ಪ್ರಾಥಮಿಕ ಆರೋಗ್ಯಕೇಂದ್ರಕ್ಕೆ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಬೇಟಿ-
ಕೊಪ್ಪಳ, ಜ: ೧೦ ಕ್ಷೇತ್ರದ ಹಿಟ್ನಾಳ ಗ್ರಾಮದಲ್ಲಿ ಜನರು ತೀರ್ವ ವೈರಲ್ ಫೀವರಿಗೆ ಸೋಂಕಿತರಾಗಿದ್ದು ಸುಮಾರು ಅಂದಾಜು ೭೫ ಜನರಲ್ಲಿ ಈ ಜ್ವರವು ಉಲ್ಬಣಗೊಂಡಿದ್ದು ಗೊಚರಿಸಿದ್ದು, ಹಿಟ್ನಾಳ ಗ್ರಾಮದ ಪ್ರಾಥಮಿಕ ಆರೋಗ್ಯಕೇಂದ್ರಕ್ಕೆ ಶಾಸಕರು ಬೇಟಿ ನೀಡಿ ಅಲ್ಲಿಯ ವೈಧ್ಯರಿಗೆ ಶೀಘ್ರ ರಕ್ತಪರೀಕ್ಷೆ ಮಾಡಿಸಲು ಸೂಚನೆನೀಡಿ ಗ್ರಾಮದಲ್ಲಿ ಸ್ವಚ್ಛತೆ ಹಾಗೂ ಶುದ್ಧ ಕುಡಿಯುವ ನೀರನ್ನು ಬಳಸಬೇಕೆಂದು ಗ್ರಾಮಪಂಚಾತಿಯ ಪಿ.ಡಿ.ಯೋ ಹಾಗೂ ಕಾರ್ಯದರ್ಶೀಗಳೀಗೆ ಆದೇಶ ನೀಡಿದ್ದಾರೆ. ಗ್ರಾಮದ ಸ್ವಚ್ಛತೆಗೆ ಹೆಚ್ಚು ಒತ್ತುಕೊಟ್ಟು ಜನರ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕೆಂದು ಸೂಚಿಸಿದರು. ೨೫ ಜನರು ತೀರ್ವ ಅಸ್ತವೈಸ್ಥಗೊಂಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ. ಇನ್ನುಳಿದ ರೋಗಿಗಳಿಗೆ ಪ್ರಥಮ ಚಿಕಿತ್ಸೆನೀಡಿ ಆರೈಕೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಕೆ.ರಾಜಶೇಖರ ಹಿಟ್ನಾಳ, ಮಲ್ಲಿಕಾರ್ಜುನಗೌಡ, ನಾರಾಯಣ ಬಿಲ್ಲಮ್ ಕರ್, ವೈಧ್ಯಾಧಿಕಾರಿಗಳಾದ ಡಾ|| ನಾಗೇಂದ್ರ ಹುಲಗಿ, ಅಸ್ಕರಲಿ, ಧರ್ಮರಾಜ ಕಂಪಸಾಗರ, ಅಶೋಕ ಇಳಿಗೇರ, ವಿಜಯಕುಮಾರ ಪಾಟೀಲ, ಬಾಬು ಸಯ್ಯದ್, ಬಸವರಾಜ ಅನೆಗುಂದಿ, ಇನ್ನೂ ಅನೇಕರು ಉಪಸ್ಥಿತರಿದ್ದರು.
0 comments:
Post a Comment