PLEASE LOGIN TO KANNADANET.COM FOR REGULAR NEWS-UPDATES




ನಗರದ ಗಡಿಯಾರ ಕಂಬ ವೃತ್ತದಿಂದ ಕಾತರಕಿ ರಸ್ತೆ ಸುಧಾರಣೆಗೆ ಆಗ್ರಹಿಸಿ ಮಾನವ ಸರಪಳಿ ಮುಖಾಂತರ ಕರವೇಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ
ಕೊಪ್ಪಳ: ಕರ್ನಾಟಕ ರಕ್ಷಣಾ ವೇದಿಕೆ(ಟಿ.ಎ ನಾರಾಯಣಗೌಡ ಬಣ) ಜಿಲ್ಲಾ ಘಟಕದಿಂದ ಗಡಿಯಾರ ಕಂಬದ ಹತ್ತಿರ ರಸ್ತೆ ತಡೆ ನಡೆಸಿ ಮಾನವ ಸರಪಳಿ ಮುಖಾಂತರ ಪ್ರತಿಭಟನೆ ನಡೆಸಿ ಕೊಪ್ಪಳ ಜಿಲ್ಲಾ ಕೆಂದ್ರದ ಅತ್ಯಂತ ಜನಬೀಡು ರಸ್ತೆಯಾಗಿರುವ ಕಾತರಕಿ ರಸ್ತೆ ದುರಸ್ಥಿಯನ್ನು ಮಾಡದೆ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗಿದ್ದರು ಕಂಡು ಕಾಣದಂತೆ ಸುಮ್ಮನಿರುವ ಜಿಲ್ಲಾಡಳಿತದ ನೀತಿಯನ್ನು ಕರವೇ ಖಂಡಿಸುತ್ತದೆ.
         ರಸ್ತೆ ಸುದಾರಣೆ ಆಗದಿರುವುದರಿಂದ ವಾಹನ ಸಂಚಾರಕ್ಕೆ ತೀವೃ ಅಡ್ಡಿಯಾಗುತ್ತಿದ್ದು ಇತ್ತಿಚಿಗೆ ವಾಹನ ದಟ್ಟಣೆ ಹೆಚ್ಚಾಗಿದ್ದು ನಗರ ಪ್ರದೇಶದಲ್ಲಿ ಸಂಚಾರ ನಿಯಂತ್ರಣ ಇಲ್ಲವಾದ್ದರಿಂದ ಬಾಲಕನೊಬ್ಬ ಅಪಘಾತಕ್ಕೀಡಾಗಿ ಸಾವನ್ನಪಿರುವುದು ದುರದೃಷ್ಟ ಸಂಗತಿಯಾಗಿದೆ. ಇಷ್ಟೆಲ್ಲ ತೊಂದರೆ ಇದ್ದರು ಶಾಸಕರು, ಸಂಸದರು, ಸಚಿವರು, ಇತ್ತ ಕಡೆ ಗಮನ ಹರಿಸದೆ ರಸ್ತೆ ಸುಧಾರಣೆ ಕ್ರಮ ಕೈಗೊಳ್ಳ್ಳದೆ ರಾಜರೋಷವಾಗಿ ತಮಗೆ ಸಂಬಂಧ ಇಲ್ಲದಂತೆ ವರ್ತಿಸುತ್ತಿರುವ ಜಿಲ್ಲೆಯ ಜನಪ್ರತಿನಿಧಿಗಳ ವರ್ತನೆಯನ್ನು ಕರವೇ ಬಲವಾಗಿ ಖಂಡಿಸುತ್ತದೆ. ಈ ಪ್ರತಿಭಟನೆಯಿಂದಾದರೂ ಜಿಲ್ಲಾಡಳಿತ ಹಾಗೂ ನಗರ ಸಭೆ ಆಡಳಿತ, ಜನಪ್ರತಿನಿಧಿಗಳು ಕೂಡಲೇ ಎಚ್ಚೆತ್ತುಕೊಂಡು ರಸ್ತೆ ಸುಧಾರಣೆ ಆರಂಭಿಸಬೇಕು ಇಲ್ಲವಾದಲ್ಲಿ ಸರ್ಕಾರಿ ಕಾರ್ಯಕ್ರಮಗಳಿಗೆ ಮುತ್ತಿಗೆ, ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಕೊಪ್ಪಳ ನಗರ ಬಂದ ಕರೆ ಮುಖಾಂತರ  ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಇದರಿಂದ ಆಗು ಹೋಗುಗಳಿಗೆ ತಾವೇ ಹೊಣೆಗಾರರಾಗಿರುತ್ತಿರೆಂದು ಈ ಮೂಲಕ ಎಚ್ಚರಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಬಸನಗೌಡ ಪೋ||ಪಾಟಿಲ, ಜಿಲ್ಲಾ ಸಂಚಾಲಕರಾದ ಬಿ. ಗಿರೀಶಾನಂದ ಜ್ಞಾನಸುಂದರ, ಜಿಲ್ಲಾ ಉಪಾಧ್ಯಕ್ಷರಾದ ಪ್ರವೀಣ ಬ್ಯಾಹಟ್ಟಿ,(ಕವಲೂರ), ತಾಲೂಕ ತಾಲೂಕ ಅಧ್ಯಕ್ಷರಾದ ಹನುಮಂತಪ್ಪ ಬೆಸ್ತರ, ಯಲಬುರ್ಗಾ ಮಹಿಳಾ ತಾಲೂಕಧ್ಯಕ್ಷೆಯಾದ ಸಾವಿತ್ರಮ್ಮ ದಳವಾಯಿಮಠ, ನಗರ ಘಟಕ ಅಧ್ಯಕ್ಷರಾದ ಗವಿಸಿದ್ದಪ್ಪ ಹಂಡಿ, ಕಾರ್ಯಕರ್ತರಾದ ಶಿವಕುಮಾರ ಎಸ್.ಕೆ, ಪ್ರಕಾಶ, ಫಯಾಜ್ ಸೋಡೇವಾಲಿ, ಕಳಕಪ್ಪ ಗೆಜ್ಜಿ, ದಾದ ಕಲಂದರ, ಬಸವರಾಜ ಬೆಲ್ಲದ್ ಮಂಜುನಾಥ ಸೋಮುವಾರದ, ಪ್ರಕಾಶ ಕೊತಬಾಳ ಮುಂತಾದವರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top