂತಾದವರು ಹಾಜರಿದ್ದರು.
0 comments:
Post a Comment