PLEASE LOGIN TO KANNADANET.COM FOR REGULAR NEWS-UPDATES


ಪ.ಜಾತಿ/ಪ.ಪಂಗಡ ಗುತ್ತಿಗೆದಾರರಿಗೆ ಶೇ.೨೫% ರಷ್ಟು ಮೀಸಲಾತಿಯನ್ನು ಎಲ್ಲಾ ವಿಭಾಗದ ಇಲಾಖೆಗಳಲ್ಲಿ ಕರೆಯತಕ್ಕಂತ ಕಾಮಗಾರಿಗಳ ತುಂಡು ಗುತ್ತಿಗೆ ಹಾಗೂ ಟೆಂಡರ್ ಪ್ರಕ್ರಿಯಗಳಲ್ಲಿ ಸಂಬಂಧ ಪಟ್ಟ ಸ.ಕಾ.ನಿ. ಅಭಿಯಂತರರು ಕಡೆಗಣಿಸುತ್ತಿರುವ ಬಗ್ಗೆ ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ.
ಕೊಪ್ಪಳ: ಸರಕಾರದ ಆದೇಶ ಸಂಖ್ಯೆ : SWಆ-೩೪ಃಅ೨೦೦೪ ರಂತೆ ಪ.ಜಾತಿ/ಪ.ಪಂಗಡ ಗುತ್ತಿಗೆದಾರರಿಗೆ ಶೇ. ೨೫% ರಷ್ಟು ಮೀಸಲಾತಿಯನ್ನು ನೀಡಿದೆ. ಆದರ ಆದೇಶಕ್ಕೆ ಎಲ್ಲಾ ಇಲಾಖೆಗಳಿಂದ ಸರಿಯಾದ ಸ್ಪಂದನೆ ಸಿಗದ ಕಾರಣ ದಿನಾಂಕ ೦೮-೧೨-೨೦೧೪ ರಂದು ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರರು ಪಂಚಾಯತರಾಜ ಇಂಜನೀಯರಿಂಗ್ ವಿಭಾಗ ಕೊಪ್ಪಳರವರ ಕಛೇರಿ ಎದುರು ಅರೆಬೆತ್ತಲೆ ಧರಣಿಯನ್ನು ಹಮ್ಮಿಕೊಂಡು ಪ್ರತಿಭಟನೆ ಮಾಡಲಾಯಿತು. ತದನಂತರದಲ್ಲಿ ಸಂಭಂಧಪಟ್ಟಂತ ಇಲಾಖೆಯ ಅಧಿಕಾರಿಗಳು ಸರ್ಕಾರದ ಆದೇಶದ ಅನ್ವಯ ಎಲ್ಲಾ ಇಲಾಖೆಗಳ ತುಂಡು ಗುತ್ತಿಗೆಹಾಗು ಟೆಂಡರ್ ಕಾಮಗಾರಿಗಳಲ್ಲಿ ಶೇ. ೨೫% ರಷ್ಟು ಮೀಸಲಾತಿ ನೀಡಲು ಲಿಖಿತ ಭರವಸೆಯನ್ನು ನೀಡಿ. ಅದರಂತೆ ಕೆಲವು ಇಲಾಖೆಗಳು ತುಂಡು ಗುತ್ತಿಗೆಗಳನ್ನು ತೋರಿಕೆಗೆ ನೀಡಿದಂತೆ ಮಾಡಿ ಗೊಂದಲ ಸೃಷ್ಠಿಸುತ್ತಿರುವ ಎಲ್ಲಾ ಇಲಾಖೆಗಳ ಸ.ಕಾ.ನಿ. ವಿಭಾಗದ ಅಧಿಕಾರಿಗಳು ತಮ್ಮ ಇಷ್ಠ ಬಂದಂತೆ ಕಾಮಗಾರಿಗಳನ್ನು ಹಂಚಿಕೆ ಮಾಡುತತಿರುವುದನ್ನು ನಾವು ಪ್ರಶ್ನಿಸಿದಾಗ ಜನಪ್ರತಿನಿಧಿಗಳನ್ನು ಹೆಸರುಗಳನ್ನು ಹೇಳಿ ಅಧಿಕಾರಿಗಳನ್ನು ತಮ್ಮ ಕರ್ತವ್ಯಗಳನ್ನು ಮರೆತು ಜಾರಿಕೋಳ್ಳುವಂತ ಅಧಿಕಾರಿಗಳು ವಿಳಂಬವಾದಲ್ಲಿ ಮುಂದಿನ ದಿನಮಾನಗಳಲ್ಲಿ ಉಗ್ರವಾದ ಹೋರಾಟವನ್ನು ಪ.ಜಾತಿ ಪ.ಪಂಗಡ ಸಿವಿಲ್ ಗುತ್ತಿಗೆದಾರರು ಸಂಘದಿಂದ ಹಮಿಕೊಳ್ಳಲಾಗುತ್ತಿದೆ. 
