ಕೊಪ್ಪಳ: . ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಮತ್ತು ಕೊಳಚೆ ಹಾಗೂ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುತ್ತಿರುವ ಅಲ್ಪಸಂಖ್ಯಾತ-ಮುಸ್ಲಿಂ’ರ ಕಲ್ಯಾಣಕ್ಕಾಗಿ ಆದ್ಯತೆ ಮೇರೆಗೆ ವಿವಿಧ ಇಲಾಖೆಗಳ ಮೂಲಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾರಿಗೊಳಿಸುವುದು ಅತ್ಯಂತ ಜರೂರತೆ ಬಗ್ಗೆ ಮಾನ್ಯ ಜಸ್ಟಿಸ್ ರಾಜೇಂದ್ರ ಪ್ರಸಾದ ಸಾಚಾರ್ ಕಮೀಟಿ ವರದಿಯಲ್ಲಿ ಸ್ಪಸ್ಟವಾಗಿ ಹೇಳಿದ್ದು, ಅದರಂತೆ ಕೊಪ್ಪಳ ಜಿಲ್ಲೆಯಲ್ಲಿ ಮುಸ್ಲಿಂರ ಅಭಿವೃದ್ಧಿಗೆ ಯೋಜನೆಗಳನ್ನು ಕಾಲಬದ್ಧವಾಗಿ ಸಮರ್ಪಕವಾಗಿ ಅನುಷ್ಠಾನಗೊಳಿಸುವುಂತೆ ಸಾಚಾರ್ ಕಮೀಟಿ ವರದಿ ಜಾರಿಗಾಗಿ ಜಿಲ್ಲಾ ಹೋರಾಟ ಸಮಿತಿಯ ನಿಯೋಗವು ಒತ್ತಾಯಿಸಿದೆ.
ಹೋರಾಟ ಸಮಿತಿಯ ನಿಯೋಗವು ಇಂದು ಜಿಲ್ಲಾಧಿಕಾರಿ ಆರ್.ಆರ್.ಜನ್ನು ಅವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಸಾಚಾರ್ ಕಮೀಟಿ ವರದಿ ಆಧಾರಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಲ್ಪಸಂಖ್ಯಾತರ ಸಮುದಾಯದ ಅಭಿವೃದ್ಧಿಗಾಗಿ ಈಗಾಗಲೇ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದರೂ ಸಹ ಅವುಗಳು ಸರಿಯಾಗಿ ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿಲ್ಲ, ಪ್ರಧಾನ ಮಂತ್ರಿಗಳ ಹೊಸ ೧೫ ಅಂಶಗಳ ಕಾರ್ಯಕ್ರಮದಡಿಯಲ್ಲಿನ ಮಾರ್ಗಸೂಚಿಯಂತೆ ವಿಶೇಷ ಆದ್ಯತೆ ಮೇರೆಗೆ ಮುಸ್ಲಿಂರಿಗಾಗಿ ಕಲ್ಯಾಣ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ಜಾರಿಗೊಳಿಸುವುಂತೆ ಭಾರತ ಸರ್ಕಾರದ ೨೦೦೭ ರ ಆದೇಶದಲ್ಲಿ ತಿಳಿಸಲಾಗಿದ್ದು, ಇಂದಿಗೂ ಹಲವು ಇಲಾಖೆ, ನಿಗಮ, ಪೌರಸಂಸ್ಥೆಗಳಿಂದ ಜಾರಿಯಲ್ಲಿರುವ ಕಾರ್ಯಕ್ರಮಗಳಲ್ಲಿ ಜಾರಿಯಾಗದೇ ಇರುವುದು ಸ್ಪಸ್ಟವಾಗಿ ಕಂಡುಬರುತ್ತಿದೆ
೨೦೦೭-೦೮ ನೇ ಸಾಲಿನಿಂದ ಪ್ರಸಕ್ತ ೨೦೧೪-೧೫ ನೇ ಸಾಲಿನ ವರೆಗೆ ಕೊಪ್ಪಳ ಜಿಲ್ಲೆಯ ವಿವಧ ಇಲಾಖೆಗಳ, ನಿಗಮ ಮತ್ತು ಪೌರಸಂಸ್ಥೆಗಳಲ್ಲಿ ನಿಗದಿಗೊಳಿಸಿದ ಆರ್ಥಿಕ & ಭೌತಿಕ ಗುರಿಯಂತೆ ಸಾಧನೆ ಯಾಗಿಲ್ಲದಿರುವುದು ಅಂಕಿ-ಅಂಶಗಳಿಂದ ಇಲಾಖೆಗಳ ಪ್ರಗತಿ ಪರಿಶೀಲನಾ ವರದಿಗಳಿಂದ ತಿಳಿದು ಬರುತ್ತಿದ್ದು, ಇದು ಕಾರ್ಯಕ್ರಮದ ಅನುಷ್ಠಾನದಲ್ಲಿನ ವಿಫಲತೆಯಾಗಿದೆ. ಇದು ಮುಸ್ಲಿಂ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯ ಮತ್ತು ಕಲ್ಯಾಣ ಕಾರ್ಯಕ್ರಮಗಳು ನ್ಯಾಯಸಮ್ಮತವಾಗಿ ತಲುಪದೇ ಇರುವುದಕ್ಕೆ ಸಾಕ್ಷಿಯಾಗಿದೆ ಎಂದು ನಿಯೋಗವು ಸರ್ಕಾರಕ್ಕೆ ಬರೆದ ಪತ್ರದಲ್ಲಿ ತಿಳಿಸಿದೆ.
