PLEASE LOGIN TO KANNADANET.COM FOR REGULAR NEWS-UPDATES

  ಕಿನ್ನಾಳದಲ್ಲಿ ಪೈಗಂಬ ಜಯಂತ್ಯೋತ್ಸವ ಆಚರಣೆ
.ಕೊಪ್ಪಳ,:  ಜನರಲ್ಲಿ ಭಯದ ವಾತಾವರಣ ನಿರ್ಮಿಸುವವರು ಅಮಾಯಕ ಜನರಿಗೆ ಅನಾವಶ್ಯಕ ಕಿರುಕುಳ ತೊಂದರೆ ಕೊಡುವವರು ನಮ್ಮ ಪ್ರವಾದಿ ಮಹ್ಮದ್ (ಸ) ಫೈಗಂಬರ ಅವರ ಅನುಯಾಯಿಗಳು ಆಗಲು ಸಾಧ್ಯವಿಲ್ಲ. ನಮ್ಮ ಪ್ರವಾದಿ (ಸ) ರವರು ಇಂತವರಿಂದ ದೂರವಿರಲು ಸಂದೇಶ ನೀಡಿರುತ್ತಾರೆ. ಅವರು ಶಾಂತಿ, ಸಹಬಾಳ್ವೆ, ಭಾವೈಕ್ಯತೆಯ ಜೀವನಕ್ಕೆ ಸಂದೇಶ ನೀಡಿದ್ದಾರೆ. ಅವರ ಜಯಂತ್ಯೋತ್ಸವ ಅವರ ಅನುಯಾಯಿಗಳಿಗೆ ದಾರಿದೀಪವಾಗಲಿ ನಾವು ನಮ್ಮ ಈ ಹಬ್ಬವನ್ನು ಸಂಭ್ರಮದೊಂದಿಗೆ ಇತರ ಎಲ್ಲಾ ಬಾಂಧವರೊಂದಿಗೆ ಸೌಹಾರ್ದತೆಯುತವಾಗಿ ಆಚರಿಸಿಕೊಳ್ಳಬೇಕು. ಅಂದಾಗ ಮಾತ್ರ ಇಂತಹ ಹಬ್ಬಗಳಿಗೆ ನಿಜವಾದ ಅರ್ಥ ಬರುತ್ತದೆ ಎಂದು ಸಯ್ಯದ್ ಅಸೋಸಿಯೇಶನ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಕೆ.ಎಂ.ಸಯ್ಯದ್ ರವರು ಹೇಳಿದರು. 

 ಅವರು  ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಮುಸ್ಲಿಂ ಸಮಾಜ ಬಾಂಧವರು ಮತ್ತು ಮುಸ್ಲಿಂ ಯುವಕ ಸಂ ಏರ್ಪಡಿಸಿದ ಜಷ್ನೆ ಈದ್ ಮೀಲಾದೆ ಮುಸ್ತಫಾ (ಸ) ರವರ ೧೪೮೯ನೇ ಜಯಂತ್ಯೋತ್ಸವ ಸಮಾರಂಭದಲ್ಲಿ ವಿಶೇಷ ಆಮಂತ್ರಿತರಾಗಿ ಪಾಲ್ಗೊಂಡು ಮಾತನಾಡುತ್ತಾ ಶಾಂತಿ ನೆಮ್ಮದಿಯ ಮತ್ತು ಸಹಬಾಳ್ವೆಯನ್ನು ಧರ್ಮ ಕಲಿಸುತ್ತದೆ. ನಮ್ಮ ಜೀವನ ಭಾವೈಕ್ಯತೆಯಿಂದ ನಡೆಸಬೇಕು ಅಂದಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ ಎಂದು ಕೆ.ಎಂ.ಸಯ್ಯದ್ ಹೇಳಿದರು.      ಯೂಸುಫಿಯಾ ಮಸೀದಿ ಪೇಶ್ ಇಮಾಮ್ ಮುಫ್ತಿ ಮೌಲಾನಾ ಮಹಮ್ಮದ್ ನಜೀರ್ ಅಹಮ್ಮದ್ ಖಾದ್ರಿ-ವ-ತಸ್ಕೀನಿ ಮೌಲಾನಾ ಹಾಫಿಜ್ ಮೊಹಿದ್ದೀನ್ ಖಾದ್ರಿ, ಮುಹಮ್ಮದ್ ಮಹೆಬೂಬ ಷಾ ಖಾದ್ರಿ ಚಿಷ್ತಿ, ಮಹ್ಮದ್ ನಾಸೀರ ಅಹ್ಮದ್ ತಸ್ಕೀನಿ ಸೇರಿದಂತೆ ಮತ್ತಿತರ ಮೌಲಾನಾಗಳು ಮಾತನಾಡಿ ಪ್ರವಾದಿಯವರ ಜೀವನ ಚರಿತ್ರ ಕುರಿತು ಪ್ರವಚನ ನೀಡಿದರು               ವೇದಿಕೆಯಮೇಲೆ  ಪತ್ರಕರ್ತರಾದ ಎಂ.ಸಾದಿಕ್‌ಅಲಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು ಮುಸ್ಲಿಂ ಸಮಾಜದ ಕಿನ್ನಾಳ ಜಮಾತ್ ಅಧ್ಯಕ್ಷರು ಸೇರಿದಂತೆ ಸಮಾಜದ ಯುವ ನಾಯಕ ಬಾಷಾ ಹಿರೇಮನಿ ಮತ್ತು ಕಿನ್ನಾಳ ಮಸೀದಿಯ ಪೇಶ್ ಇಮಾಮ್ ಹಾಫೀಸ್ ಸಾಹೇಬ್ ಪಾಲ್ಗೊಂಡಿದ್ದರು.

Advertisement

0 comments:

Post a Comment

 
Top