 ಮಾನ್ಯ ಸ.ಕಾ.ನಿ.ಅ.ಪಮ ರಾ.ಇಂ ಉಪ ವಿಬಾಗ ಕೊಪ್ಪಳ, ಕುಷ್ಟಗಿ, ಯಲಬುರ್ಗಾ, ಗಂಗಾವತಿ
ಮಾನ್ಯ ಸ.ಕಾ.ನಿ.ಅ.ಗ್ರಾ.ಕು.ನೀ.ಸ.ನೈ.ಇ.ಉಪ- ವಿಭಾಗ ಕೊಪ್ಪಳ,ಕುಷ್ಟಗಿ,ಯಲಬುರ್ಗಾ, ಗಂಗಾವತಿ
ಮಾನ್ಯ.ಸ.ಕಾ.ಅ.ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಸಂಪರ್ಕ ಇಲಾಖೆ ಉಪ- ವಿಭಾಗ ಕೊಪ್ಪಳ,ಕುಷ್ಟಗಿ,ಯಲಬುರ್ಗಾ, ಗಂಗಾವತಿ 
ಮಾನ್ಯ ಸ.ಕಾ.ಅ ಸಣ್ಣ ನೀರಾವರಿ ಇಲಾಖೆ ಉಪ ವಿಬಾಗ ಕೊಪ್ಪಳ ಕುಷ್ಟಗಿ ಯಲಬುರ್ಗಾ ಗಂಗಾವತಿ.
ಮಾನ್ಯೆ ಸ.ಕಾ.ಅ ಹಿರೇಹಳ್ಳ ಯೋಜನೆ ಕಿನ್ನಾಳ ತಾ||ಜಿ|| ಕೊಪ್ಪಳ 
ಮಾನ್ಯ ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳು ಕೊಪ್ಪಳ ಕುಷ್ಟಗಿ,ಯಲಬುರ್ಗಾ.ಗಂಗಾವತಿ
ಮಾನ್ಯ ಪೌರಾಯುಕ್ತರು ನಗರ ಸಭೆ ಕೊಪ್ಪಳ ಕುಷ್ಟಗಿ, ಯಲಬಯರ್ಗಾ, ಗಂಗಾವತಿ.
ಮಾನ್ಯ ಸ.ಕಾ.ನಿ.ಅಧಿಕಾರಿಗಳು ತಾ.ಪಂ ಕೊಪ್ಪಳ,ಕುಷ್ಟಗಿ, ಯಲಬುರ್ಗಾ, ಗಂಗಾವತಿ.
ಮುಖ್ಯ ಅಧಿಕಾರಿಗಳು ಪಟ್ಟಣ ಪಂಚಾಯತಿ ಕಾರ್ಯಾಲಯ ಯಲಬುರ್ಗಾ.
ಪಿ.ಡಿ.ಓ ಗ್ರಾ.ಪಂ ಕಾರ್ಯಾಲಯ ಕೊಪ್ಪಳ, ಕುಷ್ಟಗಿ, ಯಲಬುರ್ಗಾ,ಗಂಗಾವತಿ.
