ವಿದೇಶಗಳಲ್ಲಿರುವ ಕಪ್ಪು ಹಣವನ್ನು ವಾಪಸ್ ತರಲು ಸರಕಾರ ಮುಂದಾಗಿರುವಂತೆಯೇ, ವಿದೇಶಿ ನೆಲಗಳಲ್ಲಿ ಅಕ್ರಮ ಸಂಪತ್ತು ಹೊಂದಿರುವ ವ್ಯಕ್ತಿಗಳೂ ಸುಮ್ಮನೆ ಕುಳಿತಿಲ್ಲ. ತಮ್ಮ ಅಕ್ರಮ ಸಂಪತ್ತನ್ನು ಸಕ್ರಮವಾಗಿಯೇ ಭಾರತಕ್ಕೆ ತರಲು ಪ್ರಯತ್ನಗಳನ್ನು ಅವರು ನಡೆಸುತ್ತಿದ್ದಾರೆ.


ನಿರ್ದೇಶನಾಲಯದ ಅಧಿಕಾರಿಗಳ ಗಮನ ಸೆಳೆದ ಅಂಶವೆಂದರೆ, ಹಿಂದೆಂದೂ ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಕೈಯಿಂದ ನಿರ್ಮಿತ ರತ್ನಗಂಬಳಿಗಳು ದೇಶದಿಂದ ರಫ್ತಾಗಿಲ್ಲ ಹಾಗೂ ಇಷ್ಟೊಂದು ಪ್ರಮಾಣದ ಭಾರತೀಯ ಉತ್ಪನ್ನದ ಆಮದನ್ನು ಯುಎಇ ನೋಡಿಲ್ಲ.
ಕಳೆದ ಐದು ವರ್ಷಗಳಲ್ಲಿ ಭಾರತದಿಂದಾದ ಕೈಯಿಂದ ಮಾಡಿದ ರತ್ನಗಂಬಳಿಗಳ ಒಟ್ಟು ರಫ್ತು 4,000-5,000 ಕೋಟಿ ರೂ. ಹಾಗೂ ಆ ಪೈಕಿ 60 ಶೇ. ಅಮೆರಿಕ ಮತ್ತು ಯುರೋಪ್‌ಗಳಿಗೆ ಹೋಗಿದೆ. ಭಾರೀ ಪ್ರಮಾಣದಲ್ಲಿ ಶಂಕಿತ ಸರಕುಗಳು ತಲುಪಿರುವ ಯುಎಇ ಭಾರತದಿಂದ ರತ್ನಗಂಬಳಿಗಳನ್ನು ಆಮದು ಮಾಡುವ ದೇಶಗಳ ಅಗ್ರ 20ರ ಪಟ್ಟಿಯಲ್ಲೂ ಇಲ್ಲ. ಈ ಹಿನ್ನೆಲೆಯಲ್ಲಿ ನಿರ್ದೇಶನಾಲಯ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ‘‘ನೆಲಕ್ಕೆ ಹಾಸುವ ಕೈಯಿಂದ ನಿರ್ಮಿತ ನಾರು’’ ಎಂಬ ಘೋಷಿತ ಹೆಸರಿನಲ್ಲಿ ಸಾಗಿಸಲಾಗುತ್ತಿದ್ದ ಸುಮಾರು 50 ಕಂಟೇನರ್‌ಗಳನ್ನು ವಿವಿಧ ಬಂದರುಗಳಲ್ಲಿ ಪರಿಶೀಲನೆ ನಡೆಸಿತು. ಇವುಗಳಲ್ಲಿ ಸಾಗಿಸಲಾಗುತ್ತಿದ್ದ ನಿಜವಾದ ಸರಕು ಅಗ್ಗದ ಹೊದಿಕೆಗಳು ಎಂಬುದಾಗಿ ದಾಳಿಯ ವೇಳೆ ಬಯಲಾಯಿತು.
0 comments:
Post a Comment