PLEASE LOGIN TO KANNADANET.COM FOR REGULAR NEWS-UPDATES




ಕೊಪ್ಪಳ : ಮನುಷ್ಯ ಸಮಾಜ ಜೀವಿ. ಸಮಾಜದಲ್ಲಿ ಬಾಳುವಾಗ ಪುಸ್ತಕ ಜ್ಞಾನದ ಜೊತೆಗೆ ವ್ಯವಹಾರ ಜ್ಞಾನವೂ ಅವಶ್ಯಕ.ಅನಕ್ಷರಸ್ಥರಿಗೆ ಮೋಸ ಮಾಡುವವರು ಬಹಳ. ಆದರೆ ವಿದ್ಯಾವಂತರೂ ಸಹ ಮೋಸಕ್ಕೊಳಗಾಗುತ್ತಿದ್ದಾರೆ.ಯಾಕೆಂದರೆ ಅವರಿಗೆ ಕಾನೂನು ಮತ್ತು ಹಕ್ಕುಗಳ ಅರಿವಿಲ್ಲ. ಈ ನಿಟ್ಟಿನಲ್ಲಿ ಭಾವಿ ಪ್ರಜೆಗಳಾದ ಕಾಲೇಜು ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಗ್ರಾಹಕ ಹಕ್ಕುಗಳು, ಕಾನೂನುಗಳ ಬಗ್ಗೆ ಅರಿವು ಮೂಡಿಸಬೇಕಿದೆ ಎಂದು ಜಿಲ್ಲಾ ಗ್ರಾಹಕರ ವೇದಿಕೆ ಅಧ್ಯಕ್ಷ ಕೆ.ವಿ.ಕೃಷ್ಣಮೂರ್ತಿ ಹೇಳಿದರು. 
ಅವರು ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೇವಾ ಸಂಸ್ಥೆಯ ವತಿಯಿಂದ ವಿಶ್ವ ಗ್ರಾಹಕರ ಹಕ್ಕು ದಿನಾಚರಣೆ ನಿಮಿತ್ಯ ಹಮ್ಮಿಕೊಳ್ಳಲಾಗಿದ್ದ ಗ್ರಾಹಕರ ಜಾಗೃತಿ ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ವಿದ್ಯಾರ್ಥಿಗಳು ಸಾಧನೆಗಾಗಿ ಶ್ರಮಿಸಬೇಕು. ನಿರಂತರ ಪ್ರಯತ್ನದಿಂದ ಸಾಧನೆ ಸಾಧ್ಯ.  ಕಾನೂನಿನ ತಿಳುವಳಿಕೆ ಮೂಡಿಸುವ ಲೇಖನಗಳನ್ನು ಓದಬೇಕು. ಟಿವಿ ಚಾನಲ್‌ಗಳಲ್ಲಿ  ಗ್ರಾಹಕರ ಹಕ್ಕುಗಳಿಗಾಗಿ ಬರುವಂತಹ ಕಾರ‍್ಯಕ್ರಮಗಳನ್ನು ವೀಕ್ಷಿಸಬೇಕು. ಕಾಲೇಜಿನಲ್ಲಿ ಓದುವಾಗ ನೀವೆಲ್ಲಾ ವಿದ್ಯಾರ್ಥಿಗಳು ಅದರ ಹೊರತಾಗಿ ನೀವು ಸಹ ಸಮಾಜದ ಒಂದು ಭಾಗ ಮುಂದೆ ಕುಟುಂಬದ,ಸಮಾಜದ ಜವಾಬ್ದಾರಿ ಹೊತ್ತುಕೊಳ್ಳುವವರು. ದಿನನಿತ್ಯದ ಜೀವನದಲ್ಲಿ ಪ್ರತಿಯೊಬ್ಬರು ಗ್ರಾಹಕರಾಗಿರುವುದರಿಂದ ಹಕ್ಕುಗಳು ಮತ್ತು ರಕ್ಷಣೆಗೆ ಇರುವ ಕಾನೂನುಗಳ ತಿಳುವಳಿಕೆ ಪಡೆದುಕೊಳ್ಳಬೇಕು. ಯಾವುದೇ ರೀತಿಯ ಖರೀದಿ ಮಾಡಿದರು ರಸೀದಿ ಪಡೆಯುವಂತಾಗಬೇಕು ಎಂದರು.
