PLEASE LOGIN TO KANNADANET.COM FOR REGULAR NEWS-UPDATES

Gangavathi- ಅಂದಾಜು ಒಂದೂವರೆ ಲಕ್ಷ ಜನಸಂಖ್ಯೆ ಹೊಂದಿರುವ ವಾಣಿಜ್ಯ ನಗರಿ ಗಂಗಾವತಿಯ ಹೊರಭಾಗದಲ್ಲಿರುವ ತಹಶೀಲ್ದಾರ ಸೇರಿದಂತೆ ಇನ್ನಿತರ ಸರ್ಕಾರಿ ಕಚೇರಿಗಳಿಗೆ ಹಾಗೂ ವಿವಿಧ ಬಡಾವಣೆಗಳಿಗೆ ತೆರಳಲು ಸಾರ್ವಜನಿಕರು ಖಾಸಗಿ ವಾಹನಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆ ಎದುರಾಗಿದ್ದು, ನಗರ ಸಾರಿಗೆ ಸೌಲಭ್ಯ ಕಲ್ಪಿಸುವಂತೆ ಮಾಜಿ ಸಂಸದರಾದ ಶ್ರೀ ಶಿವರಾಮಗೌಡರು ಮಾಡಿದ ಮನವಿಗೆ ಸ್ಪಂದಿಸಿರುವ ಸರ್ಕಾರವು ಇದೇ ಮಾರ್ಚ ೧೫ ರಂದು ನಗರ ಸಾರಿಗೆಯನ್ನು ಆರಂಭಿಸಲಿದೆ.

ಕೇಂದ್ರ ಸರ್ಕಾರದ ಪ್ರಾಯೋಜಕತ್ವದ ಜೆ ನರ್ಮ್ ಯೋಜನೆಯಡಿ ಬಸ್ಸುಗಳನ್ನು ಮಂಜೂರು ಮಾಡಲಾಗಿದ್ದು,  ಶಿವರಾಮಗೌಡರು ಸಂಸದರಾಗಿದ್ದ ವೇಳೆ ಸಾರಿಗೆ ಸಚಿವರಾದ  ರಾಮಲಿಂಗಾರೆಡ್ಡಿಯವರನ್ನು ಸ್ವತಃ ಭೇಟಿಯಾಗಿ ಪ್ರಸ್ತಾವನೆ ಸಲ್ಲಿಸಿದ್ದರು.

ಗಂಗಾವತಿಯಲ್ಲಿ ನಗರ ಸಾರಿಗೆ ಸೌಲಭ್ಯ ಇಲ್ಲದಿರುವುದರಿಂದ ಶಾಲೆ ಕಾಲೇಜುಗಳು ವಿದ್ಯಾರ್ಥಿಗಳಿಗೂ ಸಹ ಸಮಯಕ್ಕೆ ಸರಿಯಾಗಿ ತಲುಪಲು ತೊಂದರೆಯಾಗಿದೆ. ಇದನ್ನು ಮನಗಂಡ ಸಾರಿಗೆ ಇಲಾಖೆಯು ನಗರದ ಸುತ್ತಮುತ್ತಲ ಗ್ರಾಮಗಳನ್ನೊಳಗೊಂಡಂತೆ ಪ್ರಸ್ತಾವನೆಯನ್ನು ತಯಾರಿಸಿ ಜೆ. ನರ್ಮ್ ಯೋಜನೆಯಡಿ ಬಸ್‌ಗಳನ್ನು ಮಂಜೂರು ಮಾಡಿ ಒಂದೂವರೆ ವರ್ಷ ಗತಿಸಿದ್ದರೂ ಸಹ ಹಸಿರು ನಿಶಾನೆ ತೋರಿಸಲು ವಿಳಂಬವೇಕೆ? ಕೇಂದ್ರದ ಜೆ. ನರ್ಮ್ ಯೋಜನೆಯ ಬಸ್ ಓಡಿಸಲು ಇರುವ ತೊಡಕಾದರೂ ಏನು? ಒಂದೆಡೆ ಸಾರಿಗೆ ಇಲಾಖೆಯು ಮೊದಲ ಹಂತದಲ್ಲಿ ಗಂಗಾವತಿ ನಗರಕ್ಕೆ ೪೦ ಬಸ್‌ಗಳು ಮಂಜೂರಾಗಿವೆ ಎಂದು ಹೇಳುತ್ತಿದ್ದರೂ ಇದುವರೆಗೆ ಸಂಚರಿಸದಿರಲು ಕಾರಣವಾದರೂ ಏನು? ರಾಮಲಿಂಗಾರೆಡ್ಡಿಯವರೇ, ಕೊಪ್ಪಳಕ್ಕೆ ಬಂದಂತೆ ಕಿಷ್ಕಿಂದ ನಗರ ಸಾರಿಗೆ ಗಂಗಾವತಿ ನಗರದಲ್ಲಿ ಸಂಚರಿಸಲು ಇನ್ನೆಷ್ಟು ದಿನ ಬೇಕು? ನೀವು ಭರವಸೆ ನೀಡಿಯೇ ಒಂದೂವರೆ ವರ್ಷವಾಗಿದೆ. ನಿಮ್ಮ ಭರವಸೆ ಅನುಷ್ಠಾನಗೊಳ್ಳದಿರುವುದು ಅನುಮಾನಾಸ್ಪದವಾಗಿದ್ದು, ಗಂಗಾವತಿಯಲ್ಲಿ ನಗರ ಸಾರಿಗೆ ಆರಂಭಿಸದಿರಲು ಇರುವ ಒತ್ತಡವಾದರೂ ಏನು ಎಂದು ಶೀಘ್ರವೇ ಬಹಿರಂಗಪಡಿಸಿ ಇಲ್ಲವೇ ಬಸ್‌ಗಳನ್ನು ಓಡಿಸಿ ಮಾಜಿ ಸಂಸದರಾದ  ಶಿವರಾಮಗೌಡರು ದಿನಾಂಕ: ೧೧.೧೨.೨೦೧೪ ರಂದು ಮತ್ತೊಮ್ಮೆ ಪತ್ರ ಬರೆದು ಶೀಘ್ರವೇ ಕ್ರಮವಹಿಸಲು ಕೋರಿದ್ದರು.

ಕೊನೆಗೂ ಎಚ್ಚೆತ್ತ ಸರ್ಕಾರವು ಇದೇ ದಿನಾಂಕ ೧೫ ರಿಂದ ನಗರ ಸಾರಿಗೆ ಆರಂಭಿಸಲು ಹಸಿರು ನಿಶಾನೆ ತೋರಿದ್ದಕ್ಕೆ ಸಾರಿಗೆ ಸಚಿವರಾದ   ರಾಮಲಿಂಗಾರೆಡ್ಡಿಯವರಿಗೆ ಶಿವರಾಮಗೌಡರು ಧನ್ಯವಾದಗಳನ್ನು ತಿಳಿಸಿದ್ದಾರೆ.

Advertisement

0 comments:

Post a Comment

 
Top