PLEASE LOGIN TO KANNADANET.COM FOR REGULAR NEWS-UPDATES


ಅಪರಾಧ ತಡೆಗಟ್ಟಲು ಪೊಲೀಸರಿಗೆ ಜನರ ಸಹಕಾರ ಅಗತ್ಯವಾಗಿದೆ ಮಹಿಳೆಯರ ಮೇಲೆ ದೌರ್ಜನ್ಯ, ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ತಡೆಗಟ್ಟಲು ಎಲ್ಲರ ಸಹಾಯ ಸಹಕಾರ ಅಗತ್ಯವಾಗಿದೆ ಎಂದು ನಗರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಮೋಹನಪ್ರಸಾದ ಅಭಿಪ್ರಾಯಪಟ್ಟರು.
  ಅವರು ನಗರದ ಬಹದ್ದೂರ ಬಂಡಿಯ ರಸ್ತೆಯಲ್ಲಿರುವ ಸರ್ವೆ ನಂ.೪೩೮ ಬಡಾವಣೆ ನಿರ್ಮಿತಿ ಕೇಂದ್ರ ಓಣಿಯಲ್ಲಿ ಏರ್ಪಡಿಸಿದ್ದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಎಲ್ಲಾ ರೋಗಗಳ ಮೂಲ ಅಸ್ವಚ್ಛತೆಯಾಗಿದೆ ಪ್ರತಿಯೊಬ್ಬರು ತಮ್ಮ ಮನೆಯ ಹತ್ತಿರ ಪರಿಸರವನ್ನು ಸ್ವಚ್ಛವಾಗಿಡಬೇಕೆಂದೆರು.
  ಮುಂದುವರೆದು ಮಾತನಾಡಿದ ಅವರು ನೀರು ಜೀವಜಲ ಅಮೂಲ್ಯವಾದ್ದದ್ದು ಇದನ್ನು ಮಿತವಾಗಿ ಬಳಸಬೇಕು ಸ್ವಚ್ಛತೆಯಿಂದ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ ಇದರಿಂದ ಅಪರಾಧ ತಡೆಗೂ ಕೂಡಾ ಸಹಕಾರಿಯಾಗುತ್ತದೆ ಪಾಲಕರು ತಮನ್ಮ ಮಕ್ಕಳ ಬಗ್ಗೆ ಅತ್ಯಂತ ಕಾಳಜಿ ವಹಿಸಬೇಕು ಇಂದಿನ ನಮ್ಮ ಮಕ್ಕಳೆ ಈ ನಾಡಿನ ಭಾವಿ ಪ್ರಜೆಗಳಾಗಿದ್ದು ಅವರ ಉಜ್ವಲ ಭವಿಷ್ಯ ರೂಪಿಸಲು ಪಾಲಕರು ಮುಂದಾಗಬೇಕೆಂದು ನಗರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಮೋಹನಪ್ರಸಾದ ಅಭಿಪ್ರಾಯಪಟ್ಟರು.
  ಈ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ವಹಿಸಿ ಮಾತನಾಡಿ ಸ್ವಚ್ಛತೆ ನಮ್ಮನಿಮ್ಮೆಲ್ಲರ ಹಕ್ಕು ಇದನ್ನು ಎಲ್ಲರೂ ಒಂದುಗೂಡಿ ಸಾಧಿಸಬೇಕಾಗಿದೆ ನೈರ್ಮಲ್ಯಕಾಪಾಡಿಕೊಂಡು ಸ್ವಚ್ಛತೆಯಿಂದ ಬಾಳಿದಾಗ ಆರೋಗ್ಯವಂತರಾಗಲು ಸಾಧ್ಯ. ಕೆಟ್ಟ ಪರಿಸರವನ್ನು ದೂರವಿಟ್ಟು ಸ್ವಚ್ಛ ಪರಿಸರದಲ್ಲಿ ಜೀವನ ಸಾಗಿಸಬೇಕು. ಸ್ವಚ್ಚತಾ ಪರಿಸರಕ್ಕೆ ನಗರಸಭೆಯೊಂದಿಗೆ ಕೈ ಜೋಡಿಸಬೇಕೆಂದು ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿದರು.  
  ಈ ಸಂದರ್ಭದಲ್ಲಿ ನಗರಸಭೆಯ ಸಹಾಯಕ ಕಾರ್ಯಪಾಲಕ ಅಭಿಯಂತ ಗಂಗಾಧರ ಗೌಡ, ಗೀತಾಬಾಯಿ ಜಾಧವ, ಈಶಪ್ಪ ಹೂಗಾರ, ಪಂಚ ಕಮೀಟಿ ಅಧ್ಯಕ್ಷ ಶರ್ಪುದ್ದೀನ್ ಕೋಲ್ಕಾರ್, ಜಾಫರ್ ಸಾಬ್ ಸಿದ್ದಿ, ಅಕ್ಬರ್ ಸಾಬ ಪೊಲೀಸ್ ಮನೆ, ಬಶೀರ್ ಅಹಮ್ಮದ್ ಅತ್ತಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಓಣಿಯ ಪರವಾಗಿ ಮೋಹನಪ್ರಸಾದ ಮತ್ತು ಅಮ್ಜದ್ ಪಟೇಲ ಸೇರಿದಂತೆ ಅನೇಕರಿಗೆ ಸನ್ಮಾನಿಸಲಾಯಿತು.

Advertisement

0 comments:

Post a Comment

 
Top