ರಾಷ್ಟ್ರಿಯ ಅಂಚೆ ಸಪ್ತಾಹದ ಕೊನೆಯ ದಿನವಾದ ಇಂದು ಕೊಪ್ಪಳದ ಪ್ರಧಾನ ಅಂಚೆ ಕಛೆರಿಗೆ ಸಂಸದ ಸಂಗಣ್ಣ ಕರಡಿಯವರು ಬೇಟಿ ನೀಡಿ ಅಂಚೆ ಕಛೇರಿಯಲ್ಲಿ ನಡೆಯುವ ವ್ಯವಹಾರ ಕಾರ್ಯವೈಖರಿಯನ್ನು ವಿಕ್ಷಿಸಿಸಿ ಮಾಹಿತಿ ಪಡೆದುಕೊಂಡರು. ಹಾಗೂ ಸಪ್ತಾಹದ ಕೊನೆಯ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಇಲಾಖೆ ಮತ್ತು ಸಿಬ್ಬಂದಿ ಕುರಿತು ಪ್ರಶಂಸಿದರು ಹಾಗೂ ನೌಕರರ ಕುಂದು ಕೊರತೆಗಳ ಬಗ್ಗೆ ಚರ್ಚಿಸಿದರು ಕೊಪ್ಪಳಕ್ಕೆ ವಿಭಾಗಧಿಕಾರಿಗಳ ಕಛೇರಿ, ಸಾರ್ಟಿಂಗ್ ಕಛೇರಿ ಹಾಗೂ ಅಂಚೆ ಕಛೇಯಲ್ಲಿ ರೈಲ್ವೆ ಮುಂಗಡ ಟಿಕೆಟ್ ಕೊಡುವ ಸೌಲಬ್ಯೆ ಒದಗಿಸುವ ಕುರಿತು ಸಂಬಂದಪಟ್ಟಿ ಅಧಿಕಾರಿಗಳೊಂದಿಗೆ ಚರ್ಚಿಸುವದಾಗಿ ಭರವಸೆ ನೀಡಿದರು
ಈ ಸಂದರ್ಭದಲ್ಲಿ ಜಿಲ್ಲಾ ಅಂಚೆ ಗ್ರಾಹಕ ವೇದಿಕೆಯ ಅಧ್ಯಕ್ಷರಾದ ಬಸವರಾಜ ಬಳ್ಳೊಳ್ಳಿ ಸದಸ್ಯರುಗಳಾದ ಆರ್.ಬಿ. ಪಾನಘಂಟಿ ವಕೀಲರು,ಜಿ.ಎಸ್.ಗೋನಾಳ, ಸರಕಾರಿ ಅಭಿಯೋಜಕರಾದ ವಿ.ಎಂ.ಭೂಸನೂರಮಠ್ ಉಪ ಅಂಚೆ ಅಧೀಕ್ಷರಾದ ಆರ್.ಎಸ್. ಮುದ್ದುಬಾವಿ ಅಂಚೆ ನಿರೀಕ್ಷರಾದ ಶ್ರೀನಿಧಿ, ರಾಜು ಭಾಕಳೆ, ಹಾಲೇಶ ಕಂದಾರಿ, ಪರಮಾನಂದ ಯಾಳಗಿ,ಬಸವರೆಡ್ಡಿ ಬೆಳವಿನಾಳ ಹಾಗೂ ಕಛೇರಿಯ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸರ್ವೊತ್ತಮ್ಮರವರು ಸ್ವಾಗತಿಸಿದರೆ ಕೊನೆಯಲ್ಲಿ ಅಂಚೆ ಪಾಲಕರಾದ ಎಚ್.ಕೆ.ನಿರಂಜನರವರು ವಂದಿಸಿದರು.
0 comments:
Post a Comment