PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ - ೧೩ ವಿಧ್ಯಾರ್ಥಿ ವಿಧ್ಯಾರ್ಥಿನಿಯರಿಗೆ ಇದು ಪರೀಕ್ಷೆಯ ಸಮಯವಾಗಿದ್ದು ವರ್ಷಉದ್ದಕ್ಕು ಓದಿದ್ದನ್ನು ಮನನ ಮಾಡಿಕೊಂಡು ಒರೇಗಲ್ಲಿಗೆ ಹಚ್ಚಿ ಪರೀಕ್ಷಿಸುವ ಕಾಲ, ವಿಧ್ಯಾರ್ಥಿಗಳು ಪರೀಕ್ಷೆಯಲ್ಲಿ ಎದೆಗುಂದದೆ ಆತ್ಮ ವಿಶ್ವಾಸದಿಂದ ಎದರಿಸಬೇಕೆಂದು ಬನ್ನಿಕಟ್ಟಿ ಸರಕಾರಿ ಪ್ರೌಢ ಶಾಲೆಯ ಎಸ್.ಡಿ,ಎಂಸಿ. ಅಧ್ಯಕ್ಷ ಪರಮಾನಂದ ಯಾಳಗಿ ಹೇಳಿದರು.
ಅವರು ಇಂದು ಬನ್ನಿಕಟ್ಟಿ ಸರಕಾರಿ ಪ್ರೌಢ ಶಾಲೆಯಲ್ಲಿ ವಿಧ್ಯಾರ್ಥಿಗಳಿಂದಲೇ ನಡೆದ ಸರಸ್ವತಿ ಪೂಜಾ ಸಮಾರಂಭ ಮತ್ತು ಎಸ್.ಎಸ.ಎಲ್.ಸಿ ವಿಧ್ಯಾರ್ಥಿಗಳಿಗೆ ಬಿಳ್ಕೊಡುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ವಿಧ್ಯಾರ್ಥಿಗಳು ಪರೀಕ್ಷೆಯ ಈ ಅವಧಿಯಲ್ಲಿ ಅನಾವಶ್ಯಕಾಗಿ ಕಾಲಹರಣ ಮಾಡದೆ  ಶ್ರಧ್ಯೆ ಮತ್ತು ಏಕಾಗ್ರತೆಯಿಂದ ಅಭ್ಯಾಸ ಮಾಡಿ ಪರೀಕ್ಷೇಯಲ್ಲಿ ಯಾವುದೇ ಹೆದರಿಕೆ ಅಂಜಿಕೆ ಇಲ್ಲದೆ ವಿಶ್ವಾಸದಿಂದ ಹೆದರಿಸಬೇಕು, ಪಾಲಕ ಪೋಷಕರು ತಮ್ಮ ಮಕ್ಕಳ ಚಲನ ವಲನಗಳನ್ನು  ಅತ್ಯಂತ ಸೂಕ್ಷ್ಮವಾಗಿ ಅವಲೋಕಿಸಬೇಕು ಮಕ್ಕಳ ಸರ್ವಾಂಗಿಣ ಬೆಳವಣಿಗೆಗೆ ಶಿಕ್ಷಣದ ಕಡೆಗೆ ಹೆಚ್ಚು ಗಮನ ಹರಿಸಿ ಮಕ್ಕಳನ್ನು ಆದರ್ಶದ ಹಾದಿಯಲ್ಲಿ ಮುನ್ನಡೆಸಲು ಮಾರ್ಗದರ್ಶನ ಮಾಡಬೇಕು ಎಂದರು.
ಮುಖ್ಯ ಆತಿಥಿಗಳಾಗಿ ಆಗಮಿಸಿದ್ದ ನಗರಸಭೆ ಸದಸ್ಯ ಪ್ರಾಣೇಶ ಮಹೇಂದ್ರಕರ್ ಮಾತನಾಡಿ ಕೇವಲ ಶಿಕ್ಷಕ, ಮಕ್ಕಳು ಪಾಲಕರು. ಇದ್ದರೆ ಮಾತ್ರ ಶಿಕ್ಷಣದ ಪ್ರಗತಿ ಆಗಲಾರದು ಅದರ ಜೋತೆಗೆ ಸಮುಧಾಯವು ಸಹ ಕೈ ಜೋಡಿಸಿದಾಗ ಶಿಕ್ಷಣ ಹೆಚ್ಚಿನ ಪ್ರಗತಿ ಆಗಲು ಸಾದ್ಯ ಮಕ್ಕಳು ಶಾಲೆಯಲ್ಲಿ ಕಲಿತಿರುವದನ್ನು ಮನೆಯಲ್ಲಿ ಮನನ ಮಾಡುವಂತೆ ಪಾಲಕ ಪೋಷಕರು ಪ್ರೇರಣೆ ನೀಡಬೇಕಲ್ಲದೇ ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಶಾಲೆಗೆ ಅತ್ಯುತ್ತಮ ಪಲಿತಾಂಶ ಬರುವಂತೆ ಮುತುವರ್ಜಿವಹಿಸಿಬೆಕೆಂದರು 
