PLEASE LOGIN TO KANNADANET.COM FOR REGULAR NEWS-UPDATES

ಬೆಂಗಳೂರು  ಪತ್ರಿಕೋದ್ಯಮ ಇಂದು ವೃತ್ತಿಯಾಗಿ ಉಳಿದಿಲ್ಲ ಬದಲಾಗಿ ವಾಣಿಜ್ಯೋದ್ಯಮವಾಗಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ  ದಿನೇಶ್ ಅಮಿನ್ ಮಟ್ಟು ಅವರು ವಿಷಾದ ವ್ಯಕ್ತಪಡಿಸಿದರು.ಅವರು ಇಂದು ವಾರ್ತಾ ಇಲಾಖೆಯು ಏರ್ಪಡಿಸಿದ್ದ ವೃತ್ತಿ ಹಾಗೂ ನಿರೂಪಣಾ ಕೌಶಲ್ಯ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತಾನಾಡುತ್ತಿದ್ದರು.
90 ರ ದಶಕದ ನಂತರ ಮಾಧ್ಯಮಗಳಲ್ಲಿ ಪ್ರಮುಖ ಬದಲಾವಣೆಗಳು ಆಗಿದ್ದು. ಆರ್ಥಿಕ ಉದಾರೀಕರಣ ಮತ್ತು ಕೋಮುವಾದವು ಪತ್ರಿಕೋದ್ಯಮವು ಬದಲಾಗಲು ಮುಖ್ಯ ಕಾರಣ ಎಂದು ಹೇಳಿದರು.
ಮಾಧ್ಯಮವು ಇಂದು ಜನರಿಗೆ ಶಿಕ್ಷಣ ನೀಡಬೇಕು, ಆದರೆ ವ್ಯಾಪಾರ ಮನೋಧರ್ಮದಿಂದ ಸಮಾಜಕ್ಕೆ ಏನು ಕೊಡಬೇಕು ಅದನ್ನು ಕೊಡ್ಡುತ್ತಿಲ್ಲ. ಮಾಧ್ಯಮವು ವೃತ್ತಿಯಾಗಿ ಉಳಿದಿಲ್ಲ, ಬದಲಿಗೆ ಉದ್ಯಮವಾಗಿದೆ ಎಂದರಲ್ಲದೆ ಅವರು ಮಾಧ್ಯಮಗಳು ಸಾರ್ವಜನಿಕರಿಗೆ ಸತ್ಯ ಹೇಳಬೇಕು ಆದರೆ ಅದು ಆಗುತ್ತಿಲ್ಲ ಎಂದು ಹೇಳಿದರು.ಪತ್ರಿಕೆಗಳು ವಿಶ್ವಾಸ ಉಳಿಸಿಕೊಳ್ಳಬೇಕು. ಜನಪರ ಕೆಲಸ ಮಾಡಬೇಕು ಎಲ್ಲಾ. ವರ್ಗದವರಿಗೂ ಪ್ರಾತಿನಿಧ್ಯ ನೀಡುವ ಮೂಲಕ ಸಾಮಾಜಿಕ ನ್ಯಾಯವನ್ನು ಕಲ್ಪಿಸಿಕೊಡಬೇಕು ಎಂದರು.ಪತ್ರಿಕೋದ್ಯಮದಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು ವೈಚಾರಿಕವಾದ ನಿಲುವುಗಳು ಗಾಳಿಯಲ್ಲಿ ತೇಲಿ ಹೋಗುತ್ತಿದೆ. ಮುಂದಿನ ದಿನಗಳಲ್ಲಿ ಇದು ಭಯಂಕರವಾಗಿರುತ್ತದೆ ಎಂದು ಎಚ್ಚರಿಸಿದರು.ಪತ್ರಕರ್ತರಾಗಲು ಬಯಸುವವರು ಸಂವೇದನಾಶೀಲ ಗುಣವನ್ನು ಬೆಳೆಸಿಕೊಳ್ಳಬೇಕು ಮತ್ತು ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು. ಭರವಸೆ ಜೊತೆಗೆ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು, ಪತ್ರಿ ದಿನ ಒಂದು ಪತ್ರಿಕೆಯನ್ನು ಕಡ್ಡಾಯ ಓದಬೇಕು ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ತರಬೇತಿಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಹಾಗೂ ಸ್ಟೈಫಂಡ್ ಚೆಕ್‍ಗಳನ್ನು ವಿತರಿಸಿದರು.ಸಮಾರಂಭದಲ್ಲಿ ಹಿರಿಯ ಪತ್ರಕರ್ತರಾದ   ಕೋಟಿಗಾನಹಳ್ಳಿ ರಾಮಯ್ಯ, ಎನ್.ಎಸ್.ಶಂಕರ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜಂಟಿ ನಿರ್ದೇಶಕರು   ಎನ್.ಭೃಂಗೇಶ್ ಉಪಸ್ಥಿತರಿದ್ದರು.

Advertisement

0 comments:

Post a Comment

 
Top