PLEASE LOGIN TO KANNADANET.COM FOR REGULAR NEWS-UPDATES

 ಕೊಪ್ಪಳ ನಗರದಲ್ಲಿ ಘೋಷಿತ ಕೊಳಚೆ ಪ್ರದೇಶಗಳಲ್ಲಿ ಹಾಗೂ ನಗರದ ಎಲ್ಲಾ ಓಣಿಗಳಲ್ಲಿ ವಿಶೇಷ ಗಮನ ಹರಿಸಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು, ಕೊಳಚೆ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿ ಸಾರ್ವಜನಿಕರಿಗೆ ಉಚಿತವಾಗಿ ನೀರು ಒದಗಿಸಬೇಕು.
ಸುಮಾರು ವರ್ಷಗಳ ಹಿಂದೆ ನಗರ ಸಭೆಯ ಸಭೆಯಲ್ಲಿ ನಿರ್ಣಯ ತೆಗೆದುಕೊಂಡು ಕೊಳಚೆ ಪ್ರದೇಶಗಳೆಂದು ಘೋಷಣೆಗಾಗಿ ಕಾದಿರುವ ಕೊಳಚೆ ಪ್ರದೇಶಗಳನ್ನು ತೀವ್ರವಾಗಿ ಜಿಲ್ಲಾಧಿಕಾರಿಗಳು ಘೋಷಿಸುವಂತೆ ಪ್ರಕ್ರಿಯೆ ನಡೆಸಲು ಈಗಾಗಲೇ ನಗರಸಭೆಗೆ ಸುಮಾರು ಬಾರಿ ಮನವಿ ಪತ್ರಗಳನ್ನು ನೀಡಿ ಎಚ್ಚರಿಸುತ್ತ ಬಂದಿದ್ದರೂ ಜಿಲ್ಲಾಧಿಕಾರಿಗಳಿಂದ ಘೋಷಣೆ ಮಾಡಿಸಲು ಪರಿಣಾಮಕಾರಿ ಯಾವ ಪ್ರಯತ್ನವೂ ನಡೆಸಿಲ್ಲ ಈಗಾದರೂ ತಾವು ತಕ್ಷಣ ಪ್ರಕ್ರಿಯೆ ನಡೆಸಬೇಕು.
ನಗರದಲ್ಲಿ ಬಿಡಾಡಿ ದನಗಳ ಹಾವಳಿ ಸುಮಾರು ವರ್ಷಗಳಿಂದ ನಡೆಯುತ್ತಿದ್ದರೂ ಅನೇಕ ಬಾರಿ ಪ್ರತಿಭಟನೆ ಮಾಡಿ ಮನವಿ ನೀಡಿದ್ದರು ನಗರಸಭೆ ಕನಿಷ್ಟ ಕ್ರಮಕೈಗೊಳ್ಳಲಾಗುತ್ತಿಲ್ಲ. ಜೆ.ಪಿ ಕಾಯಿಪಲ್ಲೆ ಮಾರ್ಕೆಟ್ ತಿಂಗಳ ಹಿಂದೆ ಬಿಡಾಡಿ ದನ ವೃದ್ಧೆಯೊಬ್ಬಳಿಗೆ ಹಾಯಿದದ್ದರಿಂದ ವಾರದೊಳಗೆ ಮೃತಪಡಿದ್ದಾಳೆ. ಬಿಡಾಡಿ ದನಗಳು ಜಗಳವಾಡಿ ಅಲ್ಲಲ್ಲಿ ವಾಹನ ಬಿದ್ದು, ಅದರ ಉಪಕರಣಗಳ ಮುರಿದು ನಷ್ಟವಾಗುತ್ತಿವೆ. ಪ್ರಮುಖ ರಸ್ತೆಗಳು, ರಾಷ್ಟ್ರೀಯ ಹೆದ್ದಾರಿಗಳ ಮಧ್ಯದಲ್ಲಿ ಕುಳಿದುಕೊಂಡಿದ್ದರಿಂದ ದನಗಳನ್ನು ಉಳಿಸಲು ಹೋಗಿ ಜನರಿಗೆ ಡಿಕ್ಕಿ ಹೊಂಡ ಉದಾಹರಣೆಗಳ ಇವೆ. ಅನೇಕ ಬಾರಿ ಪತ್ರಿಕೆಗಳಲ್ಲಿ ಬಂದರೂ ನಗರಸಭೆಯ ಯಾವ ಸದಸ್ಯರೂ ಧ್ವನಿ ಎತ್ತುತ್ತಿಲ್ಲ. ಅಧಿಕಾರಿಗಳು ಕಣ್ಣು-ಕಿವಿ ಮುಚ್ಚಿಕೊಂಡಿದ್ದಾರೆ. ಈಗಾಗಲೂ ಎಚ್ಚತ್ತು ಪರಿಣಾಮಕಾರಿ ಕ್ರಮಕೈಗೊಳ್ಳಬೇಕು.
ನಗರದ ಕಾಯಿಪಲ್ಲೆ (ಜೆಪಿ) ಮಾರ್ಕೆಟ್‌ನ ಕಾಮಗಾರಿ ಸುಮಾರು ವರ್ಷಗಳಿಂದ ಸ್ಥಗಿತಗೊಂಡಿದ್ದು, ನಗರಸಭೆ ಸದಸ್ಯರು, ಅಧ್ಯಕ್ಷರು, ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಯಾರು ಅಭಿವೃದ್ಧಿಗೆ ಗಮನ ಕೊಡುತ್ತಿಲ್ಲ. ಇದ್ದ ಮಾರ್ಕೆಟ್ ಹಾಳು ಮಾಡಿ ಕಾಯಿಪಲ್ಲೆ ವ್ಯಾಪಾರಸ್ಥರಿಗೆ ಬೀದಿಪಾಲು ಮಾಡಿದ್ದು, ತಕ್ಷಣ ಮಾರ್ಕೆಟ್ ಕಾಮಗಾರಿಗೆ ಕ್ರಮಕೈಗೊಳ್ಳಬೇಕು.