ಶಾಲೆಯ ಮುಖ್ಯೋಪಧ್ಯಾಯ ಕರಿಬಸಪ್ಪ ಪಲ್ಲೇದ ಮಾತನಾಡಿ ಪ್ರತಿಯೊಂದು ಮಗುವಿಗೂ ತನ್ನೇದೆ ಆದ ಪ್ರತಿಭೆ ಇರುತ್ತದೆ, ಬೆಳೆಯುವ ಸಿರಿ ಮೊಳಕೆಯಲ್ಲೇ ಎನ್ನುವ ಹಾಗೆ ಬಾಲ್ಯದಲ್ಲೇ ಮಕ್ಕಳ ಪ್ರತಿಭೆ ಗುರಿತಿಸಿ ಪ್ರೋತ್ಸಾಹಿಸಬೇಕು ಮಕ್ಕಳು ಒಳ್ಳೆಯ ಗುರಿ ಇಟ್ಟುಕೊಳ್ಳಬೇಕು ಪಾಲಕರಾದವರು ಮಕ್ಕಳ ಅಭಿರುಚಿಗೆ ತಕ್ಕಂತೆ ಶಿಕ್ಷಣವನ್ನು ಕೊಡಿಸಬೇಕು ಇದುವರಿಗೂ ಶಾಲೆಯಲ್ಲಿ ಕಲಿತ ಮಕ್ಕಳು ಪರೀಕ್ಷೇಯಲ್ಲಿ ಅತ್ಯತ್ತಮ ಪಲಿತಾಂಶ ಪಡೆದಾಗ ಮಾತ್ರ ಸರಕಾರ ಮಕ್ಕಳಿಗೆ ನೀಡುತ್ತಿರುವ ಅನೇಕ ಯೋಜನೆಗಳು ಸಪಲವಾಗಲು ಸಾಧ್ಯವಾಗುವದು ಎಂದು ಹೇಳಿದರು॒.॒.
ವೇದಿಕೆ ಮೇಲೆ ಮೇಲೆ ಆದರ್ಶ ಶಾಲೆಯ ಮುಖ್ಯೋಪಧ್ಯಾಯ ಹೆ.ಮಹಾಂತೇಶ, ಹಿರಿಯ ಶಿಕ್ಷಕರಾದ ಜಯರಾಜ ಬೂಸದ, ರಾಮರಡ್ಡೆರ, ತಾಹೇರಾ ಬೇಗಂ, ಮಂಜೂಳಾ ನಾಲವಾಡ, ಶೈಲಜಾ ಹಡಗಲಿ, ವೀರಯ್ಯ ಒಂಟಿಗೋಡಿಮಠ, ಆನಂದ, ಗೋಪಾಲರಾವ್ ಗುಡಿ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು ಇದೇ ಸಂದರ್ಭದಲ್ಲಿ ೧೦ನೇ ತರಗತಿ ವಿಧ್ಯಾರ್ಥಿಗಳಿಗೆ ಶಾಲೆಯ ಶಿಕ್ಷಕರು ವಿಧ್ಯಾರ್ಥಿಗಳು ಪಾಲಕರು ಹಿತವಚನಗಳನ್ನು ನೀಡಿದ ನಂತರ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು 
ಪ್ರಾರಂಭದಲ್ಲಿ ವಿಧ್ಯಾರ್ಥಿನಿ ಮಹಾದೇವಿ ಸರ್ವರನ್ನು ಸ್ವಾಗಿತಿಸಿದರೆ, ಅಕ್ಕಮಹಾದೇವಿ ಕಾರ್ಯಕ್ರಮ ನಿರೂಪಿಸಿದರು. 

Advertisement

0 comments:

Post a Comment

 
Top