ಕೊಪ್ಪಳ,ಮಾ : ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ(ನಮಾಜ್)ಮಾಡಿಸುವವರ ಮತ್ತು ಅಜಾನ್ ಮಾಡುವ ಮೌಝನ್ ಹಾಗೂ ಖಾಜಿ ರವರ ಖಿಝಾವತ್ ಹಾಗೂ ಮುಲ್ಲಾರವರ ಧಾರ್ಮಿಕ ಮತ್ತು ಸಾಮಾಜಿಕ ಸೇವೆಗಾಗಿ ಕನ್ನಡ ಭಾಷೆಯಲ್ಲಿ ಪ್ರಥಮಬಾರಿಗೆ ಇಸ್ಲಾಮಿ ನೀತಿ, ನಿಯಮಯಳ್ಳ ಪುಸ್ತಕವನ್ನು ದಿ.೧೭ ರ ಮಂಗಳವಾರ ರಾತ್ರಿ ೮.೩೦ಕ್ಕೆ ಕೊಪ್ಪಳದ ಈದ್ಗಾ ಮೈದಾನದಲ್ಲಿ ಜರುಗಲಿರುವ ಧಾರ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಈ ಮಹತ್ವದ ಪುಸ್ತಕ ಬಿಡುಗಡೆ ಮಾಡಲಾಗುತ್ತಿದೆ.
ಜಿಲ್ಲಾ ವಕ್ಫಬೋರ್ಡ ಅಧ್ಯಕ್ಷರಾದ ಮೌಲಾನಾ ಮುಸ್ತಫಾ ಕಮಾಲ್ ಸಾಹೇಬ್ ರವರ ಸತತ ಪ್ರಯತ್ನದಿಂದ ಇಮಾಮತ್ ಮೌಜನಿ ಮುಲ್ಲಾ-ಖಿಜಾವತ್ ದಂತಹ ಸೇವೆಮಾಡಲು ಈ ನೀತಿ. ನಿಯಮವುಳ್ಳ ಈ ಪುಸ್ತಕ ನಮ್ಮ ನಾಡಿನ ಇಮಾಮತ್ ಗಳಿಗೆ ಅನುಕೂಲವಾಗಲು ಕನ್ನಡ ಭಾಷೆಯ ಪುಸ್ತಕ ಪ್ರಕಟಗೊಳಿಸಲಾಗುತ್ತಿದೆ.
ಈಗಾಗಲೇ ಜಾಮೀಯಾ, ನಿಜಾಮೀಯಾಬಾನಿ, ಇಮಾಮ್ ಅನ್ವರುಲ್ಲಾ ಫಾರಿಕಿ(ರವರ ಆದೇಶದಂತೆ) ಈ ಪುಸ್ತಕದ ಬಿಡುಗಡೆ ಸಮಾರಂಭ ಏರ್ಪಡಿಸಲಾಗಿದೆ ಈ ಹಿಂದೆ ಇದರ ಪರೀಕ್ಷೆಯನ್ನು ಜಾಮೀಯಾ, ನಿಜಾಮಿಯಾ ಹೈದರಾಬಾದ್ ವತಿಯಿಂದ ಅರಬ್ಬಿ, ಉರ್ದು, ಇಂಗ್ಲೀಷ, ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಮಾತ್ರ ಪರೀಕ್ಷೆ ನಡೆಸಲಾಗಿತ್ತಿತ್ತು ಇನ್ನುಮೇಲೆ ಕನ್ನಡ ಭಾಷೆಯಲ್ಲಿ ಕೂಡಾ ಇದರ ಪರೀಕ್ಷೆ ನಡೆಸಲಾಗುತ್ತದೆ. ಇದಕ್ಕೆ ಜಾಮಿಯಾ, ನಿಜಾಮೀಯಾ ಹೈದರಾಬಾದ್ ವಿಶ್ವವಿದ್ಯಾನಿಲಯದಿಂದ ಪರವಾನಿಗೆ ಲಭಿಸಿದೆ. ಹೆಚ್ಚಿನ ಮಾಹಿತಿಯನ್ನು ಈ ಪುಸ್ತಕ ಬಿಡುಗಡೆ ಗೊಂಡ ಬಳಿಕ ಪುಸ್ತಕ ಖರೀದಿಸಿ ಸಂಪೂರ್ಣ ಮಾಹಿತಿ ಪಡೆದಕೊಳ್ಳಬಹುದಾಗಿದೆ ಈ ಪರೀಕ್ಷೆಯಲ್ಲಿ ಪಾಲ್ಗೊಳ್ಳುವವರು ಕೊಪ್ಪಳದ ತಂಜೀಮೇ-ಉಲ್ ಮಾಯೆ ಇಕ್ರಾಮ್- ಅಹೇಲೆ ಸುನ್ನತ್(ರಿ)ಗೆ ಸಂಪರ್ಕಿಸಬಹುದು ಎಂದು ಮುಫ್ತಿ ನಜೀರ್ ಅಹಮ್ಮದ್ ಖಾದ್ರಿ ರವರು ತಿಳಿಸಿದ್ದಾರೆ.
0 comments:
Post a Comment