ಸೆಮಿಸ್ಟರ್ ಪದ್ಧತಿಗಳನ್ನು ಜಾರಿಗೆ ತಂದಿರುವದರಿಂದ ಉಪನ್ಯಾಸಕರಿಗೆ ಸಿಲ್ಯಾಬಸ್ ಅನ್ನು ಮುಗಿಸಲು ಸಾಧ್ಯವಾಗುವುದಿಲ್ಲ. ಅಲ್ಲದೇ ವಿಧ್ಯಾರ್ಥಿಗಳಿಗೆ ಆರ್ಥಿಕವಾಗಿ ಹೊರೆ ಆಗುವುದು.
೨)ಐ ಟಿ ಐ ಯನ್ನು ಪಿ.ಯು.ಸಿ ಗೆ ಸಮಾನಾಂತರ ಗೊಳಿಸುವುದು:
ಪಿ.ಯು.ಸಿ ಮತ್ತು ಐ ಟಿ ಐ ಈ ಎರಡೂ ಕೋರ್ಸ್‌ಗಳ ಕಾಲಾವಕಾಶ ಎರಡು ವರ್ಷಗಳಿದ್ದು, ಹಾಗೂ ಈ ಎರಡೂ ಕೋರ್ಸ್‌ಗಳು ಎಸ್.ಎಸ್.ಎಲ್.ಸಿ ನಂತರ ಮಾಡಬಹುದಾಗಿದ್ದು, ಅದಕ್ಕಾಗಿ ಐ ಟಿ ಐ ಕೋರ್ಸ್ ಅನ್ನು ಪಿ.ಯು.ಸಿ. ಗೆ ಸಮಾನಾಂತರ ಗೊಳಿಸುವುದರಿಂದ ವಿಧ್ಯಾರ್ಥಿಗಳಿಗೆ ಪದವಿ ಶಿಕ್ಷಣಕ್ಕೆ ಹಾಗೂ ಇನ್ನಿತರ ಕೋರ್ಸ್ ಗಳಿಗೆ ಅರ್ಹತೆ ಸಿಗುತ್ತದೆ.
೩)ಎಸ್.ಸಿ.ವಿ.ಟಿ ಸರ್ಟಿಫಿಕೇಟಿಗೆ ಎನ್.ಸಿ.ವಿ.ಟಿ ಸರ್ಟಿಫಿಕೇಟಿನಂತೆ ಸಮಾನತೆ ಗೊಳಿಸುವುದು:
ಎಸ್.ಸಿ.ವಿ.ಟಿ. ಸರ್ಟಿಫಿಕೇಟನ್ನು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಇಲಾಖೆಯಿಂದ ವಿತರಿಸಲಾಗುವುದು. ಹಾಗೂ ಅದೇ ರೀತಿ ಎನ್.ಸಿ.ವಿ.ಟಿ. ಸರ್ಟಿಫಿಕೇಟನ್ನು ಕೇಂದ್ರ ಸರಕಾರದ ಉನ್ನತ ಶಿಕ್ಷಣ ಇಲಾಖೆಯಿಂದ ವಿತರಿಸಲಾಗುವುದು. ಆದರೆ ಸರಕಾರದಿಂದ ಕರೆಯಲ್ಪಡುವ ಯಾವುದೇ ರೀತಿ ಸರಕಾರದ ಹುದ್ದೆಗಳಿಗೆ ಕೇವಲ ಎನ್.ಸಿ.ವಿ.ಟಿ ಸರ್ಟಿಫೀಕೆಟಿನ ಮಾನ್ಯತೆ ಇರುವುದರಿಂದ ಎಸ್.ಸಿ.ವಿ.ಟಿ ಸರ್ಟಿಫಿಕೇಟಿಗೆ ಬೆಲೆ ಇಲ್ಲದಂತಾಗಿದೆ. ಅದಕ್ಕಾಗಿ ಎಸ್.ಸಿ.ವಿ.ಟಿ ಸರ್ಟಿಫಿಕೇಟ್ ಅನ್ನು ಎನ್.ಸಿ.ವಿ.ಟಿ ಸರ್ಟಿಪೀಕೆಟಿಗೆ ಸಮಾನಗೊಳಿಸಬೇಕು.
