ಹೊಸಪೇಟೆ: ನಗರದಲ್ಲಿ ನಿವೇಶನರಹಿತ ಬಡವರು ಅತ್ಯಧಿಕ ಸಂಖ್ಯೆಯಲ್ಲಿದ್ದು ಅವರಿಗೆ ಕಡಿಮೆ ದರದಲ್ಲಿ ನಿವೇಶನ ನೀಡಲು ಅದ್ಯತೆ ನೀಡಬೇಕೆಂದು ತಾಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಗುಜ್ಜಲ ಶಿವರಾಮಪ್ಪ ಹೇಳಿದರು.
ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಸೋಮವಾರ ನೂತನ ಅಧ್ಯಕ್ಷ ಎಲ್.ಸಿದ್ದನಗೌಡ ಇವರನ್ನು ತಾಲೂಕು ವಾಲ್ಮೀಕಿ ನಾಯಕ ಸಮಾಜವು ಸನ್ಮಾನಿಸಿತು. ಈ ಸಮಯದಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗದಿಂದ ಬಂದಿರುವ ನೀವು ಹಿಂದುಳಿದ ಹಾಗೂ ಎಸ್‌ಸಿ ಎಸ್‌ಟಿ ಜನಾಂಗದ ನಿವೇಶನರಹಿತರ ಬಗ್ಗೆ ಗಮನ ಹರಿಸಬೇಕೆಂದರು. ಸನ್ಮಾನ ಸ್ವೀಕರಿಸಿದ ಸಿದ್ದನಗೌಡ ಎಲ್ಲರ ಸಹಕಾರದಿಂದ ಜನಪರ ಕೆಲಸ ಮಾಡುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಜಿ.ಕೆ.ಹನುಮಂತಪ್ಪ, ನಾಣಿಕೇರಿ ತಿಮ್ಮಯ್ಯ, ತಾರಿಹಳ್ಳಿ ಹುಲುಗಜ್ಜಪ್ಪ, ಬ್ಯಾಲಾಳು ಪಂಪಾಪತಿ, ತಾರಿಹಳ್ಳಿ ವೆಂಕಟೇಶ್, ಗುಜ್ಜಲ ರಘು, ಸಣ್ಣಕ್ಕಿ ರುದ್ರಪ್ಪ, ಬಿಸಾಟಿ ತಾಯಪ್ಪ ನಾಯಕ, ಟಿ. ಯಮನೂರಪ್ಪ, ಕಟಗಿ ಬಸವರಾಜಪ್ಪ ಮತ್ತಿತತರು ಹಾಜರಿದ್ದರು.

0 comments:
Post a Comment