ಕೊಪ್ಪಳ: ನಗರದ ರಿಯಲ್ ಎಸ್ಟೇಟ್ ಉಧ್ಯಮಿ, ಕಾಂಗ್ರೆಸ್ ಮುಖಂಡ ಕೆ.ಎಂ.ಸೈಯದ್ ಗೆ ಜೀವ ಬೆದರಿಕೆಯೊಡ್ಡಿದ್ದ ಮೂವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಎ.ರಾಜಾ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಬಂಧಿತರು ಕೊಪ್ಪಳದ ಫರೀದುದ್ದೀನ್ ಮಾಳೆಕೊಪ್ಪ(೩೨),ನಿಜಾಮುದ್ದಿನ ಖಾಜಾಮೈನುದ್ದಿನ್ ( ೨೪) ಬಳ್ಳಾರಿಯ ವಿಜಯಕುಮಾರ ಪಾಟೀಲ (೩೩) ಎಂದು ಗುರುತಿಸಲಾಗಿದೆ.

ಬಂಧಿತರಿಂದ ಪಿಸ್ತೂಲ್ ಮ್ಯಾಗ್‌ಜೀನ್, ೬ ಬುಲೆಟ್, ಪಿಸ್ತೂಲಿನ ಮುರಿದ ಪಿನ್, ಮೊಬೈಲ್ ಮತ್ತು ೩೫೦೦ ರೂಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಿಹಾರದಿಂದ ಪಿಸ್ತೂಲ್ ಖರೀದಿಸಿ ತಂದ ಪರೀದುದ್ದೀನ್ ತನ್ನ ಗೆಳೆಯರಾದ ನಿಜಾಮುದ್ದೀನ್ ಮತ್ತು ವಿಜಯಕುಮಾರ್ ಪಾಟೀಲ್ ರಿಗೆ ತೋರಿಸಿ ಹಣ ಗಳಿಸುವ ಆಸೆ ತೋರಿಸಿದ್ದಾನೆ. ಕಳೆದ ಅಕ್ಟೋಬರ್ ನಲ್ಲಿ ಕೆ.ಎಂ.ಸಯ್ಯದಗೆ ಫೋನ್ ಮಾಡಿ ೧೦ ಲಕ್ಷ ರೂಪಾಯಿಯ ಬೇಡಿಕೆ ಇಟ್ಟಿದ್ದಾನೆ. ದುಡ್ಡು ಕೊಡಲು ಸಾಧ್ಯವಿಲ್ಲ ಎಂದು ಕೆ.ಎಂ.ಸಯ್ಯದ್ ಹೇಳಿದಾಗ ಜೀವ ಬೆದರಿಕೆ ಒಡ್ಡಿದ್ದಾನೆ. ಫೆ.೯ರಂದು ಬೆಳಿಗ್ಗೆ ೯ ಗಂಟೆಯ ಸುಮಾರಿಗೆ ಕೆ.ಎಂ.ಸಯ್ಯದ್ ಮನೆ ಎದುರಿಗೆ ಕವರ್ ನಲ್ಲಿ ಬುಲೆಟ್ ಎಸೆದು ಹೋಗಿದ್ದಾನೆ. ಇದು ಸ್ಯಾಂಪಲ್ ಹಣ ಕೊಡದಿದ್ದರೆ ಪ್ರಾಣ ತೆಗೆಯುತ್ತೇವೆ ಎಂದು ಬೆದರಿಕೆ ಹಾಕಿದ್ದಾನೆ. ಈ ಕುರಿತು ಕೆ.ಎಂ.ಸಯ್ಯದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ೫ ಲಕ್ಷ ರೂಗಳನ್ನು ಹಾಲವರ್ತಿ ರಸ್ತೆ ಸುಡುಗಾಡ ಗಟ್ಟಿ ಬಳಿ ತಂದು ಕೊಡುವಂತೆ ಮಧ್ಯಾಹ್ನ ಕರೆಮಾಡಿದ ಫರೀದುದ್ದಿನ್ ನನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ. ಪೊಲೀಸರೇ ೫ ಲಕ್ಷ ರೂ ಗಳನ್ನು ತೆಗೆದುಕೊಂಡು ಹೋಗಿದ್ದಾರೆ. ನಂತರ ನಡೆದ ಕಾರ‍್ಯಾಚರಣೆಯಲ್ಲಿ ಮೂವರನ್ನು ಬಂಧಿಸಲಾಗಿದೆ. ಡಿವೈಎಸ್ಪಿ ರಾಜೀವ್, ನಗರ ಪೋಲೀಸ್ ಠಾಣೆಯ ಇನ್ಸಪೆಕ್ಟರ್ ಮೋಹನ ಪ್ರಸಾದ ಸೇರಿದಂತೆ ಇತರ ಪೋಲಿಸರು ಕಾರ‍್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
0 comments:
Post a Comment