ಹೊಸಪೇಟೆ-ಸಂಡೂರು ರಸ್ತೆಯಲ್ಲಿ ಶಿಥಿಲಗೊಂಡಿರುವ ಹೆಚ್.ಎಲ್.ಸಿ. ಬಲದಂಡೆ ಕಾಲುವೆ ಸೇತುವೆ ಮರು ನಿರ್ಮಿಸಬೇಕೆಂದು ಕರುನಾಡು ಕಲಿಗಳ ಕ್ರಿಯಾಶೀಲ ಸಮಿತಿ ಆಗ್ರಹಿಸಿದೆ.
ಹೆಚ್.ಎಲ್.ಸಿ. ಬಲದಂಡೆ ಕಾಲುವೆ ಸೇತುವೆ ಮರು ನಿರ್ಮಿಸಬೇಕೆಂದು ಮನವಿ ಸಲ್ಲಿಸಿ, ಈಗಾಗಲೇ ಸುಮಾರು ೮ ತಿಂಗಳುಗಳು ಕಳೆದಿರುತ್ತವೆ. ಸದರಿ ಕೆಲಸ ಕಾಮಗಾರಿಯು ಏನೂ ಆಗದೇ ಸೇತುವೆ ಇನ್ನಷ್ಟು ಶಿಥಿಲಗೊಂಡಿರುತ್ತದೆ ಹಾಗೂ ಸೇತುವೆ ಮೇಲೆ ಬಹಳಷ್ಟು ಅಪಘಾತಗಳು ಸಂಭವಿಸಿರುತ್ತವೆ, ಹಲವಾರು ಜೀವಗಳು ಹೋಗಿರುತ್ತವೆ. ಆದರೆ, ಈಗ ಅನಿವಾರ್ಯ ಎಂಬಂತೆ ಕಾಲುವೆಯಲ್ಲಿ ನೀರು ಹೋಗಿದ್ದು, ಈ ಭಾಗದಲ್ಲಿ ಬರುವ ಯು.ಜಿ.ಡಿ. ಕಾಮಗಾರಿಯು ಮುಗಿದಿದ್ದು, ತಾವುಗಳು ಕೂಡಲೇ ಎಚ್ಚೆತ್ತುಕೊಂಡು ಈಗಲಾದರೂ ಸೇತುವೆಯನ್ನು ಹೊಸದಾಗಿ ನಿರ್ಮಾಣ ಮಾಡಬೇಕೆಂದು ಕಾರಣ ಇಲ್ಲಿಯ ಸೇತುವೆಯನ್ನು ಅವಲಂಬಿಸಿಕೊಂಡು ಸಾವಿರಾರು ವಿದ್ಯಾರ್ಥಿಗಳು, ರೈತರು, ಜನ ಸಾಮಾನ್ಯರು ಸಂಡೂರು ಮಾರ್ಗವಾಗಿ ಇದನ್ನೇ ಅವಲಂಬಿಸಿಕೊಂಡು ಜೀವನವನ್ನು ನಡೆಸುತ್ತಿರುವ ಅನಿವಾರ್ಯತೆ ಇರುವುದರಿಂದ ತಾವುಗಳು ಕಾರ್ಯ ಪ್ರವೃತ್ತರಾಗಬೇಕೆಂದು ಹಾಗೂ ಕುಂಟು ನೆಪವೊಡ್ಡಿ ಕಾರ್ಯ ವಿಳಂಬ ಮಾಡಿದರೆ, ತಮ್ಮ ವಿರುದ್ದ ಹೋರಾಟ ಅನಿವಾರ್ಯವೆಂದು ತಮ್ಮ ಗಮನಕ್ಕೆ ತರಬಯಸುತ್ತಾ, ಈಗಾಗಲೇ ಇಲ್ಲಿ ಹಲವಾರು ಸಾವುಗಳು ಆಗಿದ್ದು, ರಸ್ತೆ ಮೇಲೆ ವಾಹನಗಳು ಸಂಚರಿಸಿದರೆ ಸೇತುವೆ ತೂಗು ಉಯ್ಯಾಲೆಯಂತೆ ಅಲುಗಾಡುತ್ತದೆ. ಕಾರಣ ಕೂಡಲೇ ತಾವುಗಳು ಸೇತುವೆಯನ್ನು ನಿರ್ಮಿಸಬೇಕು, ತಾವುಗಳು ಬಂದು ಕೆಲಸ ಪ್ರಾರಂಭಿಸಬೇಕು. ಮುಂದೆ ಜರುಗಬಹುದಾದದ ಅನಾಹುತಗಳನ್ನು ತಪ್ಪಿಸಬೇಕು, ಒಂದು ವೇಳೆ ವಿಳಂಬ ನೀತಿ ಅನುಸರಿಸಿದರೆ ಉಗ್ರವಾದ ಹೋರಾಟವನ್ನು ಈ ಭಾಗದ ರೈತರು, ವಿದ್ಯಾರ್ಥಿಗಳು ನಿವಾಸಿಗಳ ಜೊತೆಗೂಡಿ ನಮ್ಮ ಸಮಿತಿಯು ರಸ್ತೆ ಬಂದ್ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಎಚ್ಚರಿಕೆ ನೀಡಲಾಗಿದೆ.
0 comments:
Post a Comment