PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ : ಜಿಲ್ಲಾ ಕ್ರೀಡಾಂಗಣದಲ್ಲಿ ೬೬ನೇ ಗಣರಾಜ್ಯೋತ್ಸವ ಪ್ರಯುಕ್ತ ವಿವಿಧ ರಂಗದಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಕೊಪ್ಪಳ ಜಿಲ್ಲಾಡಳಿತ ವತಿಯಿಂದ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿತ್ತು. 
ಕೊಪ್ಪಳ ನಗರದ ಅಂತರಾಷ್ಟ್ರೀಯ ಕರಾಟೆ ಪಟು ಮೌನೇಶ ಶಂಕ್ರಪ್ಪ ವಡ್ಡಟ್ಟಿ ಇವರು ೨೦೧೧ ರಲ್ಲಿ ಮಲೇಶೀಯಾ ಮತ್ತು ಶ್ರೀಲಂಕಾ ದಲ್ಲಿ ನಡೆದ ಅಂತರಾಷ್ಟ್ರೀಯ ಕರಾಟೆ ಸ್ಪರ್ಧೇಯಲ್ಲಿ ಭಾಗವಹಿಸಿ ಚಿನ್ನದ ಪದಕ ಮತ್ತು ಬೆಳ್ಳಿಯ ಪದಕ ಪಡೆದು ನಮ್ಮ ನಾಡಿಗೆ ಕೀರ್ತೀಯನ್ನು ತಂದಿದ್ದಕ್ಕಾಗಿ ಜಿಲ್ಲಾಡಳಿತದಿಂದ ಅಪರಾ ಜಿಲ್ಲಾಧಿಕಾರಿಯಾದ ಸುರೆಶ ಹಿಟ್ನಾಳ ಇವರು ಮೌನೇಶ ಶಂಕ್ರಪ್ಪ ವಡ್ಡಟ್ಟಿ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು. 
ಅದೇ ರೀತಿ ಅಂಗವಿಕಲೆಯಾದ ಶೈಲಜಾ ಇವರು ಇತ್ತಿಚಿಗೆ ವಿಶ್ವ ವಿಕಲ ಚೇತನ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದಕ್ಕಾಗಿ ಇವರಿಗೂ ಸಹ ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಚಿವರಾದ ಶಿವರಾಜ ತಂಗಡಗಿ, ಶಾಸಕರಾದ ರಾಘವೇಂದ್ರ ಹಿಟ್ನಾಳ, ಸಂಸದರಾದ ಸಂಗಣ್ಣ ಕರಡಿ, ಮತ್ತು ಜಿಲ್ಲಾಧಿಕಾರಿಗಳಾದ ಆರ್ ಆರ್ ಜನ್ನು, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯಾದ ಪಿ ರಾಜಾ ಮತ್ತಿರರು ಉಪಸ್ಥಿತರಿದ್ದರು. 

Advertisement

0 comments:

Post a Comment

 
Top