ಕೊಪ್ಪಳ: ಹುಬ್ಬಳ್ಳಿಯ ಖ್ಯಾತ ನೇತ್ರ ತಜ್ಞ ಡಾ.ವೆಂಕಟರಾಮ ಕಟ್ಟಿಯವರ ಜಯಪ್ರಿಯಾ ಮೆಡಿಕಲ್ ಪೌಂಡೇಶನ್, ಕೊಪ್ಪಳ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ಕುಷ್ಟಗಿಯ ವಿನಾಯಕ ಆಪ್ಟಿಕಲ್ಸ್ ಹಾಗೂ ಕೊಪ್ಪಳದ ವಿನಾಯಕ ನೇತ್ರಾ ಸೇವಾ ಸಂಸ್ಥೆ ಇವರುಗಳ ಸಂಯುಕ್ತಾಶ್ರಯದಲ್ಲಿ ಇದೇ ಮಾ.೧೩ ಶುಕ್ರುವಾರ ದಿವಸ ತಾಲೂಕಿನ ಕಿನ್ನಾಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿದೆ.
ಜಿಲ್ಲೆಯ ಆರ್ಥಿಕವಾಗಿ ಹಿಂದುಳಿದ, ಕಡುಬಡವರಿಗಾಗಿ ಈ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ ಕಾರಣ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು.
ಕಣ್ಣಿನಲ್ಲಿ ಪೊರೆ ಹೊಂದಿದ ರೋಗಿಗಳನ್ನು ಅದೇ ದಿನ ಸಂಜೆ ಹುಬ್ಬಳ್ಳಿಯ ಖ್ಯಾತ ನೇತ್ರ ತಜ್ಞ ಡಾ.ವೆಂಕಟರಾಮ ಕಟ್ಟಿಯವರ ಜಯಪ್ರಿಯಾ ಕಣ್ಣಿನ ಆಸ್ಪತ್ರೆಯಲ್ಲಿ ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡಲಾಗುವುದು.
ಮಾ.೧೩ ರಂದು ಬೆಳಗ್ಗೆ ೮ ರಿಂದ ಮಧ್ಯಾಹ್ನ ೨-೦೦ ರವರೆಗೂ ಕಿನ್ನಾಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆಸರು ನೊಂದಾಯಿಸಲಾಗುವುದು. ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದವರು ರೇಷನ್‌ಕಾರ್ಡ ಮತ್ತು ಮತದಾರರ ಗುರುತಿನ ಚೀಟಿಯ ನಕಲು ಪ್ರತಿಯನ್ನು ಕಡ್ಡಾಯವಾಗಿ ತರಬೇಕು. ಹೆಚ್ಚಿನ ಮಾಹಿತಿಗಾಗಿ ವಿನಾಯಕ ಆಪ್ಟಿಕಲ್ಸ್ ಕುಷ್ಟಗಿ ಹಾಗೂ ಬ್ರಾಂಚ್ ಆಪೀಸ್ ಬಸ್ ನಿಲ್ದಾಣ ಹತ್ತಿರ ತಾವರಗೇರಾ ಶಿಬಿರದ ಆಯೋಜಕ ಬಸವರಾಜ ಪಲ್ಲೇದ ೯೮೪೫೦೩೪೯೧೭, ಪ್ರಭುಜ್ಯಾಗೀರದಾರ ೯೬೬೩೬೯೭೮೪೮ ಇವರನ್ನು ಸಂರ್ಪಕಿಸಲು ಕೋರಲಾಗಿದೆ.
0 comments:
Post a Comment