PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ : ವರ್ಷಪೂರ್ತಿ ಕೆಲಸ ಹಾಗೂ ವೇತನ ಹಿಂಬಾಕಿ ಪಾವತಿ ಮತ್ತು ಮುಂತಾದ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದಿ: ೧೧.೦೩.೨೦೧೫ ರಿಂದ ಆರಂಭವಾಗಿರುವ ನೀರಾವರಿ ಕಾರ್ಮಿಕರ ಮುಷ್ಕರದ ಹಿನ್ನಲೆಯಲ್ಲಿ ನಿನ್ನೆ ರಾತ್ರಿ ೦೭:೦೦ ರಿಂದ ೦೯:೩೦ ರವರೆಗೆ ಮೊದಲೆ ಸುತ್ತಲಿನ ಮಾತುಕತೆ ನಡೆದು ವಿಫಲವಾಯಿತು. ಮುಖ್ಯ ಅಭಿಯಂತರ ಮಲ್ಲಿಕಾರ್ಜುನ ಬುಂಗೆ ಅದೀಕ್ಷ ಅಭಿಯಂತರರಾದ ಶಿವಕುಮಾರ ಹಾಗೂ ಬೋಜನಾಯಕ ಮತ್ತು ವಿವಿಧ ವಿಭಾಗಗಳ ಕಾರ್ಯ ಪಾಲಕ ಅಭಿಯಂತರರು ಇಲಾಖೆಯ ಪರವಾಗಿ ಭಾಗವಹಿಸಿದ್ದರೆ. ಕಾರ್ಮಿಕರ ಪರವಾಗಿ ಸಂಘದ ಅಧ್ಯಕ್ಷ ಆರ್ ಮಾನಸನ್ನು ಪ್ರದಾನ ಕಾರ್ಯದರ್ಶಿ ಜಿ ಅಡವಿರಾವ್ ರಮೇಶ ಹುಲಿಗೆಣ್ಣ, ವೆಂಕಟೇಶ, ಪುರುಷೋತ್ತಮ, ಬಸವರಾಜ ಮುಂತಾದವರು ಪಾಲ್ಗೊಂಡಿದ್ದರು. 
ವರ್ಷದ ೧೨ ತಿಂಗಳ ಕೆಲಸಕೊಡುವುದಾಗಿ ೧೦ ವರ್ಷಗಳ ವೇತನ ವ್ಯತ್ಯಾಸ ಹಿಂಬಾಕಿ ತುಂಬಿಕೊಡುವುದಾಗಿ ದಿ: ೧೭.೦೯.೨೦೧೪ ರಂದು ಲಿಖಿತ ಒಪ್ಪಂದವನ್ನು ಜಾರಿಗೊಳಿಸುವಂತೆ ಕಾರ್ಮಿಕ ಪ್ರತಿನಿಧಿಗಳು ಪಟ್ಟು ಹಿಡಿದರು ಹಾಗೆಯೆ ನಕಲಿ ಕಾರ್ಮಿಕರಿಗೆ ವರ್ಷ ಪೂರ್ತಿ ಕೆಲಸ ಕೊಡಲು ಮುಂದಾಗಿದೆ ಎಂದು ಇಲಾಖೆಯ ಭ್ರಷ್ಟಾಚಾರವನ್ನು ತೆರೆದು ತೋರಿಸಿದರು. 
ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು ಬಾಕಿ ಸಂಬಳವನ್ನು ಮಾರ್ಚ್ ೧೬ ರಂದು ಪಾವತಿಸುವುದಾಗಿ, ೧೨ ತಿಂಗಳ ಕೆಲಸ ಕೊಡುವ ವಿಚಾರವನ್ನು ಸರಕಾರ ಹಾಗೂ ಇತರೆ ಯೋಜನೆಗಳ ಮಾದರಿ ಅನ್ವಯ ಕೊಡಲಾಗುವುದೆಂದು ಭರವಸೆ ನೀಡಿದರು.  ಈ ಖಾಲಿ ಭರವಸೆಯನ್ನು ಕಾರ್ಮಿಕ ಸಂಘ ತಳ್ಳಿ ಹಾಕಿ ಮುಷ್ಕರ್‌ವನ್ನು ಮುಂದುವರಿಸಿದೆ. ಎರಡನೆಯ ದಿನದ ಹಗಲು ರಾತ್ರಿ ಮುಷ್ಕರ್‌ದ ಧರಣಿಯಲ್ಲಿ ೧೨ ಉಪ ವಿಭಾಗದ ಸುಮಾರು ೧೦೦೦ ಜನ ಕಾರ್ಮಿಕರನ್ನು ಭಾಗವಹಿಸಿದ್ದಾರೆ. ಹೋರಾಟ ಊಟ ಹಾಗೂ ನಿದ್ರೆಗಾಗಿ ಸಿ ಇ ಕಛೇರಿ ಮುಂದಿನ ಒಂದೇ ಆವರಣವನ್ನು ಬಳಸಿಕೊಳ್ಳಲಾಗಿದೆ. 
ಕಾರ್ಮಿಕರಿಂದ ಸಂಗ್ರಹಿಸಿ ತಂದ ಅಕ್ಕಿ ದವನ ದಾನ್ಯವನ್ನು ಶಿಬಿರ ಊಟದ ಸಾಮಾಗ್ರಿಯನ್ನಾಗಿ ಬಳಸಿಕೊಳ್ಳಲಾಗುತ್ತದೆ. ಆಗೆಯೆ ಎರಡನೇ ದಿನದ ಧರಣಿಯಲ್ಲಿ ಸಂಘದ ಅಧ್ಯಕ್ಷರು ಇತರೆ ಕಾರ್ಮಿಕರು ಹಾಗೂ ಕಾರ್ಮಿಕ ಸಂಘಟನೆಗಳು ಈ ಮಹತ್ವದ ಮುಷ್ಕರ್‌ಕ್ಕೆ ಬೆಂಬಲಿಸಬೇಕೆಂದು ವಿನಂತಿಸಿದ್ದಾರೆ.

Advertisement

0 comments:

Post a Comment

 
Top