PLEASE LOGIN TO KANNADANET.COM FOR REGULAR NEWS-UPDATES

ಬಸವಕೇಂದ್ರ ಗಂಗಾವತಿ ಇವರಿಂದ ಶರಣ ಸಂಗಮ ಕಾರ್ಯಕ್ರಮ
ಗಂಗಾವತಿ ೦೨:- ದಿನಾಂಕ ೦೧-೦೨-೨೦೧೫ ರಂದು ನಗರದ ಕಿತ್ತೂರು ರಾಣಿ ಚನ್ನಮ್ಮ ಮಾರ್ಗದಲ್ಲಿರುವ ಭುವನೇಶ್ವರಿ ಭವನದಲ್ಲಿ ಬಸವಕೇಂದ್ರ ಗಂಗಾವತಿಯವರ ಶರಣ ಸಂಗಮ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಆಗಮಿಸಿದ ಕೆ.ಚನ್ನಬಸಯ್ಯಸ್ವಾಮಿ, ಇಂಜಿನೀಯರ್ ಹಾಗೂ ಧರ್ಮದರ್ಶಿಗಳು ಶ್ರೀ ಚನ್ನಮಲ್ಲಿಕಾರ್ಜುನಮಠ ರವರು ಸೃಷ್ಠಿಯ ಸೊಬಗು ದೃಷ್ಠಿಯಲ್ಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಹೊಸ ವರ್ಷಾಚರಣೆಯನ್ನು ವಿವಿಧ ರೀತಿಯಲ್ಲಿ ಆಚರಿಸುವ ಇಂದಿನ ಸಮಾಜದಲ್ಲಿ ಗಂಗಾವತಿಯ ಬಸವಕೇಂದ್ರ ಹೊಸವರ್ಷದ ಮೊದಲ ತಿಂಗಳಲ್ಲಿ ಬರುವ ಎಲ್ಲಾ ಶರಣರ, ದಾರ್ಶನಿಕರ, ಚಿಂತಕರ ಹಾಗೂ ರಾಷ್ಟ್ರೀಯ ನೇತಾರರ ಸ್ಮರಣೆ ಹಾಗೂ ಜಯಂತಿಗಳನ್ನು ಆಚರಿಸುವ ಮೂಲಕ ಹೊಸ ವರ್ಷವನ್ನು ಆಚರಿಸುತ್ತಿರುವುದು ಶ್ಲಾಘನೀಯ. ಜನವರಿ ಮಾಸದ, ಮಾಸದ ನೆನಪುಗಳು ಎಂಬ ಶಿರ್ಷಿಕೆಯಡಿ ಜನವರಿ ೩ ಕರ್ನಾಟಕ ಗಾಂಧಿ ಹರ್ಡೇಕರ್ ಮಂಜಪ್ಪನವರ ಸ್ಮರಣೆ, ಜನವರಿ ೪ ಈದ್‌ಮಿಲಾಪ್ (ಮಹ್ಮದ್‌ಪೈಗಂಬರ್ ಜಯಂತಿ), ಜನವರಿ ೧೨ ಸ್ವಾಮಿ ವಿವೇಕಾನಂದರ ಜಯಂತಿ, ಜನವರಿ ೧೫ ಮಕರ ಸಂಕ್ರಮಣ ಹಾಗೂ ಕಾಯಕಯೋಗಿ ಸಿದ್ದರಾಮೇಶ್ವರ ಜಯಂತಿ, ಜನವರಿ ೨೧ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ, ಜನವರಿ ೨೩ ನೇತಾಜಿ ಸುಭಾಷ್‌ಚಂದ್ರಬೋಷ್ ಜಯಂತಿ,  ಜನವರಿ ೨೪ ಬಾಲಕಿಯರ ದಿನಾಚರಣೆ, ಜನವರಿ ೨೫ ರಾಷ್ಟ್ರೀಯ ಮತದಾರರ ದಿನಾಚರಣೆ ಹಾಗೂ ಡಾ|| ಸರೋಜಿನಿ ಮಹಿಷಿ ವಿಧಿವಶ, ಜನವರಿ ೨೪ ಗಣರಾಜ್ಯೋತ್ಸವ ಹಾಗೂ ಸಂವಿಧಾನ ಸಮರ್ಪಣಾ ದಿನಾಚರಣೆ , ಜನವರಿ ೨೭ ಪ್ರಖ್ಯಾತ ವ್ಯಂಗಚಿತ್ರಕಾರ ಆರ್.ಕೆ. ಲಕ್ಷ್ಮಣ ವಿಧಿವಶ, ಕೊನೆಯದಾಗಿ ಜನವರಿ ೩೦ ಮಹಾತ್ಮಾ ಗಾಂಧಿಜಿಯವರು ಹುತಾತ್ಮರಾದ ದಿನವನ್ನು ನೆನಪು ಮಾಡಿಕೊಳ್ಳುವುದರ ಮೂಲಕ ಶರಣ ಸಂಗಮ ಕಾರ್ಯಕ್ರಮ ಹೊಸ ವರ್ಷದಲ್ಲಿ ಮಾಡುತ್ತಿರುವುದು ಅಭಿನಂದನಾರ್ಹ ನಾವುಗಳು ಆ ಎಲ್ಲಾ ಮಹನೀಯರ ತತ್ವಾದರ್ಶಗಳನ್ನು ನಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಅವರನ್ನು ಗೌರವಿಸಬೇಕೆಂದು ತಿಳಿಸಿದರು. 

