ಕ್ಷೇತ್ರದ ಲಿಂಗದಳ್ಳಿ, ಕೆರೆಹಳ್ಳಿ, ಹಿಟ್ನಾಳ, ಕಂಪಸಾಗರ, ಶಿವಪೂರ, ಬಂಡಿಹರ‍್ಲಾಪೂರ, ಬಸಾಪೂರ, ಗ್ರಾಮಗಳಲ್ಲಿ ಹೆಚ್.ಕೆ.ಆರ್.ಡಿ.ಬಿ ಸಮಾಜ ಕಲ್ಯಾಣ ಇಲಾಖೆ
, ಮುಖ್ಯಮಂತ್ರಿಗಳ ಗ್ರಾಮೀಣ ರಸ್ತೆ ಅಭಿವೃದ್ಧಿ ಅಡಿಯಲ್ಲಿ ಮತ್ತು ೫೦-೫೪ ನಬಾರ್ಡ ಯೋಜನೆಯಡಿಯಲ್ಲಿ ಸಿ.ಸಿ.ರಸ್ತೆ, ಡಾಂಬರಿಕರಣ,ಗ್ರಂಥಾಲಯ, ಪಶುಚಿಕಿತ್ಸಾಲಯ ಸಮುಧಾಯ ಭವನ, ಶುದ್ಧ ಕುಡಿಯುವ ನೀರಿನ ಘಟಕ, ಸೇತುವೆ, ಶಾಲೆ ಕೊಠಡಿ ಕಾಮಗಾರಿಗಳ ಭೂಮಿ ಪೂಜೆ ನೇರವೇರಿಸಿ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ರವರು ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ಕ್ಷೇತ್ರದ ಎಲ್ಲಾ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿ ಮಾಡುವೆನು ರಾಜ್ಯದ ಜನಪ್ರೀಯ ಮುಖ್ಯಮಂತ್ರಿಗಳು ಸಿದ್ದರಾಮಯ್ಯನವರು ರಾಜ್ಯದ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುತ್ತಿದ್ದು, ನನ್ನ ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ಸುಸರ್ಜಿತ ಹಾಗೂ ಗುಣಮಟ್ಟದ ರಸ್ತೆ, ಚರಂಡಿ, ಸೇತುವೆ, ಶಾಲಾ ಕೊಠಡಿ, ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಾಣ ಮಾಡುವೆನು. ನನ್ನ ಅಧಿಕಾರದ ಅವದಿಯಲ್ಲಿ ಕೊಪ್ಪಳ ಕ್ಷೇತ್ರವನ್ನು ಅಭಿವೃಧ್ಧಿ ಪಥದತ್ತ ಕೊಂಡೊಯ್ದು ಶ್ರೀ ಸಾಮಾನ್ನನಿಗೂ ಎಲ್ಲಾ ಮೂಲಬೂತ ಸೌಕರ್ಯಗಳನ್ನು ಒದಗಿಸುವೆನು ಅಭಿವೃದ್ಧಿಯೇ ನನ್ನ ರಾಜಕೀಯ ಜೀವನದ ಮಂತ್ರ ಅಭಿವೃದ್ಧಿ ಕಾರ್ಯಗಳಿಗೆ ಸರ್ವರೂ ಕೈಜೋಡಿಸಿ ಕೊಪ್ಪಳ ಕ್ಷೇತ್ರವನ್ನು ಬರುವ ದಿನಗಳಲ್ಲಿ ಸಂಪೂರ್ಣ ಅಭಿವೃದ್ಧಿಗೋಳಿಸುವೇನೆಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಜನಾರ್ಧನ ಹುಲಗಿ, ಕೆ.ರಮೇಶ ಹಿಟ್ನಾಳ, ಎ.ಪಿ.ಎಂ.ಸಿ. ಅಧ್ಯಕ್ಷರಾದ ಗವಿಸಿದ್ದಪ್ಪ ಮುದುಗಲ್, ಸುರೇಶ ಬುಮರೆಡ್ಡಿ, ವಿಜಯಲಕ್ಷ್ಮಿ ಮಾಲಿಪಾಟೀಲ, ದೇವಣ್ಣ ಮೇಕಾಳಿ, ಶ್ರೀಮತಿ ಸುವರ್ಣ ಎಮ್.ಪಾಟೀಲ, ಚಂದ್ರಪ್ಪ ಕಲ್ಲಾಳ,ಅಶೋಕ ಇಳಿಗೇರ, ದರ್ಮಣ್ಣ ಕಂಪಸಾಗರ, ಬಾಬು ಸಯ್ಯದ್, ಶಿವಬಾಬು, ಚನ್ನಕೇಶ, ಅಸ್ಗರ್ ಅಲಿ, ಬಸವರಾಜ, ಅಭಿಯಂತರರಾದ ಪೂಬಲನ್, ಕಿರಿಯ ಅಭಿಯಂತರರಾದ ಗುಡದಪ್ಪ ಮಲ್ಲಾಪುರ, ಗುತ್ತಿಗೆದಾರರಾದ ವಿ.ಪಿ.ಕಾರೇಕಲ್, ಎಸ್.ಎಮ್.ಹುಸ್ಸೇನಿ, ವಕ್ತಾರ ಅಕ್ಬರಪಾಷಾ ಪಲ್ಟನ ಉಪಸ್ಥಿರಿದ್ದರು.
0 comments:
Post a Comment