PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ,ಜ:೨೬ ನಗರದ ಜಿಲ್ಲಾ ಕಾಂಗ್ರೇಸ್ ಕಾರ್ಯಲಯದಲ್ಲಿ ನಡೆದ ೬೬ನೇ ಗಣರಾಜ್ಯೋತ್ಸವದ ದ್ವಜಾರೋಹಣ ನೆರವೇರಿಸಿ ಮಾತನಾಡಿದ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾದ ಕೆ.ಬಸವರಾಜ ಹಿಟ್ನಾಳರವರು ಮಾತನಾಡಿ ವಿಶ್ವದಲ್ಲಿ ಪ್ರಜಾಪ್ರಭುತ್ವದ ಮಹನಾ ರಾಷ್ಟ್ರವಾದ ಭಾರತ ಈ ನಾಡಿಗೆ ಸ್ವತಂತ್ರ್ಯ ತಂದುಕೊಟ್ಟ ಮಹಾನ್ ನಾಯಕರ ತತ್ವ ಆದರ್ಶಗಳನ್ನು ಪ್ರತಿಯೊಬ್ಬ ಭಾರತೀಯನು ತನ್ನ ದೈನಂದಿಕ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ರಾಷ್ಟ್ರದ ಕೀರ್ತಿಗಾಗಿ ರಾಷ್ಟ್ರದ ಉನ್ನತಿಕರಣಕ್ಕೆ ಪ್ರತಿಯೊಬ್ಬ ಭಾರತೀಯನು ಶ್ರಮಿಸಬೇಕು ದೇಶ ಸೇವೆಯೆ ಈಶ ಸೇವೆಯೆಂದು ಬಾವಿಸಿ ದೇಶಕ್ಕೆ ತಮ್ಮನ್ನು ಅರ್ಪಣೆ ಮಾಡಿಕೊಳ್ಳಬೇಕು. ವಿಶ್ವದಲ್ಲೇ ಭಾರತ ಸಂವಿದಾನಕ್ಕೆ ವಿಶಿಷ್ಟಸ್ಥಾನಮಾನವಿದ್ದು ಜಗತ್ತಿನ ಅತ್ಯಂತ ಜ್ಯಾತ್ಯಾತೀತ ರಾಷ್ಟ್ರವಾದ ಭಾರತ ಶಾಂತಿ ಸೌಹಾರ್ದತೆ, ಸಹಬಾಳ್ವೆಯ ಸಂಕೇತವಾಗಿದೆ. ಇದರ ಸ್ಚತಂತ್ರ್ಯಕ್ಕೆ ಯಾವುದೆ ದಕ್ಕೆಬರಲಾರದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಭಾರತೀಯ ನಾಗರಿಕನ ಕರ್ತವ್ಯವಾಗಿದೆ ಎಂದು ಹೇಳಿದರು.  
ಈ ಸಂದರ್ಭದಲ್ಲಿ ಅಂದಣ್ಣ ಅಗಡಿ, ಎಸ್.ಬಿ.ನಾಗರಳ್ಳಿ, ಜುಲ್ಲು ಖಾದರಿ, ಮರ್ದಾನಲಿ ಅಡ್ಡೆವಾಲೆ, ಕೆ.ಎಮ್.ಸಯ್ಯದ್, ಗವಿಸಿದ್ದಪ್ಪ ಮುದುಗಲ್, ಅಮ್ಜದ್ ಪಟೇಲ್, ಬಾಷುಸಾಬ್ ಕತೀಬ್, ಶಕುಂತಲಾ ಹುಡೆಜಾಲಿ, ಗಾಳೆಪ್ಪ ಪೂಜಾರ, ಕೃಷ್ಣ ಇಟ್ಟಂಗಿ, ಮಲ್ಲಪ್ಪ ಕವಲೂರು, ಮಹೇಶ ಭಜಂತ್ರಿ, ಸೂಮಣ್ಣ ಬಾರಕೇರ, ಬಾಳಪ್ಪ ಬಾರಕೇರ, ಅನಿಕೇತ ಅಗಡಿ, ಮಂಜುನಾಥ ಉಲ್ಲತ್ತಿ, ವಾಹಿದ್ ಸೂಂಪೂರು, ಮಕ್ಬುಲ್ ಮನಿಯಾರ್, ರಾಜಶೇಖರ ಗೂನಾಳ, ಮಹೇಬುಬ್ ಅರಗಂಜಿ, ಜಿಲ್ಲಾ ಸೇವದಾಳದ ಅಧ್ಯಕ್ಷರು ಸದಸ್ಯರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top