ಕನ್ನಡ ಜಾಗೃತಿ ಸಮಿತಿಯ ಅಧ್ಯಕ್ಷರಾದ ವಿಜಯಕುಮಾರ್ ರಾಯಕರ್ ಉದ್ಘಾಟನೆಯನ್ನು ನೆರವೇರಿಸಿ, ಈ ರೀತಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ, ಜಾಗೃತಿ ಸಮಿತಿಯು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಡಾ|| ಸಿದ್ದಯ್ಯ ಪುರಾಣಿಕರ ಹೆಸರಿನಲ್ಲಿ ಗ್ರಂಥಾಲಯವನ್ನು ಇದೇ ತಿಂಗಳಲ್ಲಿ ಪ್ರಾರಂಭಿಸುವುದಾಗಿ ತಿಳಿಸಿದರು. 

ಅಧ್ಯಕ್ಷತೆಯನ್ನು ವಹಿಸಿದ ಕೆ. ಬಸವರಾಜರವರು ಮಾತನಾಡಿ ಶರಣ ಸಂಗಮ ಕಾರ್ಯಕ್ರಮದ ಮೂಲಕ ಸಮಾಜದಲ್ಲಿ ಹೊಸ ಹೊಸ ವಿಚಾರಗಳನ್ನು ಕೊಡುವುದು ಬಸವಕೇಂದ್ರದ ಉದ್ದೇಶವಾಗಿದೆ. ಸಮಾಜ ಕೆಟ್ಟಿದೆ ಎಂದು ಸಮಾಜದಿಂದ ದೂರ ಹೋಗುವುದಕ್ಕಿಂತ ಅದರಲ್ಲಿದ್ದು, ನಮ್ಮ ಕೈಯಲ್ಲಾದ ಸೇವೆಯನ್ನು ಮಾಡುವುದರ ಮೂಲಕ ಸಮಾಜದಲ್ಲಿ ಹೊಸ ವೈಚಾರಿಕತೆ ತುಂಬುವ ಪ್ರಯತ್ನ ಮಾಡುವುದಾಗಿದೆ. 