ನಗರದ ರಸ್ತೆಗಳಲ್ಲಿ ವೇಗ ನಿಯಂತ್ರಕ (ಉಬ್ಬು-ತಗ್ಗು)ಗಳನ್ನು ನಿರ್ಮಿಸಲು ಹೇಳಿದರೆ ನಗರಸಭೆ ಅವೈಜ್ಞಾನಿಕವಾಗಿ ನಿರ್ಮಿಸಿದ್ದು, ವಾಹನಗಳ ವೇಗ ನಿಯಂತ್ರಣದ ಬದಲು ಅಪಘಾತಗಳಾಗುವಂತೆ, ವಾಹನಗಳು ಸ್ಥಗಿತಗೊಳ್ಳುವಂತೆ ಯದ್ವಾ-ತದ್ವಾ ವೇಗ ನಿಯಂತ್ರಕ (ಉಬ್ಬು-ತಗ್ಗು)ಗಳನ್ನು ನಿರ್ಮಿಸಿದ್ದಾರೆ. ತಕ್ಷಣ ಅವುಗಳ ತೆಗೆದು ವೈಜ್ಞಾನಿಕ ಜ್ಞಾನವುಳ್ಳ ಅಭಿಯಂತರರಿಂದ ಹೈಕೋರ್ಟ್ ಆಶಯದಂತೆ ನಿರ್ಮಿಸಬೇಕು.
ನಗರದಲ್ಲಿ ಸಮಗ್ರ ಸಮೀಕ್ಷೆ ನಡೆಸಿ ನಿವೇಶನ/ಮನೆ ಇಲ್ಲದವರಿಗೆ ಪತ್ತೆ ಹಚ್ಚಿ, ನಿವೇಶನಗಳನ್ನು ವಿತರಿಸಿ, ಮನೆ ನಿರ್ಮಿಸಿ ಕೊಡಬೇಕು. ನಗರದ ಸಾರ್ವಜನಿಕ ಶೌಚಾಲಯಗಳಲ್ಲಿ ನೀರಿನ ವ್ಯವಸ್ಥೆ ಮಾಡಿ, ಅವುಗಳ ನಿತ್ಯ ಸ್ವಚ್ಚತೆ ಕಾಪಾಡಲು ಕ್ರಮಕೈಗೊಳ್ಳಬೇಕು. ನಗರದಲ್ಲಿ ಗಟಾರಗಳು ಗಬ್ಬು ನಾರುತ್ತಿದ್ದು, ತಕ್ಷಣ ಗಟಾ ಸ್ವಚ್ಚತೆ ಮಾಡಿಸಬೇಕು, ಪ್ರತಿ ವಾರ್ಡಗಳಲ್ಲಿ ಸೊಳ್ಳೆಗಳ ವಿಪರಿತವಾಗಿದ್ದು,  ನಿಯಂತ್ರಣ ಮಾಡುತ್ತಿಲ್ಲ, ವಾರಕ್ಕೆ ೨ ಸಲ ಫಾಗೀಗ್ ಮಾಡಿಸಿ, ಚರಂಡಿಗಳ ಪಕ್ಕದಲ್ಲಿ ಬ್ಲಿಚಿಂಗ್ ಪೌಡರ್ ಸಿಂಪಡಿಸಬೇಕು. ಫ್ಲಕ್ಸ್ ಫಲಕಗಳಿಗೆ ಯಾವ ನಿರ್ಬಂಧನೆಗಳ ಇಲ್ಲ, ಪ್ಲಾಸ್ಟಿಕ್ ನಿಷೇದವನ್ನು ಕಟ್ಟು ನಿಟ್ಟಾಗಿ ಜಾರಿ ಮಾಡಿಲ್ಲ.
ಕೊಪ್ಪಳ ನಗರಕ್ಕೆ ಪೂರೈಕೆಯಾಗುತ್ತಿರುವ ತುಂಗಭದ್ರ ನದಿಯ ನೀರಿನಲ್ಲಿ ಕಬ್ಬಿನ ಕಾರ್ಖಾನೆಗಳ ತ್ಯಾಜ್ಯ ಬೇರೆತು ಬರುತ್ತಿರುವದರಿಂದ ಮಲಿನಗೊಂಡ ನೀರು ಕುಡಿಯಲು ಯೋಗ್ಯವಲ್ಲ, ತ್ಯಾಜ್ಯ ಬೇರೆತ ನೀರನ್ನು ಶುದ್ಧಕರಿಸಿ ಪೂರೈಸಬೇಕು. ನಳಗಳಿಗೆ ಮೀಟರ್ ಅಳವಡಿಸುವ ಪ್ರಯತ್ನವನ್ನು ಕೈಬಿಡಬೇಕು.
ಪೌರಾಯುಕ್ತರು ಆಯಾ ವಾರ್ಡಿನ ಸದಸ್ಯರ ಸಮ್ಮುಖದಲ್ಲಿ ತಿಂಗಳಿಗೊಮ್ಮೆಯಂತೆ ಸಾರ್ವಜನಿಕರ ವಾರ್ಡ್ ಸಭೆ ನಡೆಸಬೇಕು.  
ನಗರಸಭೆ ಮುಂದೆ ಧರಣಿ ನಡೆಸಿ ದುರಾಡಳಿತ ವಿರುದ್ಧ ಘೋಷಣೆ ಹಾಕಿ ಪ್ರತಿಭಟನೆ ನಡೆಸಲಾಯಿತು. ನಂತರ ಪೌರಾಯುಕ್ತರಾದ ರಮೇಶ ಪಟ್ಟೇದಾರ ಅವರಿಗೆ ಮನವಿ ಪತ್ರ ಅಪ್ಪಿಸಿದರು. 

