PLEASE LOGIN TO KANNADANET.COM FOR REGULAR NEWS-UPDATES

  : ಸಮಾಜ ಸುಧಾರಕರು ಮನಸ್ಸುಗಳನ್ನು ಒಗ್ಗೂಡಿಸುವ ಕೆಲಸ ಮಾಡಿದರೆ, ಕೋಮುವಾದಿಗಳು ಮನಸ್ಸುಗಳನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ನಿಡುಮಾಮಿಡಿ ಮಠದ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಆಪಾದಿಸಿದ್ದಾರೆ.
   ಶುಕ್ರವಾರ ನಾವು ಭಾರತೀಯರು ಸಂಘಟನೆಯು ‘ಸೌಹಾರ್ದತೆಯ ಕಡೆಗೆ ನಮ್ಮ ನಡಿಗೆ’ ಎಂಬ ಸಂದೇಶದ ಅಡಿಯಲ್ಲಿ ಆನಂದರಾವ್ ವೃತ್ತದ ಗಾಂ ಪ್ರತಿಮೆ ಯ ಬಳಿಯಿಂದ ಸ್ವಾತಂತ್ರ ಉದ್ಯಾನದವರೆಗೆ ಕಾಲ್ನಡಿಗೆಯಲ್ಲಿ ಮೆರವಣಿಗೆ ನಡೆಸಿದ ಬಳಿಕ ಅವರು ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಜಾತ್ಯತೀತ ಮನೋಭಾವನೆಯವರಾದ ಡಾ.ಬಿ.ಆರ್.ಅಂಬೇಡ್ಕರ್, ಬಸವಣ್ಣ, ಗಾಂೀಜಿ ಹಾಗೂ ಸಾಧು-ಸಂತರು ಜಾತಿ ವ್ಯವಸ್ಥೆಯನ್ನು ತೊಡೆದು ಹಾಕಲು ಎಲ್ಲ ಮನಸ್ಸುಗಳನ್ನು ಒಗ್ಗೂಡಿಸಿದರೆ, ಕೋಮುವಾದಿಗಳು ಮನಸ್ಸುಗಳನ್ನು ಒಡೆಯುವ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ಸ್ವಾಮೀಜಿ ಆಪಾದಿಸಿದರು.
    ಆರೆಸೆಸ್ಸಿಗರು ವಿದೇಶದಲ್ಲಿರುವ ಕಪ್ಪು ಹಣ, ಶ್ರೀಮಂತರಲ್ಲಿರುವ ಕಪ್ಪು ಹಣ, ಮಠದಲ್ಲಿರುವ ಕಪ್ಪು ಹಣವನ್ನು ಹಿಂದೆ ತರಲು ‘ಘರ್‌ವಾಪಸಿ’ ಕಾರ್ಯಕ್ರಮವನ್ನು ಬಳಸಬೇಕಾಗಿತ್ತು. ಆದರೆ, ಇಲ್ಲಿ ಜಾತ್ಯತೀತ ಮನೋಭಾವನೆಯುಳ್ಳ ವ್ಯಕ್ತಿಗಳ ಮೇಲೆ ಹಿಂದೂತ್ವವನ್ನು ಹೇರುವುದಕ್ಕಾಗಿ ಘರ್‌ವಾಪಸಿ ಕಾರ್ಯಕ್ರಮವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಅವರು ಕಿಡಿಗಾರಿದರು. ಬಿಜೆಪಿಗೆ ಅಕಾರ ಸಿಗದ ಪರಿ ಣಾಮವೇ ಆರೆಸೆಸ್ಸಿಗರು ಅಸಮಾಧಾನಗೊಂಡು ದೇಶದಲ್ಲಿ ಅಶಾಂತಿಯನ್ನು ಹುಟ್ಟು ಹಾಕುತ್ತಿದ್ದಾರೆಂದು ದೇಶದ ಜನರು ಬಿಜೆಪಿಗೆ ಅಕಾರ ನೀಡಿದರೆ, ಈಗ ಅದೇ ಬಿಜೆಪಿ ಸರಕಾರ ಸಂವಿಧಾನದ ಪರಾಮರ್ಶೆ, ಸಮಾಜ ಸುಧಾರಕರ ಪರಾಮರ್ಶೆ ಎಂಬಂತಹ ಕಾರ್ಯಕ್ರಮಗಳನ್ನು ಜಾರಿಗೆ ತಂದು ದೇಶದಲ್ಲಿ ಮತ್ತೆ ಅಶಾಂತಿಯನ್ನು ಹುಟ್ಟು ಹಾಕಲು ಪ್ರಯತ್ನಿಸುತ್ತಿದೆ ಎಂದು ಸ್ವಾಮೀಜಿ ಆರೋಪಿಸಿದರು. ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೋ.ಚೆನ್ನಬಸಪ್ಪ ಮಾತನಾಡಿ, ಮಹಾತ್ಮಾ ಗಾಂೀಜಿಯವರನ್ನು ಕೊಲ್ಲುವುದಕ್ಕಾಗಿ ಹಂತಕ ನಾಥೂರಾಮ ಗೋಡ್ಸೆ ಅವರ ಕಾಲಿಗೆ ಬಿದ್ದರೆ, ನರೇಂದ್ರ ಮೋದಿ ಸಂವಿಧಾನವನ್ನು ಮುಗಿಸಲು ಸಂಸತ್ ಮೆಟ್ಟಿಲಿಗೆ ನಮಸ್ಕರಿಸಿದ್ದಾರೆ ಎಂದರು.