೪)ಬಸ್ ಪಾಸಿಗೆ ವಯೋಮಿತಿಯನ್ನು ೪೨ ಕ್ಕೆ ಹೆಚ್ಚಿಸುವುದು:
ಐ ಟಿ ಐ ಕೋರ್ಸ್‌ಅನ್ನು ೩೦ ರಿಂದ ೪೦ ವರ್ಷ ಮೇಲ್ಪಟ್ಟವರು ಕೂಡ ಮಾಡುವದರಿಂದ ಅವರಿಗೂ ಸಹ ಬಸ್ ಪಾಸಿನ ದರದಲ್ಲಿ ರಿಯಾಯಿತಿಯನ್ನು ನೀಡಿ ಹಾಗೂ ವಯೋಮಿತಿಯನ್ನು ೪೨ ಕ್ಕೆ ಹೆಚ್ಚಿಸುವುದು.
೫)ಲೈನ್ ಮನ್ ಹುದ್ದೆಗೆ ಕೇವಲ ಐ ಟಿ ಐ ಪಾಸಾದವರಿಗೆ ಮಾತ್ರ ಅವಕಾಶ ಕೊಡುವುದು:
ಇತ್ತೀಚೆಗೆ ಕೆ.ಇ.ಬಿ ಯಿಂದ ಕರೆಯಲ್ಪಡುವ ಲೈನ್ ಮನ್ ಹುದ್ದೆಗೆ ಪಿ.ಯು.ಸಿ ಮತ್ತು ಎಸ್.ಎಸ್.ಎಲ್.ಸಿ ಆದವರನ್ನು ನೇಮಕ ಮಾಡಿಕೊಳ್ಳುತ್ತಿದ್ದು, ಐ ಟಿ ಐ ಮಾಡಿದ ವಿಧ್ಯಾರ್ಥಿಗಳಿಗೆ ಇದರಿಂದ ಯಾವುದೇ ರೀತಿಯ ಅವಕಾಶ ಸಿಗುತ್ತಿಲ್ಲ. ತಮ್ಮ ಸಾಮಥ್ಯಕ್ಕೆ ತಕ್ಕಂತೆ ಸಿಗಬೇಕಾದ ಹುದ್ದೆಗಳು ಬೇರೆಯವರ ಕೈವಶ ವಾಗುತ್ತಿವೆ. ಆದ್ದರಿಂದ ಕೇವಲ ಐ ಟಿ ಐ ಪಾಸಾಗಿ ಅದರಲ್ಲಿ ತಜ್ಞ ಹೊಂದಿದವರಿಗೆ ಮಾತ್ರ ಲೈನ್ ಮನ್ ಹುದ್ದೆಯನ್ನು ಕೊಡಬೇಕು.
೬)ಖಾಸಗಿ ಐ ಟಿ ಐ ಕಾಲೇಜಿನ ಅಲ್ಪಸಂಖ್ಯಾತರ ಹಾಗೂ ಎಸ್.ಸಿ. ಮತ್ತು ಎಸ್. ಟಿ. ವಿಧ್ಯಾರ್ಥಿಗಳಿಗೆ ಉಚಿತವಾಗಿ ಟೂಲ್ಸ್ ಕಿಟ್ ಒದಗಿಸುವುದು:
ಸರಕಾರಿ ಐ ಟಿ ಐ ಕಾಲೇಜಿನಲ್ಲಿ ಟೂಲ್ಸ್ ಕಿಟ್ ಅನ್ನು ಉಚಿತವಾಗಿ ಹೇಗೆ ನೀಡುತ್ತಿರುವರೊ ಹಾಗೆ ಖಾಸಗಿ ಐ ಟಿ ಐ ಕಾಲೇಜಿನಲ್ಲಿ ಇರುವ ಅಲ್ಪ ಸಂಖ್ಯಾತರ ಹಾಗೂ ಎಸ್.ಸಿ. ಮತ್ತು ಎಸ್. ಟಿ. ವಿಧ್ಯಾರ್ಥಿಗಳಿಗೆ ಉಚಿತವಾಗಿ ಸರಕಾರದಿಂದ ಟೂಲ್ಸ್ ಕಿಟ್ ಒದಗಿಸಿಕೊಡಬೇಕು.
ಹೋರಾಟದ ನೇತ್ರೃತ್ವವನ್ನು ನಗರ ಕಾರ್ಯದರ್ಶಿ ಸಂಕೇತ್ ಪಾಟೀಲ್, ಮೌನೇಶ್ ಕಮ್ಮಾರ್,ಲಿಂಗರಾಜ್, ಮಲ್ಲಿಕಾರ್ಜುನ್,ಹನುಮೇಶ್ ಮರಡಿ,ಆನಂದ್ ಆಷ್ರಿತ್,ನೂರ್ ಅಹಮದ್, ರಾಕೇಶ ಪಾನಘಂಟಿ ವಹಿಸಿದ್ದರು
0 comments:
Post a Comment