ಈ ಎಲ್ಲಾ ಇಲಾಖೆಯ ಅಧಿಕಾರಿಗಳು ದಲಿತ ಗುತ್ತಿಗೆದಾರರ ವಿರೋಧ ನೀತಿಯನ್ನು ಅನುಸರಿಸುತ್ತಿದ್ದಾರೆ. ಅಲ್ಲದೆ ಸರಕಾರದ ಸುತ್ತೋಲೆಯನ್ನು ತಿರಸ್ಕರಿಸುವಂತಹ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಇಂದಿನ ದಿನದಿಂದಲೆ ಸರಕಾರದ ಸುತ್ತೋಲೆಯ ಪ್ರಕಾರ ಪ.ಜಾತಿ/ಪ.ಪಂಗಡ ಗುತ್ತಿಗೆದಾರರಿಗೆ ಸರಿಯಾದ ರೀತಿಯಲ್ಲಿ ಶೇ ೨೫% ರಷ್ಟು ಕಾಮಾಗಾರಿಗಳನ್ನು ಮತ್ತು ಸರಕು ಸಾಗಾಣಿಕೆಯನ್ನು ನೀಡಬೇಕು. ಹಾಗೂ ದಲಿತರ ಈ ಸೌಲಭ್ಯವನ್ನು ತಪ್ಪಿಸುವ ಸಲುವಾಗಿಯೇ ಕೊಪ್ಪಳ ನಗರದಲ್ಲಿ ಇರುವ ನಿರ್ಮಿತಿ ಕೇಂದ್ರ ಮತ್ತು ಕರ್ನಾಟಕ ಭೂಸೇನಾ ನಿಗಮ ಅನ್ನುವ ಹೆಸರಿನ (ಎನ್.ಜಿ.ಒ) ಗಲಿಗೆ ಸಿವಿಲ್ ಕಾಮಾಗಾರಿಯನ್ನು ನೀಡುತ್ತಿದ್ದಾರೆ. ಸದರಿ (ಎನ್.ಜಿ.ಓ)ಗಳಿಗೆ ಒಂದು ವೇಳೆ ಕಾಮಾಗಾರಿಯನ್ನು ನೀಡಿದ್ದರೆ ಮೇಲೆ ತಿಳಿಸಿದ ಶೇ.೨೫% ರಷ್ಟು ಪ.ಜಾತಿ ಮತ್ತು ಪ.ಪಂಗಡ ಗುತ್ತಿಗೆದಾರರಿಗೆ ಮೀಸಲಾತಿ ಕಡ್ಡಾಯಗೊಳಿಸಿ ಆದೇಶ ಹೊರಡಿಸಬೇಕು.
ಕಾರಣ ತಾವುಗಳು ಎನ್.ಜಿ.ಓ.ಗಳಿಗೆ ಸಿವಿಲ್ ಕಾಮಾಗಾರಿಗಳ ನೀಡುವುದರಿಂದ ಪರವಾನಿಗೆ ಪಡೆದ ಸಿವಿಲ್ ಗುತ್ತಿಗೆದಾರರಿಗೆ ಕೆಲಸ ಇಲ್ಲದಂತಾಗುತ್ತದೆ. ಆದ ಕಾರಣ ದಯವಿಟ್ಟು ಕೂಡಲೇ ಸರಕಾರದ ಸುತ್ತೋಲೆಯ ಆದೇಶದ ಪ್ರಕಾರ ಶೇ.೨೫% ರಷ್ಟು ಪ.ಜಾತಿ ಮತ್ತು ಪ.ಪಂಗಡ ಗುತ್ತಿಗೆದಾರರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ದಲಿತ ವಿರೋದಿ ನೀತಿಯನ್ನು  ಅನುಸರಿಸುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕ್ಕದ್ದಮೆ ದಾಖಲಿಸಿ ಸಿವಿಲ್ ಗುತ್ತಿಗೆದಾರರಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ವಿನಂತಿಸುತ್ತಾ. ವಿಳಂಬವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ಪ.ಜಾತಿ ಮತ್ತು ಪ.ಪಂಗಡ ಗುತ್ತಿಗೆದಾರರ ಸಂಘದಿಂದ ಹಮ್ಮಿಕೊಳ್ಳಲಾಗುತ್ತದೆ. ಎಂದು ಸದರಿ ಮೂಲಕ ಎಚ್ಚರಿಸುತ್ತೇವೆ.

