ಕೊಪ್ಪಳ: ದೇಶದ ಸ್ವಾತಂತ್ರ್ಯಕ್ಕಾಗಿ ಮಹಾತ್ಮರು ನೀಡಿದ ಕೊಡುಗೆ ಅನನ್ಯವಾದದ್ದು ಎಂದು ಸಿ.ಪಿ.ಎಸ್.ಶಾಲೆಯ ಶಿಕ್ಷಕರಾದ ಅಂಬಕ್ಕ ಜಂತ್ಲಿ ಹೇಳಿದರು.
ಸಿ.ಪಿ.ಎಸ್.ಶಾಲೆಯಲ್ಲಿ ಸರ್ಕಾರಿ ಅಂಗವಿಕಲ ನೌಕರರ ಸಂಘ ಮತ್ತು ನ್ಯೂ ಸ್ಟಾರ್ ಕರಾಟೆ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಹುತಾತ್ಮರ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡುತ್ತ,ಭಾರತ ದೇಶವು ಸ್ವಾತಂತ್ರ್ಯವನ್ನು ಪಡೆಯಲು ಅನೇಕ ಮಹಾನ ನಾಯಕರು ತಮ್ಮ ಪ್ರಾಣವನ್ನು ಲೆಕ್ಕಿಸದೆ ದೇಶದ ಸಲುವಾಗಿ ಪ್ರಾಣವನ್ನು ತ್ಯಾಗ ಮಾಡಿದ್ದಾರೆ.ಇಂತಹ ಅನೇಕ ಮಹಾತ್ಮರು ದೇಶಕ್ಕೆ ನೀಡಿದ ಕೊಡುಗೆ ಅನನ್ಯವಾದದಾಗಿದೆ ಎಂದು ಹೇಳಿದರು.
ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿ,ಮಹಾತ್ಮ ಗಾಂಧಿಜೀಯವರು ತಮ್ಮ ಮುಖ್ಯ ತತ್ವವಾದ ಅಹಿಂಸೆ ಹಾಗೂ ಸತ್ಯಾಗ್ರದ ಮೂಲಕ ಯಾವ ರೀತಿಯಲ್ಲಿ ಸ್ವಾತಂತ್ರ್ಯವನ್ನು ಪಡೆಯಬಹುದು ಎಂದು ವಿಶ್ವಕ್ಕೆ ತೋರಿಸಿ ಕೊಟ್ಟಿದ್ದಾರೆ.ಅಲ್ಲದೆ ದಕ್ಷಿಣ ಆಫ್ರಿಕಾದಲ್ಲಿದ್ದ ವರ್ಣಭೇಧ ನೀತಿಯನ್ನು ಕೂಡಾ ಓಗಲಾಡಿಸುವಲ್ಲಿ ನೀಡಿದ ಕೊಡುಗೆ ಅಪಾರವಾದದಾಗಿದೆ.ಶಾಂತಿಯ ಮೂಲಕ ಕೂಡಾ ಕ್ರೋರರ ಮನಸ್ಸುನನ್ನು ಗೆಲ್ಲಬಹುದು ಎಂಬುದನ್ನು ತಿಳಿಸಿ ಕೊಟ್ಟಿದ್ದಾರೆ ಎಂದು ಹೇಳಿದರು.
ನ್ಯೂ ಸ್ಟಾರ್ ಕರಾಟೆ ಕ್ಲಬ್‌ನ ಸಂಸ್ಥಾಪಕರಾದ ರಾಘವೇಂದ್ರ ಅರಕೇರಿ ಮಾತನಾಡಿ,ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಮಹಾನ ವ್ಯಕ್ತಿಗಳು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ.ಆದರೆ ಇಂದು ದೇಶ ಸೇವಯನ್ನು ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ.ದೇಶ ಸೇವೆಗೆ ಪ್ರತಿಯೊಬ್ಬರೂ ಕೂಡಾ ಮುಂದಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯರಾದ ಭರಮಪ್ಪ ಕಟ್ಟಿಮನಿ ಮಾತನಾಡುತ್ತ,ಮಹಾತ್ಮರ ತತ್ವ ಹಾಗೂ ಸಿದ್ದಾಂತಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಅಂಗವಿಕಲ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಹೆಚ್.ಆರ್.ಹಂಜಕ್ಕಿ,ಶಿಕ್ಷಕರಾದ ವಿಜಯಾ ಹಿರೇಮಠ,ವಿರುಪಾಕ್ಷಪ್ಪ ಬಾಗೋಡಿ,ಶಾಲಾ ಸಮಿತಿಯ ಸದಸ್ಯರಾದ ಸುಮಾ ಬೋಂದಡೆ ಮುಂತಾದವರು ಹಾಜರಿದ್ದರು.
ಶಿಕ್ಷಕಿ ರಾಜೇಶ್ವರಿ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕಿಯರಾದ ಗಂಗಮ್ಮ ತೋಟದ ಸ್ವಾಗತಿಸಿ,ಗೌಸೀಯಾಬೇಗಂ ವಂದಿಸಿದರು.
0 comments:
Post a Comment