ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಆಯೋಜಿಸಿದ ೭ ಶತಕೋಟಿ ಸತ್ಕರ್ಮಗಳ ಮಹಾಯೋಜನೆ ಜಾಗತಿಕ ಅಭಿಯಾನದ ಉದ್ದೇಶವನ್ನು ತಿಳಿಸುತ್ತಾ ಸಮಾಜದಲ್ಲಿ ನಮ್ಮಂತೆ ಎಲ್ಲರೂ ಎಂಬ ಮನೋಭಾವ ಮೂಡಿಸಿಕೊಂಡಾಗ ಮಾತ್ರ ವ್ಯಕ್ತಿಯ ಜೀವನದಲ್ಲಿ ಶಾಂತಿ ನೆಮ್ಮದಿ ನೆಲೆಸಲು ಸಾಧ್ಯ ಎಂಧರು ರಾಕ್ಷಿಸೀ ಪ್ರವೃತ್ತಿ ಕಿತ್ತು ಹಾಕಿ ತಮ್ಮನ್ನು ಪರಿವರ್ತಿಸುವುದು ಸೋದರತ್ವ ಭಾವನೆ ಬೆಳೆಸುವುದು ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರಿಪಿಸುವುದು, ವೈರತ್ವ ಭಾವನೆಯನ್ನು ಕಿತ್ತು ಹಾಕಿ ಕೊಡುವ ತರಬೇತಿಯನ್ನು ಈಶ್ವರೀಯ ವಿಶ್ವ ವಿದ್ಯಾಲಯ ನೀಡುತ್ತದೆ. ಎಂದರು
ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರೊಂದಿಗೆ ಉದ್ಘಾಟಿಸಿದ ಶ್ರೀ ಆತ್ಮಾನಂದ ಸ್ವಾಮಿಗಳು ಸಿದ್ದಾರೂಢಮಠ ಮಾತನಾಡುತ್ತಾ ಈಶ್ವರೀಯ ವಿಶ್ವ ವಿದ್ಯಾಲಯದವರು ೭ ಶತಕೋಟಿ ಸತ್ಕರ್ಮಗಳ ಮಹಾಯೋಜನೆಯನ್ನು ಅನುಷ್ಠಾನಗೊಳಿಸುವುದರ ಮೂಲಕ ಎಲ್ಲರನ್ನು ಸತ್ಕರ್ಮಕ್ಕೆ ಪ್ರೇರಣೆ ನೀಡುತ್ತಿರುವುದು ಶ್ಲಾಘನೀಯ ಪಾಪಕರ್ಮಗಳು ಮನುಷ್ಯನನ್ನು ಅಧೋಗತಿಗೆ ತಳ್ಳುತ್ತದೆ ಪುಣ್ಯ ಕರ್ಮಗಳೆ ನಮ್ಮ ಕಾಯಕವಾಗಬೇಕು ಎಂದರು.
ಪ್ರತಿಜ್ಞಾ ಪತ್ರದ ಅನಾವರಣ ಮಾಡಿದ ಶ್ರೀ ಗವಿಸಿದ್ದಪ್ಪ ಮುದಗಲ್ ಇವರು ಮಾತನಾಡುತ್ತಾ ಸೇವಾ ಮನೋಭಾವ ಶಾಂತಿ, ಪ್ರೀತಿ ವಿಶ್ವಾಸವನ್ನು ಹೆಚ್ಚಿಸುವಂತಹ ಇಂತಹ ಕಾರ್ಯಕ್ರಮಗಳು ಇಂದು ಸಮಾಜಕ್ಕೆ ಅವಶ್ಯಕತೆ ಇದೆ. ಎಂದರು ಶ್ರೀ ರಾಘವೇಂದ್ರ ಪಾನಘಂಟಿಯವರು ಶುಭ ಹಾರೈಸುತ್ತಾ ಸತ್ಕರ್ಮಗಳಿಗೆ ನಾವೆಲ್ಲರೂ ಪಾಲ್ಗೊಳ್ಳೊಣ್ಣ ಎಂದರು. ಬಸವರಾಜ ಬಳ್ಳೊಳ್ಳಿ ಸಸಿಗಳ ದಾನ ನೆರವೆರಿಸಿಕೊಟ್ಟರು ಅಮ್ಜದ್ ಪಟೇಲ್ ಅಧ್ಯಕ್ಷರು ನಗರಸಭೆ ಕೊಪ್ಪಳ ಇವರು ಮಾತನಾಡುತ್ತಾ ಭಾರತ ಆಧ್ಯಾತ್ಮ ಸಂಸ್ಕೃತಿಯ ನೆಲೆಬಿಡು ಎಂದರು. ಮುಖ್ಯ ಅತಿಥಿಗಳಾದ ಶ್ರೀನಿವಾಸ ಗುಪ್ತಾ, ಡಾ..ಕೆ.ಜಿ ಕುಲಕರ್ಣಿ, ಹೇಮರಾಜ ಶರ್ಮಾ, ಜ್ಞಾನ ಸುಂದರ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ನಗರ ಸಭೆಯ ಸರ್ವಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶೋಭೆ ತಂದರು. ಸುಮಾರು ೬೦೦ ಜನ ಸಾರ್ವಜನಿಕರು ಕಾರ್ಯಕ್ರಮದ ಲಾಭ ಪಡೆದರು.
ಈ ಕಾರ್ಯಕ್ರಮವನ್ನು ಬ್ರಹ್ಮಕುಮಾರಿ ಯೋಗಿನಿ ಅಕ್ಕನವರು ನಿರೂಪಿಸಿದರು.
0 comments:
Post a Comment