ಉಪನ್ಯಾಸಕರಾಗಿ ಆಗಮಿಸಿದ್ದ ನ್ಯಾಯವಾದಿ ಜಿ.ಎ.ಮೆತ್ತಗಲ್  ಗ್ರಾಹಕರಿಗಾಗಿ ಇರುವ ವಿವಿಧ ಕಾನೂನುಗಳು ಮತ್ತು ಸಂವಿಧಾನವು ಗ್ರಾಹಕರ ಹಿತರಕ್ಷಣೆಗಾಗಿ ರೂಪಿಸಿರುವ ಅಧಿನಿಯಮಗಳ ಕುರಿತು ವಿಸ್ತೃತವಾಗಿ ಉದಾಹರಣೆ ಸಮೇತ ಮಾತನಾಡಿದರು. ಕಾರ‍್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಗರಸಭಾ ಸದಸ್ಯ ಮುತ್ತುರಾಜ್ ಕುಷ್ಟಗಿ ಮಾತನಾಡಿ ಯಾವುದೇ ವಸ್ತುವನ್ನು, ಸೇವೆಯನ್ನು ಖರೀದಿಸುವಾಗ ಖಡ್ಡಾಯವಾಗಿ ರಸೀದಿ ಪಡೆಯಬೇಕು. ಈ ಮೂಲಕ ದೇಶಕ್ಕೆ ನಾವು ತೆರಿಗೆ ಪಾವತಿಸುವಂತಾಗುತ್ತದೆ. ಆ ತೆರಿಗೆಯಿಂದಲೇ ಸರಕಾರ ವಿವಿಧ ಯೋಜನೆಗಳನ್ನು ,ಅಭಿವೃದ್ದಿ ಕಾರ‍್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ತೆರಿಗೆ ಉಳಿಸಲು ಹೋಗಿ ರಸೀದಿ ಪಡೆಯದಿದ್ದಾಗ ಗ್ರಾಹಕರಿಗೆ ಮೋಸವಾಗುತ್ತದೆ. ನೀವು ಕೊಟ್ಟ ದುಡ್ಡಿಗೆ ಮೋಸವಾಗದಂತೆ ಸರಿಯಾಗಿ ಉತ್ಪಾದನಾ ದಿನಾಂಕ, ಸೇವೆಯ ವಿವರ ಎಲ್ಲವನ್ನು ಪಡೆಯಬೇಕು. ವಿದ್ಯಾವಂಥರು ಮೋಸ ಹೋಗುವುದು ಬಹಳ. ದೇಶ,ನಾಡು, ಊರಿನ ಬಗ್ಗೆ ನಮ್ಮದೆನ್ನುವ ಅಭಿಮಾನ ಇರಲಿ. ನಿಮ್ಮ ಸುತ್ತಮುತ್ತಲಿನ ವಾತಾವರಣ ಸ್ವಚ್ಛವಾಗಿಟ್ಟುಕೊಂಡಾಗ ಮನಸ್ಸು ಪರಿಶುದ್ಧವಾಗಿರುತ್ತದೆ. ಕಾಲೇಜಿನ ಆವರಣದಲ್ಲಿ ಗಿಡ,ಮರಗಳನ್ನು ನೆಡಲು ನಗರಸಭೆಯಿಂದ ಸಹಾಯ ಮತ್ತು ಸಹಕಾರ ಮಾಡುತ್ತೇವೆ ಎಂದರು.
ಕಾಲೇಜಿನ ಪ್ರಾಂಶುಪಾಲ ಎಸ್.ಬಿ.ಶಾಂತಪ್ಪನವರು ಅಧ್ಯಕ್ಷೀಯ ಭಾಷಣ ಮಾಡಿದರು.ಇನ್ನೊರ್ವ ಅತಿಥಿ ಉಪನ್ಯಾಸಕಾರದ ಸುರೇಶಕುಮರ ಸೊನ್ನದ ವೇದಿಕೆಯ ಮೇಲಿದ್ದರು.  ಕಾರ‍್ಯಕ್ರಮದಲ್ಲಿ ಪ್ರಾರ್ಥನಾಗೀತೆಯನ್ನು ಬಿ.ಎ. ವಿದ್ಯಾರ್ಥಿನಿ ಕು.ಲಕ್ಷ್ಮೀ ಮಾಡಿದರು. ಸ್ವಾಗತವನ್ನು ಉಪನ್ಯಾಸಕ ತಿಮ್ಮಾರಡ್ಡಿ ಮೇಟಿಯವರು ನೆರವೇರಿಸಿದರು. ಪ್ರಾಸ್ತಾವಿಕವಾಗಿ ಕಾರ‍್ಯಕ್ರಮದ ಕುರಿತು ಸೇವಾ ಸಂಸ್ಥೆಯ ಅಧ್ಯಕ್ಷರಾದ ರಾಜಾಬಕ್ಷಿ ಎಚ್.ವಿ. ಮಾತನಾಡಿದರು. ಕಾರ‍್ಯಕ್ರಮದ ನಿರೂಪಣೆಯನ್ನು ಉಪನ್ಯಾಸಕ ಎಸ್.ಯು.ಪ್ರಕಾಶಗೌಡ ಮಾಡಿದರು. ವಂದನಾರ್ಪಣೆಯನ್ನು ಉಪನ್ಯಾಸಕರಾದ ಸುರೇಶಕುಮಾರ ಸೊನ್ನದ ನೆರವೇರಿಸಿದರು. ಕಾರ‍್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು, ಅಮರದೀಪ್,  ವಿದ್ಯಾರ್ಥಿ,ವಿದ್ಯಾರ್ಥಿನಿಯರು ಭಾಗವಹಿಸಿದ್ದರು. 


Advertisement

0 comments:

Post a Comment

 
Top