PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ : ನಗರದ ತಾಲುಕಾ ಪಮಚಾಯತ ಸಂಕೀರ್ಣದಲ್ಲಿ ಬೆಳಗ್ಗೆ ೧೧ ಗಂಟೆಗೆ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ. ನಾರಾಯಣಗೌಡ ಬಣ) ದಿಂದ ಡಾ. ಸರೋಜಿನಿ ಮಹಿಷಿ ಅವರ ನಿಧನ ರಾದ ಪ್ರಯುಕ್ತ ಸಂತಾಪ ಸೂಚನಾ ಸಭೆ ಏರ್ಪಡಿಸಲಾಗಿತ್ತು. ಮಹಿಷಿಯವರ ಭಾವ ಚಿತ್ರಕ್ಕೆ ಪೂಜೆ ಮತ್ತು ಪುಷರ್ಪಣೆಯನ್ನು ನಗರ ಸಭೆ ಸದಸ್ಯರಾದ ಶರಣಪ್ಪ ಚಂದನಕಟ್ಟಿಯವರು ನೆರವೇರಿಸಿದರು. 
ಸಬೆಯಲ್ಲಿ ಕರವೇ ಜಿಲ್ಲಾ ಸಂಚಾಲಕರಾದ ಬಿ. ಗಿರೀಶಾನಂದ ಜ್ಞಾನಸುಂದರ ಮಾತನಾಡಿ, ದೆಹಲಿಯಲ್ಲಿ ಕರ್ನಾಟಕ ಸಂಘ ಉದಯಿಸಲು ಮೂಲಕಾರಣ ಮಹೀಷಿಯವರು. ೧೯೬೦ ರಲ್ಲಿ ಕೇಂದ್ರ ನಗರಾಭಿವೃದ್ಧಿ ಸಚಿವರಾಗಿದ್ದಾಗ ಕರ್ನಾಟಕ ಸಂಘ ನಿರ್ಮಾಣಕ್ಕೆ ಭೂಮಿ ಮಂಜೂರು ಮಾಡಿದ್ದಾರೆ. ನಂತರ ೧೯೬೬ ರಿಂದ ೧೯೮೩ ರ ವರೆಗೆ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು ಹಾಗೂ ಇವರು ೧೬ ಬಾಷೆಗಳಲ್ಲಿ ಪ್ರಾವೀಣ್ಯತೆ ಹೊಂದಿದ್ದರು. ಕನ್ನಡ ಸಾಹಿತ್ಯಕ್ಕೆ ಮಹಿಷಿಯರ ಕೊಡುಗೆ ಅಪಾರ. ಇವರು ಸಾಕಷ್ಟು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಹಂಪಿ ಕನ್ನಡ ವಿಶ್ವ ವಿದ್ಯಾಲಯದಿಂದ ನಾಡೋಜ ಪ್ರಶಸ್ತಿ, ವಿಜಯಪುರ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್, ಮೊದಲಾದ ಹತ್ತು ಹಲವು ಪ್ರಶಸ್ತಿಗಳು ಲಭಿಸಿವೆ. ಕರ್ನಾಟಕ ಸರಕಾರದ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಎಲ್ಲಾ ಹುದ್ದೆಗಳಲ್ಲಿ ಕನ್ನಡಿಗರಿಗೆ ಸಂಪೂu ಮೀಸಲಾತಿ ಕಲ್ಪಿಸಬೇಕೆಂದು ದೆಹಲಿಯಲ್ಲಿ ಕನ್ನಡದ ಪ್ರಮುಖ ಧ್ವನಿಯಾಗಿ ಗುರುತಿಸಿಕೊಂಡಿದ್ದರು. ಹಾಗೂ ಕರ್ನಾಟಕದ ಮೊದಲ ಮಹಿಳಾ ಸಂಸದೆಯಾಗಿ ಕೇಂದ್ರದ ಸಚಿವರಾಗಿ, ಕನ್ನಡದ ಕಿಚ್ಚನ್ನು ದೇಶದ ರಾಜಧಾನಿಯವರೆಗೂ ಹಚ್ಚಿದ ಕೀರ್ತಿ ಇವರಿಗೆ ಸಲ್ಲುತ್ತದೆ. 
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗವಿಸಿದ್ದಪ್ಪ ಕರ್ಕಿಹಳ್ಳಿ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಕರವೇ ತಾಲೂಕ ಅಧ್ಯಕ್ಷ ಹನುಮಂತ ಬೆಸ್ತರ, ತಾಲೂಕ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಮುಂಡರಗಿ, ಯುವ ಕಾಂಗ್ರೇಸ ಮುಖಂಡ ಹನಮೇಶ ಹೊಸಳ್ಳಿ, ಬಸವರಾಜ ಚಿಲವಾಡಗಿ, ಕರವೇ ಕಾರ್ಯಕರ್ತರಾದ ನೂರ ಪಾಷಾ ಅರಗಂಜಿ, ನವೀನ ಬೀಡಿನಾಳ, ಮಹಮ್ಮದ ಜುಬೇರ, ನಾಗರಾಜ ಬಾರಕೇರ, ಶಶಿ ಬೀಡನಾಳ, ಮಂಜಯ್ಯ ಸ್ವಾಮಿ, ವಸ್ತ್ರದ ಸ್ವಾಮಿ, ಮುಸ್ತಪ ಇಟ್ಟಂಗಿ ಭಾಗವಹಿಸಿದ್ದರು. 

Advertisement

0 comments:

Post a Comment

 
Top