PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ : ದಿನಾಂಕ ೨೫.೧೧.೨೦೧೪ ರಂದು ಕುಕನೂರು ಗ್ರಾಮದ ಮಹಾಮಾಯ ದೇವಸ್ಥಾನದ ಆವರಣದಲ್ಲಿ  ಕೂಡಲ ಸಂಗಮ ಸುಕ್ಷೇತ್ರದಲ್ಲಿ ನಡೆಯುವ ೨೮ ನೇ ಶರಣ ಮೇಳದ ಪ್ರಚಾರಾರ್ಥ ಸಭೆಯ  ಅಧ್ಯಕ್ಷತೆಯನ್ನು ವಹಿಸಿದ್ದ ಯಲಬುರ್ಗಾ ತಾ.ಪಂ ಅಧ್ಯಕ್ಷೆ ಶ್ರೀಮತಿ ಶರಣೆ ಮಹಾದೇವಿ ಕಂಬಳಿ ಮತನಾಡುತ್ತಾ ಶರಣ ಮೇಳದಂತಹ ಕಾರ್ಯಕ್ರಮಗಳು, ಬಸವಾದಿ ಪ್ರಮಥರ ಚಿಂತನೆಗಳು ಹೆಚ್ಚು ಹೆಚ್ಚು ನಡೆದಲ್ಲಿ ಮನುಕುಲದ ಸರ್ವತೋಮುಖ ಅಭಿವೃದ್ದಿ ಸಾಧ್ಯವೆಂದು ಅಭಿಪ್ರಾಯ ಪಟ್ಟರು.  
ಸಾಮನ್ಯ ಜನರಲ್ಲಿ ಮನೆ ಮಾಡಿದ್ದ ಸ್ವಾರ್ಥ ಗುಣ ಇಂದು ಸ್ವಾಮಿ ಸನ್ಯಾಸಿಗಳನ್ನು ಬಿಡದೆ ಎಲ್ಲಾ ಕಡೆ ವ್ಯಾಪಿಸಿದ ಈ ಕಾಲದಲ್ಲಿ ಬಸವ ತತ್ವ ಪ್ರಚಾರಕ್ಕಾಗಿ ನಿಸ್ವಾರ್ಥ ಸೇವೆಯನ್ನು ತಮ್ಮ ೧೩ ನೇ ವಯಸ್ಸಿನಿಂದಲೆ ಪ್ರಾರಂಭಿಸಿ ಸುದೀರ್ಘ ಪ್ರಚಾರ ಮಾಡಿ ಇಂದು ದಿವ್ಯ ಸಾನಿಧ್ಯವನ್ನು ವಹಿಸಿದ್ದ ಪರಮಪೂಜ್ಯ ಜಗದ್ಗುರು ಮಾತೆ ಗಂಗಾದೇವಿಯರ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದು ನನ್ನ ಪುಣ್ಯ ಎಂಧು ನುಡಿದರು. ಹೆಣ್ಣು, ದೇವರ ಮುಂದಿನ ನಂದಾದೀಪವಾಗಬಲ್ಲಳು ಎಂಬ ನುಡಿಗೆ ಇಂದು ಮಾತೆಯವರು ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದರು. 
ಬದುಕಿನ ಜಂಜಾಟದಲ್ಲಿ  ದೇವರು, ಧರ್ಮ, ಆಧ್ಯಾತ್ಮ ಚಿಂತನೆಗಳನ್ನು ಮರೆತೆಹೊಗಿದ್ದ ನಮಗೆ ಇಂದು ಮಾತೆಯವರು ಅಕ್ಷರಷಹ ಮನ ಮಟ್ಟುವಂತೆ ನೆನಪು ಮಾಡಿ ಕೊಟ್ಟಿದ್ದಾರೆ ಅವರಿಗೆ ನಾನು ಸದಾ ಋಣಿಯಾಗಿರುತ್ತೇನೆ  ಎಂಧು ಹೇಳಿದರು. 
ಕಾರ್ಯಕ್ರಮವು ಧರ್ಮ ಗುರುವಿನ ಪೂಜೆಯನ್ನು ಅಕ್ಕನ ಬಳಗದವರಿಂದ ಪ್ರಾರಂಭಿಸಲಾಯಿತು. ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀ ಜಗದ್ಗುರು ಮಾತೆ ಗಂಗಾದೇವಿಯವರು ವಹಿಸಿದ್ದರು, ಅಧ್ಯಕ್ಷತೆಯನ್ನು ಮಹಾದೇವಿ ಕಂಬಳಿ ವಹಿಸಿದ್ದರು.    ಬಸವಷಟಸ್ಥಲ ದ್ವಜಾರೋಹಣವನ್ನು ಶರಣ  ಶೇಖರಪ್ಪ ಸಿ ವಾರದ ನೇರವೆರಿಸಿದರು. ಮುಖ್ಯ ಶರಣರಾದ ಎಮ್.ಎಸ್ ಹಿರೇಮಠರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು, ಅತಿಥಿಗಳಾಗಿ ಶರಣರಾದ ಧ್ಯಾಮಣ್ಣ ಜಮಖಂಡಿ, ಆರ್.ಪಿ ರಾಜೂರು, ಶಿವರುದ್ರಪ್ಪ ಜೋಳದ, ಸಿದ್ದಯ್ಯ ಕಳ್ಳಿಮಠ, ಪ್ರಕಾಶ ದೇಸಾಯಿ, ವಿಶ್ವನಾಥ ಹಿರೇಗೌಡ್ರ, ದವಲಸಾಬ ಕುದರಿ, ಉಪಸ್ಥಿತರಿದ್ದರು.  ಶರಣ ಜೋಡಪ್ಪ ಯತ್ನಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಶರಣ ಬಸಪ್ಪನವರು ಕವಲೂರು ಸ್ವಾಗತಿಸಿ ಶರಣು ಸಮರ್ಪಣೆ ಮಾಡಿದರು.  


ಪತ್ರಿಕಾ ಪ್ರಕಟಣೆಯಲ್ಲಿ 
     ಗವಿಸಿದ್ದಪ್ಪ ಯಕ್ಲಾಸಪೂರ  
   ೭೮೯೯೫೮೩೫೬೩  

Advertisement

0 comments:

Post a Comment

 
Top