PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ, ಜ.೩೦ : ನಾಳೆ ಫೆ. ೨ ರಿಂದ ಫೆ. ೧೯ ರವರೆಗೆ ಅಂಗನವಾಡಿ ಕಾರ್ಯಕರ್ತರ ಮತ್ತು ಸಹಾಯಕಿಯರ ಹಲವು ಬೇಡಿಕೆ ಈಡೇರಿಕೆ ಒತ್ತಾಯಿಸಿ ರಾಜ್ಯಮಟ್ಟದ ಮುಷ್ಕರಕ್ಕೆ ಎಲ್ಲಾ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕಿಯರು ಅಂಗನವಾಡಿ ಬಂದ್ ಮಾಡಿ ಸ್ಥಳೀಯ ತಾಲೂಕು ಕೇಂದ್ರಗಳ ಮುಷ್ಕರಗಳಲ್ಲಿ ಪಾಲ್ಗೊಳ್ಳಬೇಕು ಅದೇ ರೀತಿ ಜಿಲ್ಲೆ ಸಿಐಟಿಯು ಹಾಗೂ ಎಲ್ಲಾ ತಾಲೂಕಿನ ಸಿಐಟಿಯು ಸಮಿತಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮುಷ್ಕರದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವಂತೆ ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಶಿವಮ್ಮ ಹುಡೇದ, ಕಾರ್ಯದರ್ಶಿ ಕಲಾವತಿ ಕುಷ್ಟಗಿ ಹಾಗೂ ಸಿಐಟಿಯು ಜಿಲ್ಲಾ ಪ್ರಧಾನ ಕಾಯದರ್ಶಿ ಗೌಸ್‌ಸಾಬ ನದಾಫ್   ತಿಳಿಸಿದ್ದಾರೆ. 
 ರಾಜ್ಯದ ೬೫ ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ ೧.೨೫ ಲಕ್ಷ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಇವರಿಗೆ ಸರಕಾರ ಗೌರವಧನವೆಂದು ಕಡಿಮೆ ವೇತನ ನೀಡುತ್ತಿರುವುದಲ್ಲದೇ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಇನ್ನಿತರ ವಿವಿಧ ಕಾರ್ಯಗಳಲ್ಲಿ ಬಿಡುವಿಲ್ಲದೇ ದುಡಿಸಿಕೊಳ್ಳುತ್ತಿವೆ. ಆದರೇ ಇವರಿಗೆ ನೀಡುತ್ತಿರುವ ವೇತನ ಮಾತ್ರ ಕುಟುಂಬ ನಿರ್ವಾಹಣೆ ಮಾಡಲು ಅಸಾಧ್ಯವಾಗಿದೆ. ವೇತನ ಹೆಚ್ಚಳ, ಮಿಷನ್ ಕಾಯ್ದೆ ಜಾರಿ ಸ್ಥಗಿತಗೊಳಿಸಬೇಕು. ಕಾರ್ಮಿಕರ ವಿಮಾ ಯೋಜನೆ ಅನ್ವಯಿಸಬೇಕು. ನಿವೃತ್ತರಿಗೆ ೩ ಸಾವಿರ ಪೆನ್ಸನ್ ನೀಡುವುದು. ಹುದ್ದೆಗೆ ಕಾಯಂ ನೇಮಕಾತಿ, ಐಸಿಟಿಸಿ ಹುದ್ದೆಗಳ ಭರ್ತಿ ವೇಳೆ ಬಡ್ತಿ ಹೊಂದಿದ ಅಂಗನವಾಡಿ ಕಾರ್ಯಕರ್ತೆಯರಿಗೆ ಅವಕಾಶ ನೀಡುವುದು. ಕುಟುಂಬಕ್ಕೆ ಆರೋಗ್ಯ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಿಐಟಿಯು ಸೇರಿದಂತೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಮುಷ್ಕರಕ್ಕೆ ತಾವೇಲ್ಲಾ ಸಕ್ರೀಯವಾಗಿ ಪಾಲ್ಗೊಂಡು ಮುಷ್ಕರ ಯಶಸ್ಸಿಗೆ ಸಹಕರಿಸುವಂತೆ ಕೋರಿದ್ದಾರೆ.

Advertisement

0 comments:

Post a Comment

 
Top