ದಿ ೧೮-ರ ಬುಧವಾರದಂದು ಯಲಬುರ್ಗಾ ತಾಲ್ಲೂಕಿನ ಮಂಗಳೂರು ಗ್ರಾಮದಲ್ಲಿ ತೋಟಗಾರಿಕೆ ಇಲಾಖೆ ಹಾಗೂ ವೆಡ್ಸ ಸಂಸ್ಥೆಯ ಸಹಯೋಗದೊಂದಿಗೆ ಸುಜಲಾ ಯೋಜನೆಯ ೩ನೇ ಹಂತದ ಅಡಿಯಲ್ಲಿ ರೈತರಿಗೆ ತೋಟಗಾರಿಕೆ ಬೆಳೆಯ ಬೇಸಾಯ ಪದ್ದತಿಗಳು ಹಾಗೂ ಮಣ್ಣು ಮತ್ತು ನೀರು ಸಂರಕ್ಷಣೆ ಕುರಿತು ತರಬೇತಿ ಹಮ್ಮಿಕೊಳ್ಳಲಾಯಿತು. ತರಬೇತಿ ಕಾರ್ಯಕ್ರಮದಲ್ಲಿ ಪ್ರಬಾರಿ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಎಮ್.ಆರ್. ಸೋಂಪುರ ಮಾತನಾಡಿ ಸುಜಲಾ ಯೋಜನೆಯ ಅಡಿಯಲ್ಲಿ ರೈತರಿಗೆ ರೈತ ಆಸಕ್ತ ಗುಂಪುಗಳನ್ನು ರಚನೆ ಮಾಡಿ ಅದರ ಮೂಲಕ ತೋಟಗಾರಿಕೆ ಬೆಳೆಗಳು, ತರಕಾರಿ ಬೆಳೆಗಳನ್ನು ಬೆಳೆಯಲು ಅವಕಾಶವಿದ್ದು ರೈತರು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ವಿಷಯ ತಜ್ಞರಾದ ವಾಮನಮೂರ್ತಿ ಅವರು ಮಾತನಾಡಿ ತೋಟಗಾರಿಕೆ ಬೆಳೆಗಳು ಆದಾಯ ತರುವ ಬೆಳೆಗಳಾಗಿವೆ ಸುಧಾರಿತ ತಳಿಗಳ ಬೆಳೆಗಳನ್ನು ಬೆಳೆಯಲು ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಶಾಂತಾ ಗುಡಸಲಮನಿ ಸೇರಿದಂತೆ ಯೋಜನಾ ನಿರ್ದೇಶಕರಾದ ಮಹ್ಮದ್ ಅಲಿ, ವೆಡ್ಸ ಸಂಸ್ಥೆಯ ನಿರ್ದೇಶಕರಾದ ವ್ಹಿ. ಚಕ್ರಪಾಣಿ ಹಾಗೂ ಗ್ರಾಮದ ಜನಪ್ರತಿನಿಧಿಗಳು, ರೈತಬಾಂದವರು ಭಾಗವಹಿಸಿ ಯಶಸ್ವಿಗೊಳಿಸಿದರು. ತಿಮ್ಮಣ್ಣ ಸ್ವಾಗತಿಸಿದರು ಲಾಯಪ್ಪ ನಂದ್ಯಾಳ್ ನಿರೂಪಿಸಿದರು ವಿದ್ಯಾಶ್ರೀ ವಂದಿಸಿದರು.
Home
»
koppal district information
»
koppal organisations
» ಮಂಗಳೂರು ಗ್ರಾಮದಲ್ಲಿ ಸುಜಲಾ ಯೋಜನೆಯ ಕಾರ್ಯಗಾರ ಯಶಸ್ವಿ
Subscribe to:
Post Comments (Atom)

0 comments:
Post a Comment