ಕೊಪ್ಪಳ: ಸರ್ಕಾರಿ ಅಂಗವಿಕಲ ನೌಕರರ ಸಂಘದ ವತಿಯಿಂದ ಪ್ರತಿ ವರ್ಷ ನೀಡಲಾಗುವ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಹಾಗೂ ಕ್ರಿಯಾಶೀಲ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಉತ್ತಮ ಶಿಕ್ಷಕರು ಪ್ರಶಸ್ತಿ ಆಯ್ಕೆಯಾದವರು:
೧.ಮಹಾಜಬೀನ ಅತ್ತಾರ.ಸ.ಕಿ.ಪ್ರಾ.ಶಾಲೆ.ಸಂಗನಾಳ ಯಲಬುರ್ಗಾ,ಪ್ರಮೀಳಾ.ಸ.ಮಾ.ಹಿ.ಪ್ರಾ.ಶಾಲೆ.ಸಿದ್ದಾಪುರ ಗಂಗಾವತಿ,ಸೋಮಪ್ಪ ಸ.ಪ್ರೌಢ.ಶಾಲೆ.ಆನೆಗೊಂದಿ ಗಂಗಾವತಿ,ಬಸಪ್ಪ ಸ.ಮಾ.ಹಿ.ಪ್ರಾ.ಶಾಲೆ.ಹನುಮನಾಳ ಕುಷ್ಟಗಿ,ತುಕಾರಾಮ ಸ.ಹಿ.ಪ್ರಾ.ಶಾಲೆ ಕನ್ಯಾ ತಾವರಗೇರಾ ,ದೊಡ್ಡಬಸಪ್ಪ ಗುಡೂರು.ಸ.ಮಾ.ಹಿ.ಪ್ರಾ.ಶಾಲೆ.ಹೂಲಗೇರಿ ಕುಷ್ಟಗಿ,ಚಂದಪ್ಪ ಕರಡಿ ಸ.ಹಿ.ಪ್ರಾ.ಶಾಲೆ.ಶಾಕಾಪುರ,ಮಂಜುನಾಥ.ಬುಲ್ಟಿ.ಉಪನ್ಯಾಸಕರು ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಕೊಪ್ಪಳ,ಶಂಕ್ರಮ್ಮ ಬಂಗಾರಶೆಟ್ಟರ್ ಸ.ಕೇಂ.ಮಾ.ಹಿ.ಪ್ರಾ.ಶಾಲೆ.ಕೊಪ್ಪಳ,ಗಂಗಪ್ಪ ಅಂಬಿಗೇರ ಸ.ಮಾ.ಹಿ.ಪ್ರಾ.ಶಾಲೆ.ಬೇಟಗೇರಿ ಕೊಪ್ಪಳ,ಪಕೀರಪ್ಪ.ಎಚ್.ಸ.ಹಿ.ಪ್ರಾ.ಶಾಲೆ ಕಿಡದಾಳ ಕೊಪ್ಪಳ
ಉತ್ತಮ ಕ್ರಿಯಾಶೀಲ ನೌಕರ ಪ್ರಶಸ್ತಿಗೆ ಆಯ್ಕೆಯಾದವರು:
ಹನುಮಂತಪ್ಪ ನಡುವಲಮನಿ.ಆರೋಗ್ಯ ಇಲಾಖೆ ಯಲಬುರ್ಗಾ
ಉತ್ತಮ ಶಿಕ್ಷಕ ಹಾಗೂ ಕ್ರಿಯಾಶೀಲ ನೌಕರರ ಪ್ರಶಸ್ತಿಯನ್ನು ಜ.೧೨ರಂದು ಕುಷ್ಟಗಿ ನಗರದ ರೇಣುಕಾಚಾರ್ಯ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿರುವ ಜಿಲ್ಲಾ ಮಟ್ಟದ ವಿಶ್ವ ಅಂಗವಿಕಲರ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿತರಿಸಲಾಗುತ್ತದೆ ಎಂದು ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ ತಿಳಿಸಿದ್ದಾರೆ.
0 comments:
Post a Comment