ಶಿವಮ್ಮ ಕಾಮನೂರ, ಶ್ರೀ ಗವಿಸಿದ್ಧೇಶ್ವರ ಹಮಾಲರ ಸಂಘದ  ಅಧ್ಯಕ್ಷ ನಿಂಗಪ್ಪ ದೊಡ್ಡಮನಿ, ಖಜಾಂಚಿ ಮಂಜುನಾಥ ದೊಡ್ಡಮನಿ, ವೀರ ಕನ್ನಡಿಗ ಯುವಕ ಸಂಘದ ಅಧ್ಯಕ್ಷ ಶಿವಾನಂದ ಹೊದ್ಲೂರ, ಜಿವಿಕೆ ಜಿಲ್ಲಾ ಸಂಚಾಲಕ ಬಸವರಾಜ ಪೂಜಾರ, ನಾಗರಾಜ ನಿಟ್ಟಾಲಿ, ಮಂಜುನಾಥ ಬಂಗ್ಲಿ, ರೈಹಮಾನ್ ಟೈಲರ್, ಎ.ವಹಾಬ್, ಕೃಷ್ಣ ಶಾಸ್ತ್ರೀ ಮತ್ತಿತರರು ಭಾಗವಹಿಸಿದ್ದರು.

Advertisement

0 comments:

Post a Comment

 
Top