ಕೊಪ್ಪಳ : ಜೀವವನ್ನು ಉಳಿಸಲು ಹಗಲಿರಳು ಶ್ರಮಿಸುತ್ತಿರುವ ರೆಡ್‌ಕ್ರಾಸ್ ಸಂಸ್ಥೆ ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸುತ್ತರುವದು ಶ್ಲಾಘನೀಯ ಎಂದು ಜಿಲ್ಲಾ ಅಪರ ಜಿಲ್ಲಾ ದಂಡಾಧಿಕಾರಿಗಳು ಆದ ಡಾ: ಸುರೇಶ ಇಟ್ನಾಳ ಹೇಳಿದ ಅವರು ರೆಡ್‌ಕ್ರಾಸ್ ಸಂಸ್ಥೆ ನಾಲ್ಕು ಪ್ರಮುಖ ದ್ಯೆಯೋದ್ಯೆಶಗಳನ್ನು ಒಳಗೊಂಡಿದೆ ಅಪಘಾತ ಸಂಭವಿಸಿದ ಸಂಧರ್ಭದಲ್ಲಿ ,ಪ್ರವಾಹ ,ಕ್ಷಾಮ,ವಿಪ್ಪತ್ತು ನಿರ್ವಹಣೆಯಲ್ಲಿ ರೆಡ್‌ಕ್ರಾಸ್ ಸಂಸ್ಥೆ ಕೆಲಸ ಮಾಡುತ್ತಿರುವದು ಸಂತಷ ದಾಯಕ ವಿಷಯ ಅದೇ ರೀತಿ ಯುವ ಜನತೆ ರಕ್ತದಾನ ಮಾಡುವದು ಮುಂದೆ ಬಂದಾಗ ಇಂತಹ ಸಂಸ್ಥೆಗಳು ಕೆಲಸ ನಿರ್ವಹಿಸಿದ್ದಕ್ಕು ಸಾರ್ಥಕವಾಗುತ್ತದೆ ಎಂದರು.
ನಂತರ ಅದ್ಯಕ್ಷರು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ,ಕರ್ನಾಟಕ ಜಿಲ್ಲಾ ಶಾಖೆ ,ಕೊಪ್ಪಳ ಡಾ: ಕೆ.ಜಿ.ಕುಲಕರ್ಣಿ ಮಾತನಾಡಿ ಈ ಸಂಸ್ಥೆಯು ಅಂತರಾಷ್ಟ್ರೀಯ ಸಂಸ್ಥೆಯಾಗಿದ್ದು ರಕ್ತದಾನ ಶಿಬಿರ ಸೇರಿದಂತೆ ಇನ್ನಿತರ ಸಮಾಜಿಕ ಸೇವೆಗಳನ್ನು ಮಾಡುತ್ತಿರುವ ಈ ಯುವ ಸಂಸ್ಥೆಗೆ ನಾವೆಲ್ಲರೂ ಕೈಜೋಡಿಸುವ ಅವಶ್ಯಕತೆ ಇದೆ ಪ್ರತಿಯೊಂದು ಗ್ರಾಮದಲ್ಲಿ ಜನರಿಗೆ ರಕ್ತದಾನದ ಕುರಿತು ಮಾಹಿತಿಯನ್ನ ನಿಡುವದರ ಮೂಲಕ ನಾವು ನೀವು ರಕ್ತದಾನ ಶಿಬಿರಗಳನ್ನು ಏರ್ಪಡಿಸಬೇಕು ಎಂದ ಅವರು ಯುವ ರೆಡ್‌ಕ್ರಾಸ್ ಸಂಸ್ಥೆಯು ಪ್ರತಿಯೊಂದು ಕಾರ್ಯದಲ್ಲಿ ಸೇವೆಗೆ ಸಿದ್ದರಾಗಲು ದೊಡ್ಡ ಸೈನ್ಯವನ್ನೆ ನಿರ್ಮಿಸಿದಂತಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಕಾರ್ಯಕಾರಿ ಸಮಿತಿಯ ಸದಸ್ಯರಾದ ಡಾ : ಕೆ.ಬಿ.ಬ್ಯಾಳಿ ಮಾತನಾಡಿ ಇವತ್ತಿನ ದಿನಗಳಲ್ಲಿ ಆಪತ್ತಿನಲ್ಲಿರುವವರಿಗೆ ಸಹಾಯ ಮಾಡುವದು ಕಡಿಮೆ ಯಾಗಿದ್ದು ಇಂತಹ ಸಂಸ್ಥೆಗಳು ಯುವಕರಲ್ಲಿ ಸೇವಾ ಮನೋಭಾವಬೆ ಬೆಳಸಲು ಸಹಕಾರಿಯಾಗಿವೆ ಎಂದರು.
ಕಾರ್ಯಕ್ರಮ ಪ್ರಸ್ತಾವಿಕವಾಗಿ ರಾಷ್ಟೀಯ ಸೇವಾ ಯೋಜನೆಯ ಕಾರ್ಯಕ್ರಮಾದಿಕಾರಿಯಾದ ಕಾನೂನು ಮಹಾವಿದ್ಯಾಲಯದ ಉಪನ್ಯಾಸಕರಾದ ಶ್ರೀ ಬಸವರಾಜ್ ಎಸ್,ಎಂ. ಮಾತನಾಡಿ ರೆಡ್‌ಕ್ರಾಸ ಸಂಸ್ಥೆಯು ಒಂದನೂರ ಎಂಬತ್ತು ಮೂರಕ್ಕಿಂತ ಹೆಚ್ಚು ರಾಷ್ಟ್ರಗಳಲ್ಲಿ ಸೇವೆಸಲ್ಲಿಸುತ್ತಿದ್ದು ಭಾರತದಲ್ಲಿ ಸಹ ಅನೇಕ ವರ್ಷಗಳಿಂದ ಉತ್ತಮ ಕಾರ್ಯನಿರ್ವಹಿಸುತ್ತಿರುವದು ಶ್ಲಾಘನೀಯ ಎಂದು ಹೇಳಿದರು.
ಕಾರ್ಯಕ್ರವನ್ನು ಕಾಲೇಜಿನ ಪ್ರಾಚಾರ್ಯರರು ಆದ ಡಾ.ಬಿ.ಎಸ್.ಹನಸಿ ಸ್ವಾಗತಿಸಿದರು, ಉಪನ್ಯಾಸಕಿ ಉಷಾದೇವಿ ಹಿರೇಮಠ. ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ರೇಖಾ ಪ್ರಾರ್ಥಿಸಿದರು ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿನಿ ಮಾಹಾಲಕ್ಷ್ಮೀ ಮಾಡಿದರು ಕಾಲೇಜಿನ ವಿದ್ಯಾರ್ಥಿ ಪ್ರಧಾನ ಕಾರ್ಯದರ್ಶಿ ಕಳಕನಗೌಡ ಪಾಟೀಲ ವಂದಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿರಿದ್ದರು.
0 comments:
Post a Comment