PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ : ಸ್ವ ಸಹಾಯ ಸಂಘಗಳ ಬಲವರ್ದನೆ ಹಾಗೂ ವಿವಿಧ ಕಾರ್ಯ ಚಟುವಟಿಕೆಗಳಿಗಾಗಿ ಸಂಜೀವಿನಿ ಯೋಜನೆಯಡಿ ಮುಖ್ಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ನಮ್ಮ ಗ್ರಾಮದಲ್ಲಿ೧೫ ದಿನಗಳ ಕಾಲ ಗ್ರಾಮ ವಾಸ್ಥವ್ಯಹೂಡಿ ಗ್ರಾಮದ ಅಭಿವೃದ್ದಿಗೆ ಪೂರಕವಾಗಿ ಕಾರ್ಯನಿರ್ವಹಿಸಲು ಆಗಮಿಸಿರುವುದು ತುಂಬಾ ಹರ್ಷದಾಯಕವೆಂದು ಗ್ರಾಮ ಪಂಚಾಯತ ಅಧ್ಯಕ್ಷ ಹೊನ್ನುರಸಾಬ ಬೈರಾಪುರ ಅವರು ಹೇಳಿದರು. ಸಂಜೀವಿನಿ ಯೋಜನೆ ಕುರಿತು ಗ್ರಾಮ ಪಂಚಾಯತಿ ಭಾಗ್ಯನಗರದಲ್ಲಿ ಏರ್ಪಡಿಸಿದ್ದ ಪರಿಚಯಾತ್ಮಕ ಸಭೆಯಲ್ಲಿ ಅವರು ಮಾತನಾಡಿದರು. 
ಈ ಸಂದರ್ಭದಲ್ಲಿ ತಾಲೂಕ ವಲಯ ಮೇಲ್ವಿಚಾರಕ ಬಿ.ಆರ್.ಪ್ರಸನ್ನಕುಮಾರವರು ಮಾತನಾಡಿ ಮುಖ್ಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಗ್ರಾಮದಲ್ಲಿ ಗ್ರಾಮವಾಸ್ಥವ್ಯ ಹೂಡಿ ಸ್ವ ಸಹಾಯ ಸಂಘಗಳ ಸ್ಥಿತಿಗತಿ ಅಧ್ಯಯನ ಮಾಡುವುದರಿಂದ ಸಂಘಗಳ ಪ್ರಸ್ತುತ ಮಾಹಿತಿ ತಿಳಿಯುತ್ತದೆ. ಸಂಘದಿಂದ ಹೊರಹುಳಿದ ಬಡವರು, ಕಡು ಬಡ ಕುಟುಂಬಗಳನ್ನು ಗುರುತಿಸಿ ಅವರನ್ನು ಸಾಮಾಜಿಕ ಆರ್ಥಿಕವಾಗಿ ಸೆರ್ಪಡೆಗೊಳಿಸಲು ಸಹಾಯಕವಾಗುತ್ತದೆ ಈ ನಿಟ್ಟಿನಲ್ಲಿ ಗ್ರಾಮದಲ್ಲಿರುವ ಬಡ ಮಹಿಳೆಯರನ್ನು ಒಗ್ಗೂಡಿಸಿ ಆರ್ಥಿಕ ಸ್ವಾವಲಂಭನೆ ಸಾಧಿಸುವ ಗುರಿಯನ್ನು ಈ ಯೋಜನೆ ಹೊಂದಿದೆ ಎಂದು ತಿಳಿಸಿದರು. 
ಈ ಸಂದರ್ಭದಲ್ಲಿ ಜಿಲ್ಲಾ ವ್ಯವಸ್ಥಾಪಕ ಹಚ್.ಡಿ ನಟರಾಜ ಮಾತನಾಡಿ ಸಂಜೀವಿ ಯೋಜನೆಯೂ ಸ್ವ ಸಹಾಯ ಸಂಘಗಳ ಶ್ರ್ರೆಯೋಭಿವೃದ್ದಿಗಾಗಿ ಸುತ್ತುನಿಧಿ, ಬಡ್ಡಿ ಸಹಾಯಧನ, ಸಮುದಾಯ ಬಂಡವಾಳ ನಿಧಿ ನಿಡುವ ಗುರಿಯನ್ನು ಹೊಂದಿರುವದರಿಂದ ಗ್ರಾಮದಲ್ಲಿನ ಸ್ವ ಸಹಾಯ ಸಂಘಗಳನ್ನು ಶ್ರೇಣಿಕರಣ ಮಾಡಿ ಪಂಚಸೂತ್ರ ಪಾಲನೆ ಮಾಡಿದ ಎ,ಬಿ ಶ್ರೇಣಿ ಪಡೆದ ಸಂಘಗಳನ್ನು ವಾರ್ಡ ಒಕ್ಕೂಟದಲ್ಲಿ ಸೆರಿಸಲಾಗುತ್ತದೆ. ಸಂಘಗಳ ಅಭಿವೃದ್ದಿಗೆ ಮುಖ್ಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಕೈಗೊಳ್ಳುವ ಕಾರ್ಯ ಚಟುವಟಿಕೆಗಳಿಗೆ ಸ್ಥಳೀಯ ಅಂಗನವಾಡಿ ಕೇಂದ್ರದ ಕಾರ್ಯಕರ್ತರು ಹಾಗೂ ಮೇಲ್ವಿಚಾರಕರು ಹಾಗೂ ಗ್ರಾ.ಪಂ ಸರ್ವಸದಸ್ಯರು ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡಬೇಕೆಂದು ತಿಳಿಸಿದರು ಈ ಸಂದರ್ಭದಲ್ಲಿ ವೃತ್ತಿ ಶಿಕ್ಷಣ ತರಬೇತಿ ಸಂಸ್ಥೆಯ ಸರೋಜಾ ಬಿ ಬಾಕಳೆ, ಪುಷ್ಪಾ ಗಾಣಿಗೇರ, ಮುಖ್ಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ, ರೇಣುಕಾ, ಪುಷ್ಪಾ, ಶಂಕ್ರಮ್ಮ, ಕವಿತಾ, ಪಕ್ರುಮಬಾನು, ಅಂಗನವಾಡಿ ಕೇಂದ್ರದ ಕಾರ್ಯಕರ್ತರು, ಗ್ರಾಮ ಪಂಚಾಯತಿ ಸದಸ್ಯರು ಉಪಸ್ಥಿತರಿದ್ದರು. 

Advertisement

0 comments:

Post a Comment

 
Top