ಬೇಡಿಕೆಗಳು
ಸರಕಾರದ ಆದೇಶದ ಪ್ರಕಾರ ಶೇ.೨೫% ರಷ್ಟು ರಿಂದ ಶೇ.೫೦% ಕ್ಕೆ ಪ.ಜಾತಿ/ಪ.ಪಂಗಡ ಗುತ್ತಿಗೆದಾರರಿಗೆ ಹೆಚ್ಚಿಸುವುದು.
ಇ-ಪ್ರಕೃಮೆಂಟ್ ಟೆಂಡರನಲ್ಲಿ ಶೇ.೫೦ರಷ್ಟು ಪ.ಜಾತಿ/ಪ.ಪಂಗಡ ಗುತ್ತಿಗೆದಾರರಿಗೆ ಒದಗಿಸಬೇಕು.
ಎಲ್ಲಾ ಕಾಮಾಗಾರಿಗಳ ಕ್ರೀಯಾ ಯೋಜನೆಯನ್ನು ಕಾಮಾಗಾರಿಗಳ ಮುಂದೆ ಶೇಕಡಾ ಮೀಸಲಾತಿಯನ್ನು ತೋರಿಸುವುದು.
ದಲಿತ ವಿರೋಧಿಯನ್ನು ಅನುಸರಿಸುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ದಾವೆ ಹಾಕುವುದು.
ನಿರ್ಮಿತಿ ಕೇಂದ್ರ ಹಾಗೂ ಕರ್ನಾಟಕ ಭೂಸೇನಾ ನಿಗಮ (ಎನ್.ಜಿ.ಓ)ಗಳಿಗೆ ಸಿವಿಲ್ ಕಾಮಗಾರಿ ನೀಡಬಾರದು. ಒಂದು ವೇಳೆ ಕಾಮಗಾರಿಯನ್ನು ನೀಡಿದರೆ ಗುತ್ತಿಗರದಾರರಿಗೆ ಅನ್ಯಾಯವಾಗುತ್ತದೆ. ಇದರಿಂದ ನೀಡಿದಂತೆ ಕಾಮಗಾರಿಯನ್ನು ಕೂಡಲೆ ರದ್ದು ಪಡಿಸಬೇಕು.
ಎಸ್.ಸಿ.ಪಿ/ಟಿ.ಎಸ್.ಪಿ ಮೂಲಭೂತ ಸೌಕರ್ಯ ಕಾಮಗಾರಿಯನ್ನು ಪ.ಜಾತಿ/ಪ.ಪಂಗಡದವರಿಗೆ ಮಾತ್ರ ನೀಡಬೇಕು.
ಸಮಾಜ ಕಾಲ್ಯಣ ಇಲಾಕೆಯಲ್ಲಿ ಬರುವ ಸರಕು ಸರಬರಾಜುಗಳನ್ನು ಸುಮಾರು ಶೇ.೭೫ರಷ್ಟು ಕಾಮಗಾರಿಯನ್ನು ಪ.ಜಾತಿ/ಪ.ಪಂಗಡ (ಎನ್.ಜಿ.ಓ)ಗಳಿಗೆ ನೀಡಬೇಕು.
ನಗರ ಸಭೆಯಲ್ಲಿ ಬರುವ ಎಸ್.ಎಫ್.ಸಿ ೧೩ನೇ ಹಣಕಾಸು ೨೨.೭೫ ಮತ್ತು ೭.೨೫ ಅನುದಾನವನ್ನು ಪ.ಜಾತಿ/ಪ.ಪಂಗಡದ ಗುತ್ತಿಗೆದಾರರಿಗೆ ನೀಡಬೇಕು.
ಕೊಪ್ಪಳ ನಗರ ಸಭೆಯಲ್ಲಿ ಇರುವ ಸಹಾಯ ಕಾರ್ಯಾನಿರ್ವಾಹಕ ಅಧಿಕಾರಿ ಎಂ. ಗಂಗಾಧರ ರವರು ಜಾತಿ ಗೊಂದಲವನ್ನು ಸೃಷ್ಠಿಸುತ್ತಿರುವುದರಿಂದ ಇವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಬೇಕು.
