ಹನಿ ಹನಿ ಸಸೇರಿದರೆ ಹಳ್ಳ
ಕೊಪ್ಪಳ: ದಿ.೧೪ ರಂದು ತಾಲೂಕಿನ ಕವಲೂರು ಗ್ರಾಮದ ಬಾಪೂಜಿ ವಿದ್ಯಾಸಂಸ್ಥೆಯ ಕನ್ನಡ ಕಾನ್ವೆಂಟ್ ಹಿರಿಯ ಪ್ರಾಥಮಿಕ ಶಾಲೆಯ ೧೨ ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗು ಸನ್ಮಾನ ಕಾಯ್ಕ್ರಮ ಶನಿವಾರದಂದು ವಿಜೃಂಭಣೆಯಿಂದ ಜರುಗಿತು.
ವೇದಿಕೆಯ ಮೇಲೆ ಸಾನಿಧ್ಯ ವಹಿಸಿದ್ದ ಡಾ. ಶ್ರೀ ಜಗದ್ಗುರು ಅನ್ನದಾನೇಶ್ವರ ಮಹಾಸ್ವಾಮಿಗಳು ಸಂಸ್ಥಾನ ಮುಂಡರಗಿ ಇವರು ವಹಿಸಿದ್ದರು. ಹಾಗು ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಶಾಹಿದ್ ಹುಸೇನಸಾಬ ತಹಸಿಲ್ದಾರ ವಹಿಸಿದ್ದರು. ಮುಖ್ಯ ಅಥಿತಿಸ್ಥಾನದಲ್ಲಿ ಪ್ರದೀಪಗೌಡ ಮಾಲಿಪಾಟೀಲ್, ಜೆ.ಎ. ಶಾಲೆಯ ವಿ.ಸಿ. ಹಂಪಿಮಠ, ಕವಲೂರ್ ಕ್ಲಷ್ಟರ್ ಮಟ್ಟದ ಸಿ.ಆರ್.ಪಿ ಚಂದ್ರಗಿರಿಯಪ್ಪ ಬೆಳಗಿ, ಶಬ್ಬಿರ್ ತಹಶಿಲ್ದಾರ, ತಿಮ್ಮಣ್ಣ ಸಿದ್ನೇಕೊಪ್ಪ ಇನ್ನಿತರರು ಉಪಸ್ಥಿತರಿದ್ದರು.
ಉಪನ್ಯಾಸಕರಾಗಿ ಆಗಮಿಸಿದ್ದ ಮುಂಡರಗಿಯ ಜೆ.ಎ. ಕಾಲೇಜ್ ಉಪನ್ಯಾಸಕ ಐ.ಎಸ್ ಹಿರೇಮಠ ಮಾತನಾಡಿ, ಹನಿ ಹನಿ ಸಸೇರಿದರೆ ಹಳ್ಳ ಕೈ ಕೈ ಜೋಡಿಸಿದರೆ ಶಿಕ್ಷಣ ಕ್ಷೇತ್ರದಲ್ಲಿ ಏನನ್ನಾದರೂ ಸಾಧಿಸಬಹುದು ಎಂದರು. ವೇದಿಕೆ ಸಾನಿದ್ಯ ವಹಿಸಿದ್ದ ಜಗದ್ಗುರೂ ಡಾ. ಶ್ರೀ ಅನ್ನದಾನೇಶ್ವರ ಮಹಾಸ್ವಾಮಿಗಳು ಮಾತನಾಡಿ ಮಕ್ಕಳ ಅಭಿನಯ & ಶಾಲೆಯ ಶಿಕ್ಷಕಿಯರ ಕಾರ್ಯವೈಕರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಶಾಲೆಗೆ ಕಾಣಿಕೆ ನೀಡಿದ ದಾನಿಗಳಿಗೆ ಹಾಗು ಶಾಲೆಯಲ್ಲಿ ಸಲ್ಲಿಸಿದ ಸೇವೆ ಸಲ್ಲಿಸಿದ ಶಿಕ್ಷಕರಿಯರಿಗೆ ಸನ್ಮಾನ ಮಾಡಿ ಅಭಿನಂದಿಸಲಾಯಿತು.
ಶಿಕ್ಷಕಿ ರೇಖಾ ಬಹದ್ದೂರ ದೇಸಾಯಿ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಕವಿತಾ ಸಜ್ಜೆದಮಠ ಶಾಲಾ ವರದಿ ವಾಚಿಸಿದರು. ಶಿಕ್ಷಕ ರುಬಿನಾ ಎಂ ಮಕಾಂದರ ನಿರೂಪಿಸಿದರು. ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ನಿರ್ಮಲಾ ಬಡಿಗೇರ ನೆರವೇರಿಸಿದರು. ಜಯಶ್ರೀ ಜಡಿಮಠ ವಂದಿಸಿದರು.

0 comments:
Post a Comment