ಆರೆಸೆಸ್ಸಿಗರು ಮಹಾತ್ಮಾ ಗಾಂಯನ್ನು ಕೊಂದ ಗೋಡ್ಸೆ ಪ್ರತಿಮೆಯನ್ನು ದೇಶಾದ್ಯಂತ ಸ್ಥಾಪಿಸುತ್ತೇವೆಂದು ಹೇಳುತ್ತಿದ್ದಾರೆ. ಹಾಗೊಂದು ವೇಳಿ ಗೋಡ್ಸೆ ಪ್ರತಿಮೆಯನ್ನು ಸ್ಥಾಪಿಸುವುದೇ ಆದರೆ, ಪ್ರತಿಮೆಯ ಪಕ್ಕದ ಲಕದಲ್ಲಿ ಗಾಂಯನ್ನು ಕೊಂದ ಭಂಡನೆಂದು ಬರೆಯಿರಿ ಎಂದು ಅವರು ಹೇಳಿದರು. ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್‌ಮಟ್ಟು ಮಾತನಾಡಿ, ಸಂಘ ಪರಿವಾರದವರು ಬಸವಣ್ಣ, ಅಂಬೇಡ್ಕರ್, ಗಾಂೀಜಿ, ಸ್ವಾಮಿ ವಿವೇಕಾನಂದರನ್ನು ತಮ್ಮವರೆಂದು ಬಿಂಬಿಸಲು ಹೊರಟಿದ್ದು, ಇಂತಹ ಆಲೋಚನಾ ಮನಸ್ಸುಗಳಿಗೆ ಕಡಿವಾಣ ಹಾಕುವ ಆವಶ್ಯಕತೆ ಇದೆ ಎಂದು ಸಲಹೆ ನೀಡಿದರು. ಹಿರಿಯ ಸಾಹಿತಿ ಕೆ.ಮರುಳಸಿದ್ದಪ್ಪ ಮಾತನಾಡಿ, ಮಾಧ್ಯಮಗಳು ಸಂವಿಧಾನ ಪರಾಮರ್ಶೆ, ಮೀಸಲಾತಿ ವಿರೋ, ಘರ್‌ವಾಪಸಿ ಮತ್ತಿತರ ಸಮಾಜ ವಿರೋ ಚಟುವಟಿಕೆಗಳಿಗೆ ಹೆಚ್ಚು ಮಹತ್ವವನ್ನು ಕೊಡದೇ ಸಮಾಜಕ್ಕೆ ಪೂರಕವಾಗಿರುವ ಕಾರ್ಯಕ್ರಮಗಳಿಗೆ ಹೆಚ್ಚು ಮಹತ್ವವನ್ನು ನೀಡಿ ಎಂದು ಅವರು ಸಲಹೆ ನೀಡಿದರು.
 ದಲಿತ ಮುಖಂಡ ಮಾವಳ್ಳಿ ಶಂಕರ್ ಮಾತನಾಡಿ, ಚಳವಳಿಗಳ ಮೂಲಕ ವಿದ್ಯಾರ್ಥಿಗಳಲ್ಲಿ ಹಾಗೂ ಯುವಕರಲ್ಲಿ ವೈಚಾರಿಕ ಪ್ರಜ್ಞೆಯನ್ನು ಬೆಳೆಸಿದರೆ ಅಂಬೇಡ್ಕರ್ ರಚಿಸಿದ ಸಂವಿಧಾನಕ್ಕೆ ಯಾವುದೆ ಧಕ್ಕೆ ಉಂಟಾಗುವುದಿಲ್ಲ ಎಂದು ಅವರು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ವಿಮರ್ಶಕಿ ಎಂ.ಎಸ್.ಆಶಾದೇವಿ, ಪುಸ್ತಕ ಪ್ರಾಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ, ಮಹಿಳಾ ಲೇಖಕಿಯರ ಸಂಘದ ಅಧ್ಯಕ್ಷೆ ವಸೂಂಧರಾ ಭೂಪತಿ, ಕಾರ್ಮಿಕ ಮುಖಂಡ ನಾಗರಾಜ್, ಪತ್ರಕರ್ತೆ ಡಾ. ವಿಜಯಮ್ಮ, ಕವಯಿತ್ರಿ ಡಾ.ಕೆ.ಷರೀಪಾ, ನಿವೃತ್ತ ಪೊಲೀಸ್ ಅಕಾರಿ ಬಿ.ಕೆ.ಶಿವರಾಂ, ಬೊಳುವಾರು ಮಹಮದ್ ಕುಞ, ಕೆ.ಎಸ್.ವಿಮಲಾ, ಲೀಲಾ ಸಂಪಿಗೆ, ಕೆ.ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top