ಕೊಪ್ಪಳ ಇಂದು ಧೂಳಿನ ನಗರಿಯಾಗಿದೆ. ಧೂಳಿನಿಂದ ಶ್ವಾಸಕೋಶ ಸಂಬಂಧಿ ಕಾಯಿಲೆಗಳು, ಧಮ್ಮು, ಅಸ್ತಮಾ, ಮುಂತಾದ ರೋಗಗಳು ಹರಡುತ್ತಿವೆ. ಇನ್ನೋಂದು ಕಡೆ ಕೊಳಕುನಾರುತ್ತಿರುವ ಚರಂಡಿಗಳು ದಿನಂಪ್ರತಿ ಡೆಂಗ್ಯೂ, ಮಲೇರಿಯಾ, ಚಿಕ್ಕನ್ ಗುನ್ಯದಂತಹ ಅಪಾಯಕಾರಿ ಸೊಳ್ಳೆಗಳ ಉತ್ಪತ್ತಿ ತಾಣವಾಗುತ್ತಿವೆ. ಇತ್ತೀಚಿಗೆ ಬಡಾವಣೆ ಯೊಂದರಲ್ಲಿ ವ್ಯಕ್ತಿ ಮ್ಯಾನ್ ಹೋಲ್‌ಗಾಗಿ ತೆಗೆದ ಗುಂಡಿಯೊಳಗೆ ಬಿದ್ದು ಸಾವನಪ್ಪಿರುವುದು ತುಂಬಾ ಆಘಾತಕಾರಿಯಾಗಿದೆ. ಕಳೆದ ವರ್ಷದಿಂದ ಪ್ರಾರಂಭ ವಾದ ಒಳಚರಂಡಿ ಯೋಜನೆ (ಯು.ಜಿ.ಡಿ) ಯು ಆಮೆ ವೇಗ ದಲ್ಲಿ ಸಾಗಿದೆ. ಅದಲ್ಲದೇ ಪಕ್ಕದಲ್ಲೇ ತುಂಗಭದ್ರ ನದಿ ಇದ್ದರು ಕೂಡಾ ನೀರಿನ ಬವಣೆ ಹೇಳತೀರದ ಸಮಸ್ಯಯಾಗಿದೆ.
ಇಂತಹ ಗಂಭೀರ ಸಮಸ್ಯೆಗಳು ತಾಂಡವವಾಡುತ್ತಿದ್ದರು ನಗರ ಸಭೆ ಇಂದು ಕಣ್ಣು ಮುಚ್ಚಿಕುಳಿತ್ತಿದೆ. ಈ ಕೂಡಲೇ ಎಚ್ಚೆತುಕೊಂಡು ನಗರಸಭೆ ಈ ಕೆಳಗಿನ ಎಲ್ಲಾ ಸಮಸ್ಯಗಳನ್ನು ಈಡೆರಿಸಬೇಕೆಂದು ಎ.ಐ.ಡಿ.ವೈ.ಓ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಷನ್ ಕೊಪ್ಪಳ ಜಿಲ್ಲಾ ಸಮಿತಿ ಆಗ್ರಹಿಸಿದೆ.
ಬೇಡಿಕೆಗಳು:
೧. ಕೊಪ್ಪಳ ನಗರದಲ್ಲಿ ಮುಖ್ಯರಸ್ತೆಗಳನ್ನು ಸೇರಿಸಿ ಎಲ್ಲಾ ಬಡಾವಣೆಗಳಲ್ಲಿ ಶೀಘ್ರವಾಗಿ ಹೊಸ ರಸ್ತೆಗಳನ್ನು ನಿರ್ಮಾಣ ಮಾಡಿ.
೨. ಕುಂಟುತ್ತಾ ಸಾಗಿರುವ ಒಳಚರಂಡಿ ಯೋಜನೆ (ಯು.ಜಿ.ಡಿ) ಪೂರ್ಣಗೊಳಿಸಿ ಕಾರ್ಯರೂಪಕ್ಕೆ ತನ್ನಿ.
೩. ಚರಂಡಿ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ಮಾಡಿದವರ ವಿರುದ್ದ ಕ್ರಮ ಕೈಗೊಳ್ಳಿ.
೪. ರಸ್ತೆ ಕಾಮಗಾರಿ ಮುಗಿಯುವವರೆಗೂ ಧೂಳನ್ನು ತಡೆಗಟ್ಟಲು ಎಲ್ಲಾ ರಸ್ತೆಗಳಿಗೆ ಕನಿಷ್ಠ ೫ ಭಾರಿ ನೀರನ್ನು ವೈಜ್ಞಾನಿಕವಾಗಿ ಸಿಂಪಡಿಸಿರಿ.
೫.ನೀರಿನ ಸಮಸ್ಯ ಬಗೆಹರಿಸಿ.
ಎಂದು ನಗರಸಭೆ ಆಯುಕ್ತರಿಗೆ ನೀಡಲಾದ ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ
ರಮೇಶ ವಂಕಲಕುಂಟಿ ಶರಣು ಗಿಣಿಗೇರಾ ಅಲ್ಲಮ ಪ್ರಭು ಬೆಟದೂರ
ಜಿಲ್ಲಾ ಕಾರ್ಯದರ್ಶಿ, ಸಂಘಟನಾಕಾರರು ಹಿರಿಯ ಸಾಹಿತಿಗಳು
ಎ ಐ ಡಿ ವೈ ಓ, ಕೊಪ್ಪಳ ಎ ಐ ಡಿ ವೈ ಓ, ಕೊಪ್ಪಳ ಕೊಪ್ಪಳ
ಉಪಸ್ಥಿತರಿದ್ದರು
0 comments:
Post a Comment