ಪ.ಜಾತಿ/ಪ.ಪಂಗಡದ ಗುತ್ತಿಗೆದಾರರಿಗೆ ಟೆಂಡರನಲ್ಲಿ ಆದ ಕಾಮಗಾರಿಗಳನ್ನು ನಿರ್ವಹಿಸಲು ಷರತ್ತುಗಳನ್ನು ಸಡಿಲಿಸಿ ಎಫ್.ಎಸ್.ಡಿ ಮತ್ತು  ಡಿ.ಡಿ. ಯನ್ನು ನೀಡಲು ಶೇ.೫೦% ರಷ್ಟು ಕಡಿಮೆ ಮಾಡಿ ಕೆಲಸ ನಿರ್ವಹಿಸಲು ಅನುಕೂಲಮಾಡಿ ಕೊಡಬೇಕು.
ಜಿಲ್ಲಾ  ಪಂಚಾಯತ ಅನುದಾನವಾದ  ಟಿ.ಎಫ್.ಸಿ ಮತ್ತು ಜಿಲ್ಲಾಧಿಕಾರಿಯ ಅನುದಾನವಾದ ತುರ್ತು ಕುಡಿಯುವ ನೀರು ಸರಬರಾಜು ಯೋಜನೆಯನ್ನು ಶೇ.೫೦% ರಷ್ಟು ತುಂಡು ಗುತ್ತಿಗೆ ಮಾಡಿವುದು.
ತಾಲೂಕವಾರು ಹೆಚ್.ಕೆ.ಡಿ.ಪಿ ಯೋಜನೆಯಲ್ಲಿ ಶೇ.೫೦% ರಷ್ಟು ಅನುದಾನವನ್ನು ಪ.ಜಾತಿ/ಪ.ಪಂಗಡದ ಗುತ್ತಿಗೆದಾರರಿಗೆ ನೀಡಬೇಕು.
ನಂಜುಡಪ್ಪ ಯೋಜನೆಯಲ್ಲಿ ಬರುವ ಸಿವಿಲ್ ಕಾಮಗಾರಿಯನ್ನು ಪ.ಜಾತಿ/ಪ.ಪಂಗಡದ ಗುತ್ತಿಗೆದಾರರಿಗೆ ನೀಡಬೇಕು ಶೇ.೫೦% ರಷ್ಟು ನೀಡಬೇಕು.
ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿಯಲ್ಲಿ ಬರುವ ಸಿವಿಲ್ ಕಾಮಗಾರಿಯನ್ನು ಪ.ಜಾತಿ/ಪ.ಪಂಗಡದ ಗುತ್ತಿಗೆದಾರರಿಗೆ ನೀಡಬೇಕು.
ಕೆ.ಇ.ಬಿ.ಯಲ್ಲಿ ಬರುವ ಸಿವಿಲ್ ಕಾಮಗಾರಿಯನ್ನು ಪ.ಜಾತಿ/ಪ.ಪಂಗಡದ ಗುತ್ತಿಗೆದಾರರಿಗೆ ಶೇ.೫೦% ರಷ್ಟು ನೀಡಬೇಕು.
ಈ ಸಂದರ್ಭದಲ್ಲಿ ಹನುಮೇಶ ಕಡೇಮನಿ, ಶಿವಮೂರ್ತಿ ಗುತ್ತೂರು, ಮಲ್ಲಿಕಾರ್ಜು ಹುಲ್ಲೂರು, ಸಿದ್ರಾಮಪ್ಪ ಹೊಸಮನಿ, ರಾಮಣ್ಣ ಚೌಡ್ಕಿ, ರಮೇಶ ದೊಡ್ಡಮನಿ, ಸುರೇಶ ಹೊಸಮನಿ, ರಮೇಶ ಬೆಲ್ಲದ್, ವೀರಣ್ಣ ಹುಣಸಿಮರದ, ಮುತ್ತುರಾಜ ಮಂಗಳೂರು, ಶ್ರೀಧರ ಬನ್ನಿಕೊಪ್ಪ, ಕಾಶೀಮಪ್ಪ ಬೀಜಕಲ್, ಹನುಮಂತಪ್ಪ ಮುತ್ತಾಳ, ಪರಸಪ್ಪ ಮೆಗೂರು ಮುಂತಾದವರು ಉಪಸ್ಥಿತರಿದ್ದರು. 

Advertisement

0 comments:

Post a Comment

 
Top