PLEASE LOGIN TO KANNADANET.COM FOR REGULAR NEWS-UPDATES


ಸಂಸಾರದಿಂದ ಸದ್ದತಿ ಸಿಗದು ಸನ್ಮಾನ ಜೀವನವೇ ಶ್ರೇಷ್ಠರು ಎಂಬ ಭಾವನೆ ಬಳಷ್ಟು ಜನರಿದ್ದು ಆದರೆ ಸಂಸಾರ ಜೀವನದಲ್ಲಿ ಸತಿ ಪತಿಗಳು ಒಂದಾದ ಭಕ್ತಿಯ ಹಿತವಾಗಿಪ್ಪು ಶಿವಗಂಗೆ ಎಂಬುವಂತಹ ಜೀವನ ನಡೆಸಿದ ಹಡಪದ ಅಪ್ಪಣ್ಣ ಲಿಂಗಮ್ಮನವರು ಮನುಕುಲಕ್ಕೆ ಮಾದರಿ ಎಂದು ಬೀದರಿನ ಬಸವ ಸೇವಾ ಪ್ರತಿಷ್ಠಾನದ ಪರಮ ಪೂಜ್ಯಶ್ರೀ ಅಕ್ಕ ಅನ್ನಪೂರ್ಣ ತಾಯಿ ನುಡಿದರು. 
ನಗರದ ಗಣೇಶ ನಗರದಲ್ಲಿ ಹಡಪದ ಅಪ್ಪಣ್ಣನವರ ಯುವಕ ಸಂಘದಿಂದ ಹಾಗೂ ವಿಶ್ವ ಗುರು ಬಸವೇಶ್ವರ ಟ್ರಸ್ಟ ಸಯೋಗದಲ್ಲಿ ಜರುಗಿದೆ ೨೦ನೇ ವಚನನುಭವ ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿ ಮಾತನಾಡಿದ ಅವರು ಮೇಲಿನಂತೆ  ನುಡಿದರು ಮುಂದುವರೆದು ಮಾತನಾಡಿದ ಅವರು ಗಂಡ-ಹೆಂಡತಿಯರು ಕೂಡಿ ಬಾಳಿದರೆ ಸ್ವರ್ಗ ಸು:ಖ ಎನ್ನುವ ಮಾತನ್ನು ನಿಜ ಮಾಡಿದವರು ನಿಜ ಸು:ಖಿ ಅಪ್ಪಣ ಮತ್ತು ನಿಜ ಮುಕ್ತಿ ಲಿಂಗಮ್ಮ ತಾಯಿ ಕಾಯಕದಿಂದ ಗುರುತಿಸಿಕೊಳ್ಳುತ್ತಿದ ಅವರು ರಚಿಸಿದ ವಚನಗಳನ್ನು ಇಂದು ಡಾಕ್ಟರೇಟ್ ಪದವಿ ಪಡೆದುಕೊಳ್ಳುವವರು ಅಧ್ಯಾಯನ ಮಾಡಿ ಪದವಿಯನ್ನು ಪಡೆದುಕೊಂಡಿದ್ದರು ಅಂದರೆ ಲೋಕಾನುಭವವನ್ನು ವಚನಗಳಲ್ಲಿ ಅದ್ಭುತವಾಗಿ ಹಿಡಿದಿಡುವ ಶಕ್ತಿ ವಚನ ಸಾಹಿತ್ತಯ ಮಾಡಿದೆ ಎಂದು ನುಡಿದರು. ವಾರ್ಡಿನ ಸದಸ್ಯ ಪ್ರಾಣೇಶ ಮಾದಿನೂರು ಮಾತನಾಡಿ ಶರಣರ ಜೀವನ- ತತ್ವವನ್ನು  ಸಂದೇಶಗಳು ಸಾರ್ವಕಾಲಿವಾದವುಗಳು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು ಮಾಜೀ ನಗರಸಭೆ ಸದಸ್ಯರಾದ ಜಾಕೀರ ಹುಸೇನ್ ಕಿಲ್ಲೆದಾರ್, ರವಿಚೇಂದ್ರ ಪಾಟೀಲ್ ವಿಶ್ವಗುರು ಬಸವೇಶ್ವರ ಟ್ರಸ್ಟಿನ ಅಧ್ಯಕ್ಷರಾದ ಬಸವರಾಜಪ್ಪ ಎಮ್, ಶರಣಪ್ಪ ದದೇಗಲ್, ಶೇಖಪ್ಪ ಕುಕನೂರು, ನಿಂಗಪ್ಪ ಹಂದ್ರಾಳ, ದುರಗೇಶಪ್ಪ ಹುರಿಗೆಜ್ಜಿ, ವೇದಿಕೆಯಲ್ಲಿ ಇದ್ದರು ಬಸಪ್ಪ ಹಲಗೇರಿ, ರಮೇಶ ಚಟ್ನಿಹಾಳ, ಶರಣಪ್ಪ ಇಟಗಿ, ಚೇಂದ್ರು ಬೆಣಕಲ್ಲ, ಮೌನೇಶ ಹಡಪದ, ಶಂಕರ ಕಿತ್ತೂರು ಸಿದ್ದಮ್ಮ ದದೇಗಲ್, ನಿರ್ಮಾಲ ಬೆಣಕಲ್ ಇನ್ನೂ ಅನೇಕ ಶರಣ ಶರಣಿಯರು ಭಾಗವಹಿಸಿದ್ದರು. ಶರಣ ಮಹೇಶ ಮಾದಿನೂರು ನಿರೂಪಿಸಿದರು, ಶರಣ ದ್ಯಾಮಣ್ಣ ಮಾದಿನೂರು ಸ್ವಾಗತಿಸಿದರು ಯುವಕ ಸಂಘದ ತಾಲೂಕ ಅಧ್ಯಕ್ಷರು ಮಂಜುನಾಥ ಹಂದ್ರಾಳ ವಂದಿಸಿದರು.ರಾಜೇಶ ಸಸಿಮಠ ಪ್ರಾಸ್ಥವಿಕವಾಗಿ ಮಾತನಾಡಿದರು.

Advertisement

0 comments:

Post a Comment

 
Top