ಈ ಕಾರ್ಯಕ್ರಮದಲ್ಲಿ ಕೆ.ಬಾಲಪ್ಪನವರು, ನಿವೃತ್ತ ಉಪತಹಸೀಲ್ದಾರರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಬಸವಕೇಂದ್ರದ ಪ್ರಧಾನ ಕಾರ್ಯದರ್ಶಿಗಳಾದ ಎ.ಕೆ.ಮಹೇಶಕುಮಾರ್‌ರವರು ಎಲ್ಲರನ್ನು ಸ್ವಾಗತಿಸಿ, ಪ್ರಾಸ್ತವಿಕವಾಗಿ ಶರಣ ಸಂಗಮದ ಬಗ್ಗೆ ಹಾಗೂ ಬಸವಕೇಂದ್ರದ ಬಗ್ಗೆ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯರಾದ ಸುರೇಶ ಪೋಲಕಲ್ ಮುಖ್ಯ ಅತಿಥಿಗಳಾಗಿ ಹಾಗೂ ಮಸ್ಕಿ ಮಂಜುನಾಥ, ನಿರ್ದೇಶಕರು, ಪಿಎಲ್‌ಡಿ ಬ್ಯಾಂಕ್ ವಿಶೇಷ ಆಹ್ವಾನಿತರಾಗಿ ಆಗಮಿಸಿದರು. ನಿವೃತ್ತ ಶಿಕ್ಷಕರಾದ ಎ.ಸಿ.ಗುಂಜಳ್ಳಿ, ಹಿರಿಯರಾದ ನಾರಾಯಣರಾವ್ ಅಪ್ಸಾನಿ, ಡಾ|| ಶಿವಕುಮಾರ ಮಾಲಿಪಾಟೀಲ್, ಹನುಮಂತಪ್ಪ ಸರಿಗಮ, ಶ್ರೀ ಶಿವಣ್ಣ ನೀಲಕಮಲ್, ಶಾಹೀನ್ ಕೌಸರ, ಡಾ|| ರಾಜಶೇಖರ ನಾರಿನಾಳ, ಕನ್ನಡ ಜಾಗೃತಿ ಸಮಿತಿಯ ಹೆಚ್. ರಾಜಶೇಖರ, ಕಾರಟಗಿಯ ಕಂಠೆಪ್ಪ ಗುಂಜಳ್ಳಿ, ವಿರುಪಾಕ್ಷಪ್ಪ ಶ್ರೇಷ್ಠಿ, ಕೆನರಾಬ್ಯಾಂಕ್ ಉದ್ಯೋಗಿ ತಿಪ್ಪೇಸ್ವಾಮಿ, ಬಸವಕೇಂದ್ರದ ಉಪಾಧ್ಯಕ್ಷರಾದ ಶರಣಪ್ಪ ಹೆಚ್. ಉಪಸ್ಥಿತರಿದ್ದರು. 

ರಾಮಕೃಷ್ಣರವರ ನೃತ ಸಂಯೋಜನೆಯಲ್ಲಿ, ರೂಪಕವನ್ನು ವಿದ್ಯಾರ್ಥಿಗಳಾದ ಕು|| ಅಮೃತವರ್ಷಿಣಿ, ಕು|| ಶಾರದಾ, ಕು|| ತ್ರಿವೇಣಿ, ಕು|| ಅರ್ಜುನ ನಡೆಸಿಕೊಟ್ಟರು.

ಸುಳೇಕಲ್ ವೀರೇಶರವರು ಪ್ರಾರ್ಥಿಸಿದರು, ಶ್ರೀಮತಿ ವೀರಮಹೇಶ್ವರಿ, ಕೇಂದ್ರಿಯ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶರಣು ಸಮರ್ಪಣೆ ಸಲ್ಲಿಸಿದರು. ಶಿಕ್ಷಕ ಸೋಮು ಕುದರಿಹಾಳ ಕಾರ್ಯಕ್ರಮ ನಿರೂಪಿಸಿದರು ಎಂದು ಬಸವಕೇಂದ್ರದ ಪ್ರಧಾನ ಕಾರ್ಯದರ್ಶಿಗಳಾದ ಎ.ಕೆ.ಮಹೇಶಕುಮಾರ್‌ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

0 comments:

Post a Comment

 
Top