PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಫೆ. :ರಾಜ್ಯದಲ್ಲಿ ಇನ್‌ಪ್ಲೊಯೆಂಜಾ ಎ ಹೆಚ್೧ ಎನ್೧ ರೋಗ ವ್ಯಾಪಕವಾಗಿ ಹರಡುತ್ತಿರುವ ಬಗ್ಗೆ ಕೊಪ್ಪಳ ಜಿಲ್ಲೆಯ ಜನ ಆತಂಕ ಪಡುವ ಅಗತ್ಯವಿಲ್ಲ.  ಆದರೆ ಸಾರ್ವಜನಿಕರು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ್ ಬಾಸೂರ ಅವರು ಮನವಿ ಮಾಡಿದ್ದಾರೆ.
  ಇನ್‌ಪ್ಲೊಯೆಂಜಾ ಎ (ಹೆಚ್೧ ಎನ್೧) ಇದು ಒಂದು ಸಾಂಕ್ರಾಮಿಕ ರೋಗವಾಗಿದ್ದು, ಇನ್‌ಫ್ಲೂಯೆಂಜಾ ಎಂಬ ವೈರಸ್‌ನಿಂದ ಬರುತ್ತದೆ.  ಇನ್‌ಫ್ಲೂಯೆಂಜಾ ಎಂದರೆ ವೈರಸ್‌ನಿಂದ ಹರಡುವ ಶ್ವಾಸಕೋಶಕ್ಕೆ ಸಂಬಂಧಪಟ್ಟ ರೋಗ ಎಂಬುದಾಗಿದೆ.  ಈ ರೋಗವು ಸೋಂಕಿನಿಂದ ಬಳಲಿದ ವ್ಯಕ್ತಿಯಿಂದ ಇತರೆ ವ್ಯಕ್ತಿಗಳಿಗೆ ಉಸಿರಾಟದ ಮುಖಾಂತರ ತೀವ್ರವಾಗಿ ಹರಡುತ್ತದೆ.  (ಊ೧ ಓ೧ ) ಹೆಚ್೧ ಎನ್೧, ವೈರಸ್ ದೇಹವನ್ನು ಪ್ರವೇಶಿಸಿ ರೋಗ ಲಕ್ಷಣಗಳು ಕಾಣಿಸುವ ಅವಧಿ ತುಂಬಾ ಕಡಿಮೆ ಆಗಿರುತ್ತದೆ. 

ಹೆಚ್೧ ಎನ್೧ ರೋಗದ ಲಕ್ಷಣಗಳು :
v ಏಕಾ ಏಕಿ ಜ್ವರ, ತಲೆನೋವು, ಮೈಕೈನೋವು, ಮೂಗು ಸೋರಿಕೆ, ಸುಸ್ತು ಗಂಟಲು ಕೆರೆತ ಮತ್ತು ತೀವ್ರ ತರಹದ ಉಸಿರಾಟ ತೊಂದರೆ ಅದರ ಜೊತೆಯಲ್ಲಿ ವಾಂತಿ ಭೇದಿಯ ಆಗಬಹುದು.
v ಸಾಮಾನ್ಯವಾಗಿ ೧೮ ತಿಂಗಳ ಒಳಗಿನ  ಮಕ್ಕಳು ಮತ್ತು ವೃದ್ಧರಲ್ಲಿ ಹಾಗೂ ಹೃದಯರೋಗ, ಸಕ್ಕರೆ ಖಾಯಿಲೆ, ಹೆಚ್‌ಐವಿ ಯಿಂದ ಬಳಲುತ್ತಿರುವವರಲ್ಲಿ ತೀವ್ರ ಸ್ವರೂಪದ ಉಸಿರಾಟ ಮಂಡಲದ ರೋಗವನ್ನು  ಉಂಟು ಮಾಡಿ ಸಾವು ಸಂಭವಿಸುವ ಸಾಧ್ಯತೆಗಳಿವೆ. 

ಹೆಚ್೧ ಎನ್೧,  ರೋಗ ಬಾರದಂತೆ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳು :
v ಕೆಮ್ಮುವಾಗ ಅಥವಾ ಸೀನುವಾಗ ನಿಮ್ಮ ಬಾಯಿ ಮತ್ತು ಮೂಗನ್ನು ಕರವಸ್ತ್ರದಿಂದಾಗಲಿ ಅಥವಾ ಟಿಶ್ಯೂ ಕಾಗದದಿಂದಾಗಲಿ ಮುಚ್ಚಿಕೊಳ್ಳಬೇಕು.
v ಮೂಗು ಕಣ್ಣು, ಅಥವಾ ಬಾಯಿಯನ್ನು ಮುಚ್ಚಿಕೊಳ್ಳುವ ಮೊದಲು ಮತ್ತು ನಂತರ ಕೈಗಳನ್ನು ಸಾಬೂನಿನಿಂದ ಮತ್ತು ನೀರಿನಿಂದ ಆಗಾಗ್ಗೆ ಚೆನ್ನಾಗಿ ತೊಳೆದುಕೊಳ್ಳಬೇಕು.
v ಜನಸಂದಣಿ ಇರುವ ಸ್ಥಳಗಳಿಗೆ ಹೋಗುವುದನ್ನು ಆದಷ್ಟು ತಡೆಗಟ್ಟಿ.
v ಕೆಮ್ಮು, ನೆಗಡಿ, ಸೀನು ಮತ್ತು ಜ್ವರದಂತಹ ಸೋಂಕಿನ ಚಿಹ್ನೆಯಿರುವ ಜನರಿಂದ ಕನಿಷ್ಠ ಒಂದು ಮಾರು ದೂರವಿರುವುದು ಸೂಕ್ತ. 
v ಚೆನ್ನಾಗಿ ನಿದ್ರೆ ಮಾಡಿ, ದೈಹಿಕವಾಗಿ ಚಟುವಟಿಕೆಯಿಂದಿರಬೇಕು ಮತ್ತು ಒತ್ತಡವನ್ನು ಪರಿಣಾಮಕಾರಿಯಾಗಿ ನಿಭಾಯಿಸುವುದು ಒಳ್ಳೆಯದು. 
v ಧಾರಾಳವಾಗಿ ನೀರು ಕುಡಿಯಿರಿ ಮತ್ತು ಪೌಷ್ಠಿಕಾಂಶವಿರುವ ಆಹಾರ ಸೇವಿಸಿ. 

              ರೋಗ ಬಂದಾಗ ಚಿಕಿತ್ಸೆಗೆ ಪರದಾಡುವ ಬದಲು, ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಉತ್ತಮ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

0 comments:

Post a Comment

 
Top