ಇತ್ತಿಚಿಗೆ ಕೊಪ್ಪಳ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಚಿತ್ರಕಲಾ ಪ್ರದರ್ಶನ ಎಲ್ಲರ ಗಮನ ಸೆಳೆಯಿತು ಏಕೆಂದರೆ ಇಲ್ಲಿ ವೈವಿಧ್ಯಮಯ ೩ ವಿಧಧ ಕಲೆಗಳು ಮೇಳೈಸಿತ್ತು ಜಲವರ್ಣದ ಭಾವಚಿತ್ರ, ವ್ಯಂಗ್ಯಚಿತ್ರ ಮತ್ತು ಜಲವರ್ಣ ನಿಸರ್ಗ ಚಿತ್ರಣ ಎಲ್ಲರನ್ನೂ ಕೈ ಬೀಸಿ ಕರೆದು ಮುದ ನೀಡಿತ್ತು.
ದೂರದ ಮಾನವಿಯ ಚಿತ್ರಕಲಾವಿದ ರವಿ ನಾಯಕ ರವರ ಜಲವರ್ಣದ ಡಾ.ರಾಜಕುಮಾರ ವ್ಯಕ್ತಿ ಚಿತ್ರಗಳು ಅತ್ಯಂತ ಸೃಜನಾತ್ಮಕ ಕಲೆ ಡಾ.ರಾಜ್ ಸಮ್ಮೇಳನಕ್ಕೆ ಬಂದಹಾಗೆ ಭಾಸವಗುತ್ತಿತ್ತು. ಸ್ಥಳೀಯ ಕಲಾವಿದ ಬದರಿ ಪುರೋಹಿತ ವ್ಯಂಗ್ಯ ಗಳು ನೋಡುಗರನ್ನು ನಗೆಗಡಲಲ್ಲಿ ತೇಲಿಸಿತ್ತು ಒಬಾಮರ ಉದ್ದನೆಯ ಮೂಗು, ಬುದ್ಧ ಹಾಗೂ ಮೈಕಲ್ ಜಾಕ್ಸ್‌ನ್, ಸೋನಿಯಾಗಾಂಧಿ, ಸಿದ್ದರಾಮಯ್ಯರ ಮತ್ತು ನಿತ್ಯಾನಂದನ ವ್ಯಂಗ್ಯಚಿತ್ರಗಳು ಕಚಗುಳಿ ಇಡುವಂತಿದ್ದವು.
ಮತ್ತೊಬ್ಬ ಸ್ಥಳಿಯ ಹಿರಿಯ ಕಲಾವಿದ ವೀರಯ್ಯ ಒಂಟಿಗೋಡಿಮಠ ರವರ ಜಲವರ್ಣದ ಕೃತಿಗಳು ನೋಡುಗರನ್ನು ಹಂಪೆಗೆ ಕರೆದ್ಯೂದಂತಿತ್ತು ಕಲ್ಲಿತೇರು, ರಾಣಿಯ ಸ್ನಾನಗೃಹ ಕೃತಿಗಳ ನೆರಳು ಬೆಳಕಿನಾಟ ನೋಡುಗರನ್ನು ಮಂತ್ರಮುಗ್ದರನ್ನಾಗಿಸುತ್ತಿದ್ದವು.
0 comments:
Post a Comment