ಸಮುದಾಯಕ್ಕೆ ಯಾವುದೇ ರೀತಿಯ ಅನ್ಯಾಯವಾಗದಂತೆ ಯೋಜನೆಗಳು ಜಾರಿಯಾಗಬೇಕೆಂದು ಒತ್ತಾಯಪಡಿಸಿದ್ದು, ಅದರಲ್ಲಿ ಪ್ರಮುಖವಾಗಿ ಶಾಲಾ-ಶಿಕ್ಷಣಗಳ ಲಭ್ಯತೆಗಳನ್ನು ಹೆಚ್ಚಿಸುವುದು, ಐ.ಸಿ.ಡಿ.ಸಿ ಸೇವೆಗಳು ಸರಿ ಸಮಾನವಾಗಿ ಲಭ್ಯತೆ, ಬಡವರಿಗಾಗಿ ಸ್ವಂತ-ಉದ್ಯೋಗಾವಕಾಶ ಮತ್ತು ವೇತನ ತರುವ ಉದ್ಯೋಗಾವಕಾಶ ಕಾರ್ಯಕ್ರಮಗಳ ಜಾರಿ, ತಾಂತ್ರಿಕ ತರಬೇತಿಗಳ ಮೂಲಕ ಕೌಶಲ್ಯತೆಗಳನ್ನು ಹೆಚ್ಚಿಸುವಲ್ಲಿ ಆದ್ಯತೆ, ಶಿಕ್ಷಣ ಹಾಗೂ ಆರ್ಥಿಕ ಚಟುವಟಿಕೆಗಳಿಗಾಗಿ ಸಾಲ & ಮಾರುಕಟ್ಟೆ ಬೆಂಬಲಗಳನ್ನು ಹೆಚ್ಚಿಸುವುದು, ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ವಸತಿ ಯೋಜನೆಗಳಲ್ಲಿ ಸರಿ-ಸಮಾನ ಪಾಲುಗಳನ್ನು ನೀಡಿ ಶೇಕಡವಾರು ಹೆಚಿಸುವುದು, ಅಲ್ಪಸಂಖ್ಯಾತ-ಮುಸ್ಲಿಂರು ವಾಸಿಸುತ್ತಿರುವ ಕೊಳಚೆಗೇರಿ ಪ್ರದೇಶಗಳಲ್ಲಿನ ಜನ ಜೀವನ ಪರಿಸ್ಥಿತಿಯನ್ನು ಉತ್ತಮಗೊಳಿಸುವುದು, ಉರ್ದು ಕಲಿಸುವದಕ್ಕಾಗಿ ಹೆಚ್ಚಿನ ಸಂಪನ್ಮೂಲಗಳನ್ನು ಒದಗಿಸುವುದು & ಮದರ್ಸಾ ಶಿಕ್ಷಣವನ್ನು ಆಧುನೀಕರಿಸಿ ಅನುಷ್ಠಾನ ಮಾಡುವುದು, ಕೋಮುವಾರು ಘಟನಾವಳಿಗಳನ್ನು ತಡೆಗಟ್ಟುವುದು ಮತ್ತು ತೊಂದರೆಗೊಳಗಾದವರಿಗೆ ಪುನರ್ವಸತಿ ಒದಗಿಸುವುದು, ಮುಂಜಾಗೃತವಾಗಿ ದುರ್ಘಟನೆಗಳು ಸಂಭವಿಸದಂತೆ ಕ್ರಮಗಳ ಜೊತೆ ಅಲ್ಪಸಂಖ್ಯಾತರಿಗೆ ಸೂಕ್ತ ಕಾನೂನಿನ ರಕ್ಷಣೆಯನ್ನು ನೀಡುವುದು, ಪ್ರಸಕ್ತ ಆರ್ಥಿಕ ವರ್ಷದ ಅಂತ್ಯದಲ್ಲಿ ನಿಗದಿ ಗುರಿಯನ್ನು ಸಾಧಿಸುವಂತಾಗಬೇಕು, ಹಾಗೂ ೨೦೧೫-೧೬ ನೇ ಸಾಲಿಗೆ ಅಳವಡಿಸಿಕೊಳ್ಳಬೇಕಾದ ಆರ್ಥಿಕ ಮತ್ತು ಭೌತಿಕ ಸಾಧನೆಗಳ ಬಗ್ಗೆ ಯೋಜನೆ-ಕಾರ್ಯಕ್ರಮವಾರು ಕ್ರೀಯಾ ಯೋಜನೆಯನ್ನು ಸಿದ್ದಪಡಿಸಬೇಕು, ವಿಧಾನಸಭಾ ಕ್ಷೇತ್ರವಾರು / ಗ್ರಾಮ ಪಂಚಾಯತ / ಹೋಬಳಿವಾರು ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳ ಕುರಿತು ಮಾಹಿತಿ ಜಾಗೃತಿ-ಶಿಬರಗಳನ್ನು ಜರುಗಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೆಕೇಂದು ಸಾಚಾರ್ ಕಮೀಟಿ ವರದಿ ಜಾರಿಗಾಗಿ ಹೋರಾಟ ಸಮಿತಿ ಆಗ್ರಹಿಸಿದೆ.
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಹಾಗೂ ಮುಖ್ಯ ಕಾರ‍್ಯನಿರ್ವಾಹಕ ಅಧಿಕಾರಿಗಳಿಗೆ ಮತ್ತು ಲೋಕಸಭಾ ಸದಸ್ಯರಾದ ಕರಡಿ ಸಂಗಣ್ಣನವರಿಗೆ ಮತ್ತು ಶಾಸಕರಾದ ರಾಘವೇಂದ್ರ ಹಿಟ್ನಾಳರಿಗೆ ಈ ಕುರಿತು ಮನವಿ ಸಲ್ಲಿಸಲಾಯಿತು.
ನಿಯೋಗದಲ್ಲಿ ಮುಖಂಡರಾದ ಮೌಲಾಹುಸೇನ ಬುಲ್ಡಿಯಾರ್, ಹೆಚ್.ವಿ.ರಾಜಬಕ್ಷಿ, ಎಂಡಿ ಜಿಲಾನ್ ಕಿಲ್ಲೇದಾರ್, ಕಾಟನ್ ಪಾಷಾ, ಮಾನ್ವಿ ಪಾಷಾ, ಚಿಕನ್ ಪಾಷಾ, ಡಾ.ಖಲೀಲ್ ಸಾಬ ,ಸರ್ದಾರ್‌ಗೌಸ್ ಸಾಬ ಮಹ್ಮದ್ ಪೀರಸಾಬ ಬೆಳಗಟ್ಟಿ,ಎಸ್.ಎಸ್.ಹುಸೇನಿ, ಎಸ್.ಎ.ಗಫಾರ್,ಮುನೀರ್ ಸಿದ್ದಿಖಿ, ಆರ್.ಎಚ್.ಅತ್ತನೂರ,ಮೈಲಪ್ಪ ಬಿಸರಳ್ಳಿ,ಇಮಾಮ ಹುಸೇನ ಸಂಕನೂರ, ಖಾದರಸಾಬ ಮುಧೋಳ,ಜಿ.ಎಸ್.ಗೋನಾಳ,ಖಾಜಾವಲಿ ಜರಕುಂಟಿ,ಡಾ.ಬಾಷಾಹುಸೇನ ಸೇರಿದಂತೆ ಇನ್ನಿತರರು ಇದ್ದರು.
0 comments:
Post a Comment