ಕರ್ನಾಟಕ ಸ್ವಯಂ ಉದ್ಯೋಗ ಯೋಜನೆಯಡಿಯಲ್ಲಿ ಪ್ರಾಯೋಜಿತವಾದ ಒಂದು ದಿನದ ಉದ್ಯಮಶೀಲತಾ ಜಾಗೃತಿ ಕಾರ್ಯಕ್ರಮ ಹಾಗೂ ಕೈಗಾರಿಕಾ ನೀತಿ-೨೦೧೪-೧೯ ಮಾಹಿತಿ ನೀಡಿಕೆ ಕಾರ್ಯಕ್ರಮ ಜ. ೦೭ ರಂದು ಬೆಳಿಗ್ಗೆ ೧೦ ಗಂಟೆಗೆ ಕುಷ್ಟಗಿಯ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಕೈಗಾರಿಕೆ ಮತ್ತು ವಾಣಿಜ್ಯ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾ ಕೈಗಾರಿಕಾ ಕೇಂದ್ರ, ಕೊಪ್ಪಳ, ಕರ್ನಾಟಕ ಉದ್ಯಮಶೀಲತಾಭಿವೃದ್ದಿ ಕೇಂದ್ರ ಧಾರವಾಡ, ಕುಷ್ಟಗಿ ಗ್ರ್ಯಾನೈಟ್ ಕೈಗಾರಿಕಾ ಮಾಲೀಕರ ಸಂಘ ಹಾಗೂ ಲಯನ್ಸ್ ಕ್ಲಬ್ ಕುಷ್ಟಗಿ ಇವರ ಸಹಯೋಗದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಅವಶ್ಯವಿರುವ ಮಾಹಿತಿಗಳಾದ ಉದ್ಯಮಶೀಲತೆಯ ಮಹತ್ವ, ಸ್ವಯಂ ಉದ್ಯೋಗ ಪ್ರಾರಂಭಿಸಲು ಸಹಾಯ ನೀಡುತ್ತಿರುವ ಸಂಸ್ಥೆಗಳು, ಕೈಗಾರಿಕಾ ನೀತಿ-೨೦೧೪-೧೯, ಸ್ವಯಂ ಉದ್ಯೋಗ ಪ್ರಾರಂಭಿಸಲು ಸರ್ಕಾರದಿಂದ ಸಿಗುತ್ತಿರುವ ಸೌಲಭ್ಯಗಳು, ಬ್ಯಾಂಕ್ ಸೌಲಭ್ಯಗಳು ಇತ್ಯಾದಿ ವಿಷಯಗಳ ಬಗ್ಗೆ ತರಬೇತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಲಾಗುವುದು. ತರಬೇತಿಗೆ ಆಸಕ್ತಿಯುಳ್ಳ ನಿರುದ್ಯೋಗಿ ಯುವಕ/ಯುವತಿಯರು ಹಾಜರಾಗಬಹುದು. ಅಭ್ಯರ್ಥಿಗಳು ೧೮ ರಿಂದ ೩೫ ವರ್ಷದವರಾಗಿಬೇಕು, ಕನಿಷ್ಠ ಎಸ್.ಎಸ್.ಎಲ್.ಸಿ. ಉತ್ತೀರ್ಣರಾಗಿರಬೇಕು, ಭಾಗವಹಿಸುವ ಅಭ್ಯರ್ಥಿಗಳು ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕು. ತರಬೇತಿಯು ಸಂಪೂರ್ಣ ಉಚಿತವಾಗಿದ್ದು, ತರಬೇತಿ ಅವಧಿಯಲ್ಲಿ ಯಾವುದೇ ರೀತಿಯ ಭತ್ಯೆ ಹಾಗೂ ಶಿಷ್ಯವೇತನ ನೀಡಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಧಾರವಾಡದ ಸಿಡಾಕ್, ಸಹಾಯಕ ನಿರ್ದೇಶಕ (ತರಬೇತಿ) ಶಿವಾನಂದ ವೆಂ.ಎಲಿಗಾರ-೯೪೪೮೮೧೨೯೭೪, ಬಿ.ಎಮ್.ಜೋಶಿ-೯೯೦೨೨೨೩೮೫೦, ಕುಷ್ಟಗಿ ಕೈಗಾರಿಕಾ ವಿಸ್ತರಣಾಧಿಕಾರಿ ಚಿನಿವಾರ-೯೯೦೨೮೯೬೭೮೮ ಇವರನ್ನು ಸಂಪರ್ಕಿಸಬಹುದು .
0 comments:
Post a Comment