PLEASE LOGIN TO KANNADANET.COM FOR REGULAR NEWS-UPDATES

 ಕೊಪ್ಪಳ ೧: ಕೊಪ್ಪಳದ ಅಂಬೇಡ್ಕರ್ ಸರ್ಕಲ್ ನಲ್ಲಿ ಇಂದು ಭಾರತೀಯ ದಲಿತ ಫ್ಯಾಂಥರ್ ಜಿಲ್ಲಾ ಸಮಿತಿ ವತಿಯಿಂದ ಡಾ. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಕೋರೆಗಾಂವ್ ವಿಜಯೋತ್ಸವ ಆಚರಿಸಲಾಯಿತು. 
ಈ ಸಂದರ್ಭದಲ್ಲಿ ಕೋರೆಗಾಂವ್ ಯುಧ್ದದ
ಸಂದರ್ಭವನ್ನು ಸ್ಮರಿಸಲಾಯಿತು. ಜಿಲ್ಲಾಸಂಘಟನಾ ಕಾರ್ಯದರ್ಶಿ ನಾಗರಾಜ್ ಬೆಲ್ಲದ ಮಾತನಾಡಿ ಜನವರಿ ೧ ೧೮೧೮ರಲ್ಲಿ ಮಹಾರಾಷ್ಟ್ರದ ಪೇಶ್ವೆಯರ ಆಡಳಿತದಲ್ಲಿ ಶೋಷಿತ ಜನಾಂಗದ ಮಹರ್ ಸೈನಿಕರು ಶೋಷಣೆಯ ವಿರುದ್ದ ಸಿಡಿದೆದ್ದು ೨೮ ಸಾವಿರ ಪೇಶ್ವೆಯ ಸೈನಿಕರ ವಿರುದ್ದ ಕೇವಲ ೫೦೦ ಮಹರ್ ಸೈನಿಕರು ಯುದ್ದಮಾಡಿ ಜಯಗಳಿಸುತ್ತಾರೆ ಆದ್ದರಿಂದ ಈ ದಿನವನ್ನು ಶೋಷಣೆಯ ವಿರುದ್ದ ಹೋರಾಡಿ ಜಯಿಸಿದ ದಿನವೇಂದು ಆಚರಿಸಲಾಗುತ್ತದೆಂದು  ಹೇಳಿದರು.
ಅಸ್ಪೃಶ್ಯತೆ ವಿರುದ್ದ ಹೋರಾಡಿ ಜಯಸಾಧಿಸಿದ ಈ ಘಟನೆ ಇತಿಹಾಸದಲ್ಲೇ ಹುದುಗಿಹೋಗಿತ್ತು ಈ ಐತಿಹಾಸಿಕ ಜಯದ ಘಟನೆಯ್ನು ಡಾ.ಅಂಬೇಡ್ಕರರು ಹೊರತೆಗೆದು ಪ್ರಪಂಚಕೆ ತೋರಿಸಿದರು. ಶೋಷಣೆ ವಿರುದ್ದ ಅಂದೇ ಹೋರಾಡಿದ ಈ ಘಟನೆಯಿಂದ ಅಂಬೇಡ್ಕರರು ತಮ್ಮ ಹೋರಾಟದ ಬದುಕಿಗೆ ಸ್ಪೂರ್ತಿ ಪಡೆದರು. 
ಈಯುದ್ದದಲ್ಲಿ ಶೌರ್ಯ ಪ್ರದರ್ಶಿಸಿ ಮಡಿದ ೨೨ ಮಹರ್ ಸೈನಿಕರ ಸವಿನೆನಪಿಗಾಗಿ ಬ್ರಿಟಿಷರು ೧೮೨೧ ಮಾರ್ಚ ೨೧ ರಂದು ಕೋರೆಗಾಂವ್ ಎಂಬ ಸ್ಥಳದಲ್ಲಿ ೬೫ ಅಡಿ ಎತ್ತರದ ಶಿಲಾ ಸ್ಮಾರಕ ನಿರ್ಮಿಸಿದ್ದಾರೆ, ಪ್ರತಿ ಜನವರಿ ೧ ರಂದು ಡಾ.ಅಂಬೇಡ್ಕರರು ತಾವು ಬದುಕಿರುವ ದಿನಗಳಲ್ಲಿ ಕುಟುಂಬ ಸಮೇತರಾಗಿ ಈ ಐತಿಹಾಸಿಕ ಸ್ಮಾರಕ ಸ್ಥಳಕ್ಕೆ ಭೇಟಿ ನೀಡುತ್ತಿದ್ದರು. ಈ ಘಟನೆಯಿಂದ ಪ್ರೇರೇಪಿತರಾಗಿ ಶೋಷಿತರನ್ನು ಎಚ್ಚರಿಸಲು ಇತಿಹಾಸವನ್ನು ಮರೆತವರು ಇತಿಹಾಸ ಸೃಷ್ಟಿಸಲಾರರು ಎಂದು ಹೇಳಿದ್ದರು. 
ಈ ಸಂದರ್ಭದಲ್ಲಿ ವೆಂಕಟೇಶ್ ಬೆಲ್ಲದ್, ಹೆಚ್ ವಿ ರಾಜಾಭಕ್ಷಿ, ಆರ್ ಹೆಚ್ ಅತ್ತನೂರ, ಹಾಗೂ ಸಂಘಟನೆಯ ಸದಸ್ಯರಾದ ಮಂಜು ದೊಡ್ಡಮನಿ, ಗೌತಮ್ ಬಳಗಾನೂರ, ಆನಂದ್ ಬೆಲ್ಲದ್, ಸಿದ್ದಾರ್ಥ ಚಾಕ್ರಿ, ರಾಘು ಚಾಕ್ರಿ, ವಿನಾಯಕ್ ಬೆಲ್ಲದ್, ಅನೀಲ್ ಕಸ್ತೂರಿ, ಶರಣ ಬೆಲ್ಲದ್, ಕೊಟ್ರೇಶ್ ಚಾಕ್ರಿ, ಜಗದೀಶ್ ಬೆಲ್ಲದ್, ಮನೋಹರ್, ಪ್ರಮೋದ್ ಬಳಗಾನೂರ ಇತರರು ಇದ್ದರು.

Advertisement

0 comments:

Post a Comment

 
Top